ಲಂಡನ್ನಲ್ಲಿ ಕಾರ್ಲ್ ಮಾರ್ಕ್ಸ್ – ಒಂದು ಮೌನ ಪ್ರತಿಧ್ವನಿ
ಲಂಡನ್ ಪ್ರವಾಸ ಎನ್ನುವಾಗಲೇ ನನ್ನ ಮನಸ್ಸು ಜಗತ್ತಿಗೇ ಸಮಾನತೆಯ ಆಶಯವನ್ನು ಬಿತ್ತಿದ ಒಂದು ನೆನಪಿನ ನೆರಳನ್ನು ಹುಡುಕತೊಡಗಿತ್ತು – ಅದೇ ಕಾರ್ಲ್ ಮಾರ್ಕ್ಸ್ ಸಮಾಧಿ!! ಸೂರ್ಯ
-ಡಾ. ಲೀಲಾ ಸಂಪಿಗೆ
ಸೆಪ್ಟೆಂಬರ್, 4, 2025. ನಾನು ಮತ್ತು ಗೆಳೆಯ ಡಾ. ಗಿರೀಶ್ ಮೂಡ್, ಅವರ ಮಗ ರೋನಿತ್ ಮೂಡ್ ಹೈಗೇಟ್ ನತ್ತ ಹೆಜ್ಜೆ ಹಾಕಿದೆವು. ನನಗೋ ಒಳಗೊಳಗೇ ಭಾವುಕತೆ ತುಂಬಿತ್ತು. ಸಮಾಧಿಯತ್ತ ನಡೆಯುತ್ತಿದ್ದ ಹೆಜ್ಜೆಗಳು ನನೆಪಿನ ಮೂಸೆಯಿಂದ ತೆರೆದ ಮೌನದ ಒಂದು ಪುಸ್ತಕದ ಪುಟಗಳಂತೆ ಬಿಚ್ಚಿಕೊಳ್ಳುತ್ತಿದ್ದವು.
ನಾನು, ಜಯಕುಮಾರ್ ಬದುಕಿನ ಸಾಂಗತ್ಯವನ್ನು ನಿರ್ಧರಿಸಿದಾಗ, ಇದೇ ಮಾರ್ಕ್ಸ್ನ ಸಿದ್ಧಾಂತದ ಮುಂದೆ ಮಂಡಿಯೂರಿ ಕುಳಿತಿದ್ದೆವು. ಪ್ರವಾಹದ ವಿರುದ್ಧಈಜುವ ಶಕ್ತಿಯನ್ನು ಮೈಗೂಡಿಸಿಕೊಂಡಿದ್ದೆವು. ಕೈಗಳು ಮುಷ್ಠಿಯಾಗಿ “ಇಂಕ್ವಿ ಲಾಬ್ ಜಿಂದಾಬಾದ್” ಮೊಳಗಿಸಿದ್ದವು. ಬದುಕಷ್ಟೇಅಲ್ಲ; ಜಗತ್ತನ್ನೇಜಯಿಸುವ, ಸಮಾನತೆಯನ್ನು ಬಿತ್ತುವ ಶಕ್ತಿಯನ್ನು ನಮ್ಮೊಳಗೆ ಪ್ರವಹಿಸಿದ್ದು ಇದೇ ಮಾರ್ಕ್ಸ್ ಸಿದ್ಧಾಂತ. ಸೂರ್ಯ
ಈ ಮಾರ್ಕ್ಸ್ವಾದದ ಸಮಸಮಾಜದ ಬದ್ಧತೆಯೇ ನನ್ನನ್ನು ಸಮಾಜದ ಅಗೋಚರವಾದ, ಕಟ್ಟಕಡೆಯ ಲೈಂಗಿಕವೃತ್ತಿ ಮಹಿಳಾ ಸಮುದಾಯವನ್ನು ಸ್ಪರ್ಶಿಸಲು ಸಾಧ್ಯಮಾಡಿದ್ದು.. ಹಾಗೂ ನನಗೆ ಸಾಥ್ ನೀಡಿದ ಬಾಳಸಂಗಾತಿ ಜಯಕುಮಾರ್ರವರ ನಿಲುವುಗಳಿಗೆ ಗಟ್ಟಿಯಾದ ಅಡಿಪಾಯವೂ ಇದೇ ಕಾರ್ಲ್ ಮಾರ್ಕ್ಸ್ ಸಿದ್ಧಾಂತ. ಸೂರ್ಯ
ಇದನ್ನೂ ಓದಿ: ಮೆಡಿಕಲ್ ಮಾಫಿಯಾ! ಅದೆಷ್ಟು ಸತ್ಯ? ಅದೆಷ್ಟು ಮಿಥ್ಯ? – ಭಾಗ 2
ನೆನಪುಗಳು ನನ್ನಲ್ಲಿ ಇನ್ನಷ್ಟು ಉತ್ಸಾಹ ತುಂಬಿಸಿದ್ದವು. ಸಮಾಧಿ ಹತ್ತಿರವಾಗುತ್ತಿದ್ದಂತೆ.. ಮರಗಳ ನೆರಳಲ್ಲಿ ನೂರಾರು ಸಮಾಧಿಗಳ ಸಮ್ಮೇಳನದಲ್ಲಿ ಒಂದು ದೊಡ್ಡ ‘ಶಿಲಾಮೂರ್ತಿ’ ಗಮನ ಸೆಳೆಯಿತು. ಸೂರ್ಯ
ಅದು ಕೇವಲ ಶಿಲಾಮೂರ್ತಿಯಲ್ಲ; ಇಡೀ ಶತಮಾನಗಳ ಬದಲಾವಣೆಯ ಮೌನಸಾಕ್ಷಿ. ಹತ್ತಿರ ಹೋದೆ. ಬಹಳ ಸಹಜವಾಗಿಯೇ “ಲಾಲ್ ಸಲಾಂ ಕಾಂಮ್ರೇಡ್ ಕಾರ್ಲ್ಮಾರ್ಕ್ಸ್” ಉದ್ಘರಿಸಿದೆ. ಅರಿವಿಲ್ಲದೆಯೇ ನನ್ನ ಮುಷ್ಠಿ ಬಿಗಿಹಿಡಿದು ಅಭಿಮಾನದ ಆಪ್ತತೆ ತೋರಿದ್ದವು.
ಇಂಥದ್ದೊಂದು ಅವಿಸ್ಮರಣೀಯ ಘಳಿಗೆಗೆ ಜೊತೆಯಾಗಿದ್ದಡಾ. ಗಿರೀಶ್ ಮೂಡ್ರವರು, ಈಗ ತಾನೇ ಜಗತ್ತಿಗೆ ತೆರೆದುಕೊಳ್ಳಲು ಉನ್ನತ ವ್ಯಾಸಂಕ್ಕಾಗಿ ಜೊತೆಯಲ್ಲಿ ಬಂದಿದ್ದ ಅವರ ಮಗ ರೋನಿತ್ ಮೂಡ್ಗೆ ಕಾರ್ಲ್ ಮಾರ್ಕ್ಸ್ ಬಗ್ಗೆ ವಿವರಿಸುತ್ತಿದ್ದದನ್ನು ಕಂಡು ಮನಸ್ಸು ತುಂಬಿ ಬಂತು. ಅಂತರಾಷ್ಟ್ರೀಯ ಖ್ಯಾತಿಯ ಹೃದಯ ತಜ್ಞ ‘ದಾಸ್ ಕ್ಯಾಪಿಟಲ್’ ಪರಿಚಯಿಸುತ್ತಿದ್ದುದು ಸೋಜಿಗವೆನಿಸಿತು.
ಕಾರ್ಲ್ ಮಾರ್ಕ್ಸ್ ಸಮಾಧಿಯ ಆಂತರ್ಯವೇ ಅಲ್ಲಿ ಪ್ರತಿಬಿಂಬಿತವಾಗಿತ್ತು.
“WORKERS OF ALL LANDS UNITE”
“ಜಗತ್ತಿನ ಕಾರ್ಮಿಕರೇ ಒಗ್ಗಟ್ಟಾಗಿರಿ” ಘೋಷವಾಕ್ಯ ಗಂಭೀರವಾಗಿತ್ತು.
ಹೌದು! ಎತ್ತಣ ಮಾಮರ; ಎತ್ತಣ ಕೋಗಿಲೆ! ಸೂರ್ಯ ಅಸ್ತವಾಗದ ಸಾಮ್ರಾಜ್ಯದ ಹಪಾಹಪಿಯ ನೆರಳಲ್ಲಿ ಜಗತ್ತಿನ ಸಮಸಮಾಜದ ಕನಸುಗಳು, ಆ ಚಿಂತನೆಗೆ ಬೆಳಕು ಬಿತ್ತಿದ ಸಿದ್ಧಾಂತ ಹುಟ್ಟಿದ್ದಾದರೂ ಹೇಗೆ?
ಪತ್ನಿಜೆನ್ನಿ. ಕ್ರಾಂತಿಕಾರಿ ಬದುಕಿನ ನಿಶ್ಶಬ್ದ ಸಹಯಾತ್ರಿ, ಕನಸುಗಳಿಗಾಗಿ ಹೋರಾಡಿದತಲೆಮಾರಿನ ಸಂಕೇತವಾಗಿ ಹಿರಿಯ ಮಗಳು ಜೆನ್ನಿಕ್ಯಾರೋಲಿನ್, ಕಿರಿಯ ಮಗಳು ಎಲಿನಾರ್ ಮಾರ್ಕ್ಸ್, ಮನೆಯ ನೆರಳಿನಂತೆಯೇ ಬದುಕಿದ್ದ ಆಪ್ತ ಗೃಹಸಹಾಯಕಿ ಹೆಲನ್ ಡೆಮೂತ್ ದೇಹ ಮತ್ತು ಬದುಕುಗಳು ಕಾರ್ಲ್ ಮಾರ್ಕ್ಸ್ ರವರೊಂದಿಗೇ ಲೀನವಾಗಿದ್ದವು.
19ನೆಯ ಶತಮಾನದ ಯುರೋಪಿನಲ್ಲಿ 1848ರ ಕ್ರಾಂತಿಯ ಸಂದರ್ಭ ಕಾರ್ಲ್ ಮಾರ್ಕ್ಸ್ ವರು ರಾಜಕೀಯ ಮತ್ತು ಕ್ರಾಂತಿಕಾರಕ ಚಿಂತನೆಗಳನ್ನು ಬಿತ್ತುವಲ್ಲಿ ಸಕ್ರಿಯರಾಗಿದ್ದರು. ಅದೇ ಸಂದರ್ಭದಲ್ಲಿಯೇ ಜಗತ್ತಿಗೆ ಸಮ ಸಮಾಜ ಕಟ್ಟುವ ಆಶಯದ “ಕಮ್ಯುನಿಸ್ಟ್ ಮ್ಯಾನಿಫೆಸ್ಟೋ” (ಪ್ರಣಾಳಿಕೆ) ಪ್ರಕಟಿಸಿದರು.
ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾದವರು ದೇಶ ತೊರೆಯಬೇಕಾಯಿತು. ಅಲ್ಲಿಂದ ಫ್ರಾನ್ಸ್, ಫ್ರಾನ್ಸ್ನಿಂದ ಬೆಲ್ಜಿಯಂ ಹೀಗೆ ಎಲ್ಲ ದೇಶಗಳ ಅಸಮಾಧಾನ-ಅಸಹಕಾರದ ಕಾರಣಕ್ಕಾಗಿ ಜಗತ್ತಿನ ಬದುಕು ಕಟ್ಟಿಕೊಡಲು ಹೆಣಗಾಡುತ್ತಿದ್ದ ಹೋರಾಟಗಾರನಿಗೆ ಎಲ್ಲ ದೇಶಗಳೂ ಬಾಗಿಲು ಮುಚ್ಚಿದಾಗ ಬಂದಿಳಿದಿದ್ದೇ ಸಾಮ್ರಾಜ್ಯಶಾಹಿಗಳ ಹೃದಯಭೂಮಿ ಲಂಡನ್ನ ನಿಲ್ದಾಣದಲ್ಲಿ! ತನ್ನ ಮತ್ತು ಕುಟುಂಬದ ಅಸ್ತಂಗತವಾದದ್ದುಇದೇ ಲಂಡನ್ ನಲ್ಲಿಯೇ….ಆಹ್ವಾನವಿಲ್ಲ, ಆದರವಿಲ್ಲ, ಸಂಪತ್ತೂ ಇಲ್ಲವಾದರೂ ಅರಿವಿಲ್ಲದೆಯೇ ಮಹಾ ಚಿಂತಕನಿಗೆ ಚಿಂತನೆಯ ನೆಲೆ ನೀಡಿತ್ತು ಲಂಡನ್…. ಲಂಡನ್ ಇತಿಹಾಸದಲ್ಲಿ ಕಾರ್ಲ್ ಮಾರ್ಕ್ಸ್ ಆಶ್ರಯ ಒಂದು ವ್ಯಂಗ್ಯವೇ ಸರಿ.
ಆದರೂ ತನ್ನ ಚಿಂತನೆಗಳಿಗೆ ಕಾವುಕೊಟ್ಟಿದ್ದು ಬ್ರಿಟಿಷ್ ಗ್ರಂಥಾಲಯ ಮತ್ತು ಬ್ರಿಟಿಷ್ ಮ್ಯೂಸಿಯಂ. ಇಲ್ಲಿ ಕುಳಿತು ಗ್ರಂಥಾಲಯದಗ್ರAಥಸಾಗರದಲ್ಲಿ ಕುಳಿತು ಜಗತ್ತಿನಅಸಮಾನತೆಯ ವಿರುದ್ಧದ ಸಿದ್ಧಾಂತ ರೂಪಿಸಿದರು.
ಸೋಹೋ ನಂ. 28, ಡೀನ್ ಸ್ಟ್ರೀಟ್ನ ಸಣ್ಣ ಬಾಡಿಗೆ ಮನೆಗೆ ಕುಟುಂಬ ಸಮೇತ ಬಂದಿಳಿದ ಕಾರ್ಲ್ಮಾರ್ಕ್ಸ್ ಬದುಕು.. ಹಸಿವು-ಬಡತನವನ್ನೇ ಹಾಸಿ ಹೊದ್ದಿತ್ತು.
ಸೋಹೋ.. ಕಡಿಮೆ ಬಾಡಿಗೆಗೆ ಮನೆ ಸಿಗುತ್ತದೆ ಎನ್ನುವ ಒಂದು ಕಾರಣ ಬಿಟ್ಟರೆ, ಅತ್ಯಂತ ಕೊಳಚೆ ಪ್ರದೇಶವಾಗಿದ್ದ, ಎಲ್ಲ ವಿಧದ ಸಣ್ಣಪುಟ್ಟ ವ್ಯಾಪಾರ ಕೇಂದ್ರವಾಗಿದ್ದ ಸೋಹೋ ವಿಲಾಸಿತನಕ್ಕೆ, ವೇಶ್ಯಾವಾಟಿಕೆಗೂ ಈಗಲೂ ಪ್ರಸಿದ್ಧಿಯಾಗಿದೆ.
ಬಾಡಿಗೆಕಟ್ಟಲು ಸಾಧ್ಯವಾಗದ ದಿನಗಳು… ಮಕ್ಕಳಿಗೆ ಔಷಧಿ ಸಿಗದ ದಿನಗಳು, ತನ್ನ ಮೂವರು ಮಕ್ಕಳನ್ನು ಕಳೆದುಕೊಂಡ ದಿನಗಳು, ಬಡಕಾರ್ಮಿಕರು, ನಿರುದ್ಯೋಗಿ ಯುವಕರು, ಜೀವನಕ್ಕಾಗಿ ಹೋರಾಟ ಮಾಡುತ್ತಿದ್ದ ವೇಶ್ಯೆಯರು, ಸೋಹೋದಲ್ಲಿದ್ದ ಎಲ್ಲವೂ ಮಾರ್ಕ್ಸ್ಗೆ ಮನುಷ್ಯತ್ವದ ಬೆಳಕನ್ನು ನೀಡಿದ್ದವು. ಬಾಳಸಂಗಾತಿ ಜೆನ್ನಿ ಮಾರ್ಕ್ಸ್ ಬದುಕ ಪಯಣಕ್ಕೆ ಗಟ್ಟಿಯಾದ ಸಾಥ್ ನೀಡಿದ್ದರಿಂದಲೇ ಮಹಾನ್ ಚಿಂತಕನ ಚಿಂತನೆಗಳು ಮೊಳಕೆಯೊಡೆಯಲು ಸಾಧ್ಯವಾಗಿದ್ದು. ಸೋಹೋ ಒಂದು ಶೋಷಣೆಯ ರಂಗಮಂದಿರದಂತಿತ್ತು. ಇವರ ಬದುಕೇನೂ ಅದರಿಂದ ಹೊರತಾಗಿರಲಿಲ್ಲ.
ಹವ್ಯಾಸಿ ಪತ್ರಕರ್ತನಾಗಿ ಬರೆಯುತ್ತಿದ್ದ ಕೆಲವು ಲೇಖನಗಳಿಂದ ಬಂದ ಹಣದಿಂದ ಬದುಕಬಂಡಿಯನ್ನು ಸ್ವಲ್ಪವೇ ದೂಡುತ್ತಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಲ್ ಮಾರ್ಕ್ಸ್ ಬದುಕಲ್ಲಿ ಮರೆಯ ಬಾರದವರು ಅವರ ಅತ್ಯಾಪ್ತ ಗೆಳೆಯ ‘ಏಂಗೆಲ್ಸ್’. ತನಗಿದ್ದ ಸೈದ್ಧಾಂತಿಕ ಬದ್ಧತೆ ಮತ್ತು ಗೆಳೆತನದ ಆಪ್ತತೆ ಕಾರ್ಲ್ ಮಾರ್ಕ್ಸ್ ಜೀವನಕ್ಕೆ ದಿಕ್ಕಾಗಿತ್ತು. ಜಗತ್ತಿಗೇ ಆರ್ಥಿಕ ಸಮಾನತೆಯ ಸಮಸಮಾಜದ ಕನಸುಗಳ ಬುತ್ತಿ ಕಟ್ಟುತ್ತಿದ್ದ ಕಾರ್ಲ್ ಮಾರ್ಕ್ಸ್ ಕುಟುಂಬ ಬಡತನದ ಬೇಗೆಯಲ್ಲಿ ಕಪ್ಪಿಟ್ಟಿತ್ತು.
1883, ಮಾರ್ಚ್ 14 ಸಮಾನತೆಯ ಬೆಳಕು ನೀಡಿದ ಸೂರ್ಯಅಸ್ತಂಗತನಾಗಿದ್ದ. ಕಾರ್ಲ್ಮಾರ್ಕ್ಸ್ ಸರಳವಾದ ಸಮಾಧಿಯಲ್ಲಿ ಭೌತಿಕವಾಗಿ ಕಣ್ಮರೆಯಾದರು. 1954ರಲ್ಲಿ ಬ್ರಿಟಿಷ್ ಕಮ್ಯುನಿಸ್ಟ್ ಪಕ್ಷವು ಕಾರ್ಲ್ ಮಾರ್ಕ್ಸ್ ಸಮಾಧಿಯನ್ನು ಪುನಶ್ಚೇತನಗೊಳಿಸಿ ಆ ಮೂಲಕ ಮಾರ್ಕ್ಸ್ ಸಿದ್ಧಾಂತವನ್ನು ಎತ್ತಿಹಿಡಿದು ಜಗತ್ತಿಗೇ ತೆರೆದಿಟ್ಟರು. “WORKERS OF ALL LANDS UNITE” ಜಗಜ್ಜಾಹೀರು ಮಾಡಿದರು.
ಇದೇ ಸಮಾಧಿ ನಾನು ಸ್ಪರ್ಶಿಸಿದ ಲಂಡನ್ನ ಹೈಗೇಟ್.. ಏನೇ ಆಗಲಿ.. ಎಷ್ಟೋ ದೇಶಗಳಿಂದ ಹೊರದಬ್ಬಿಸಿಕೊಂಡು ಬಂದ ಆಶಯಗಳು, ಸೈದ್ಧಾಂತಿಕವಾಗಿ ಕ್ರಾಂತಿಕಾರಿ ಚಿಂತನೆಗಳು ಲಂಡನ್ನಲ್ಲಿ ಮೌನವಾಗಿ ಬೆಳಕ ಬಿತ್ತಿದವು. ಹಗಲುರಾತ್ರಿಗಳ ವ್ಯತ್ಯಾಸವಿಲ್ಲದೆ ಮೊಳಕೆಯೊಡೆದ ವಿಚಾರಗಳು “ದಾಸ್ ಕ್ಯಾಪಿಟಲ್” ಆಗಿ ವ್ಯವಸ್ಥೆಯ ಪೊರೆಯೊಡೆದು ಜಗತ್ತನ್ನು ಪ್ರವೇಶಿಸಲು ಅನುವು ಮಾಡಿಕೊಟ್ಟದ್ದುಇದೇ ಲಂಡನ್.
ಜಗತ್ತಿನ ಚಿಂತನೆಗೆ ಬೆಳಕು ಬಿತ್ತಿದ ಆಶಯಗಳಿಗೆ ಆಶ್ರಯಕೊಟ್ಟ ಲಂಡನ್ ಬಗ್ಗೆ ಭಾರತೀಯಳಾಗಿ ಎಲ್ಲ ಪರಿಮಿತಿಗಳ ನಡುವೆಯೂಒಂದುಕಕ್ಕುಲತೆಯ ಭಾವ ಹೊಮ್ಮಿತ್ತು.
ಇದನ್ನೂ ನೋಡಿ: ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೆಪಿಎಸ್ ವ್ಯವಸ್ಥೆ ಪರಿಹಾರವೋ? ಶಾಪವೋ? Janashakthi Media
