ದರ್ಶನ್ ಪ್ರಕರಣವೂ ಗಂಡಾಳ್ವಿಕೆಯ ನಡೆಗಳೂ

ಡಾ.ಕೆ.ಷರೀಫಾ

ಹಿಂದಿನಿಂದಲೂ ಮಹಿಳೆಯರೇ ಪುರುಷ ಪ್ರಾಧಾನ್ಯದ ಮೇಲಾಟಕ್ಕೆ, ಅವರ ಪೌರುಷ ಪ್ರದರ್ಶನಕ್ಕೆ ಮತ್ತು ಯುದ್ಧಗಳಿಗೆ ಕಾರಣರಾದವರೆಂಬ ಅಪವಾದ ಹೊತ್ತವರಾಗಿದ್ದಾರೆ. ಗಂಡಸರ ಅಹಂಕಾರದ ನಡೆಗೆ ಮಹಿಳೆಯರು ಹೊಣೆಗಾರರಾಗುತ್ತಿರುವ ದುರಂತ ನಮ್ಮಕಣ್ಣ ಮುಂದಿದೆ. ಸಮಾಜದ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಗಂಡಿನ ಯಜಮಾನಿಕೆಯನ್ನು ಮುಂದು ಮಾಡಿಕೊಂಡು ಬಂದಿವೆ. ಒಂದು ರೀತಿಯಲ್ಲಿ ನಮ್ಮ ಸಿನಿಮಾಗಳೇ ಇಂತಹ ಗಂಡಾಳ್ವಿಕೆಯ ನಡೆಗಳನ್ನು ಬೆಳೆಸುತ್ತಾ ಬಂದಿದೆ. ಕೊನೆಗೆ ಈ ಗಂಡಾಳ್ವಿಕೆಯ ನಡೆಯು ಗಂಡಸಿನ ಯಜಮಾನಿಕೆ ಕಾರಣವಾಗಿ ಕೊನೆಗೆ ಗಂಡುಗಳನ್ನೂ ಬಲಿ ಪಡೆಯುತ್ತದೆ. ಗಂಡಸಿನ ವಿಕೃತಿಗಳಿಗೆ ಹೆಣ್ಣನ್ನೇ ಅಸ್ತ್ರವಾಗಿ ಮಾಡಿಕೊಳ್ಳುತ್ತದೆ. ದರ್ಶನ್

ಲಿಂಗ ತಾರತಮ್ಯದ ನಡೆಗಳು ಸಮಾಜದಲ್ಲಿ ಎಗ್ಗಿಲ್ಲದೆ ನಡೆಯುತ್ತಿವೆ. ಪ್ರಜ್ವಲ್‌ ರೇವಣ್ಣನ ಪ್ರಕರಣ ಆಗಿರಬಹುದು ಅಥವಾ ಅದು ಜನಪ್ರಿಯ ನಟ ದರ್ಶನ್‌ನ ಪ್ರಕರಣವೇ ಆಗಿರಬಹುದು. ಈಗ ಅವರಿಬ್ಬರೂ ಜೈಲಿನಲ್ಲಿರುವುದು ವಾಸ್ತವ. ಹಿಂದಿನಿಂದಲೂ ಪೌರುಷದ ಪ್ರದರ್ಶನ ಗಂಡಸರು ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಅದು ಟ್ರಾಯ್ ನ ಸುಂದರಿ ಹೆಲನ್‌ ಆಗಿರಬಹುದು. ರಾಮಾಯಣದ ಸೀತೆ, ಮಂಥರೆ, ದ್ರೌಪದಿ, ಕೈಕಯಿ ಯಂಥಹ ಮಹಿಳೆಯರೆ ಆಗಿರಬಹುದು. ಅವರೆಲ್ಲ ಪುರುಷ ಪ್ರಾಧಾನ್ಯದ ಮೇಲಾಟಕ್ಕೆ, ಅವರ ಪೌರುಷ ಪ್ರದರ್ಶನಕ್ಕೆ ಮತ್ತು ಯುದ್ಧಗಳಿಗೆ ಕಾರಣರಾದವರೆಂಬ ಅಪವಾದ ಹೊತ್ತವರಾಗಿದ್ದಾರೆ.ಗಂಡಸರ ಅಹಂಕಾರದ ನಡೆಗೆ ಮಹಿಳೆಯರು ಹೊಣೆಗಾರರಾಗುತ್ತಿರುವ ದುರಂತ ನಮ್ಮ ಕಣ್ಣ ಮುಂದಿದೆ. ದರ್ಶನ್

ಆಧುನಿಕ ಭಾರತೀಯ ಸ್ತ್ರೀ ವಾದದ ಮೊದಲ ಚಿಂತಕಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಜಾತಿ ವ್ಯವಸ್ಥೆ ಮತ್ತು ಪಿತೃಪ್ರಧಾನ ವ್ಯವಸ್ಥೆಯನ್ನು ವಿರೋಧಿಸಿದ ಮಹಿಳಾ ವಾದಿಯಾದ ತಾರಾಬಾಯಿ ಶಿಂಧೆಯವರು 1882 ರಲ್ಲಿಯೇಬರೆದ “ಸ್ತ್ರೀ ಪುರುಷ ತುಲನಾ” ಎಂಬ ಕೃತಿಯಲ್ಲಿ ಸ್ತ್ರೀ ವಾದದ ಮೊಟ್ಟ ಮೊದಲ ಬಾರಿಗೆ ಪುರುಷ ಅಹಂಕಾರಕ್ಕೆ ಸವಾಲನ್ನು ಹಾಕಿದರು. ಸಮಾಜದಲ್ಲಿ ನಡೆಯುವ ಪ್ರತಿಯೊಂದು ಸಾಮಾಜಿಕ ಕೆಟ್ಟ ನಡೆಗಳಿಗೆ ಭಾರತದಲ್ಲಿ ಮಹಿಳೆಯರನ್ನೇ ಕಾರಣೀ ಭೂತಳನ್ನಾಗಿ ಮಾಡುತ್ತಿರುವುದನ್ನು ನೋಡಿದ ತಾರಾಬಾಯಿ ಶಿಂಧೆಯವರು “ಪುರುಷರು ಎಲ್ಲ ವಿಧದ ಸ್ವಾತಂತ್ರ ಮತ್ತು ಹಕ್ಕುಗಳನ್ನು ತಮ್ಮ ಕೈಯಲ್ಲಿಟ್ಟುಕೊಂಡು ಸಮಾಜದ ಎಲ್ಲರೀತಿಯ ಕೆಡಕುಗಳಿಗೆ ಮಹಿಳೆಯರನ್ನೇ ಹೊಣೆಗಾರರನ್ನಾಗಿ ಮಾಡಿದರು” ಎಂದು ಅತ್ಯಂತ ಧೈರ್ಯದಿಂದ ನುಡಿದವರು.

ಇದನ್ನೂ ಓದಿ: ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆಯನ್ನು ಶಾಶ್ವತವಾಗಿ ತಡೆಗಟ್ಟಿ – ಸಮಾನ ಮನಸ್ಕ ಸಂಘಟನೆಗಳ ಆಗ್ರಹ

ಹೀಗೆಂದು ದರ್ಶನ್ ಪ್ರಕರಣದಲ್ಲಿ ಪವಿತ್ರಾ ಗೌಡ ಅವರನ್ನು ಬೆಂಬಲಿಸುತ್ತಿಲ್ಲ. ಬದಲಾಗಿ 150 ವರ್ಷಗಳಷ್ಟು ಹಿಂದೆಯೇ ತಾರಾಬಾಯಿ ತನ್ನ ಕೃತಿಯಲ್ಲಿ ಪುರುಷನ ದುರಹಂಕಾರ, ಕುತಂತ್ರ, ಕಪಟ, ಹೆಣ್ಣಿನ ದೇಹ ಸುಖಕ್ಕಾಗಿ ಪುರುಷ ಪಡುವ ಪಡಿಪಾಟಲುಗಳನ್ನು ಮನೋಜ್ಞವಾಗಿ ನಿರೂಪಿಸಿದ್ದಾರೆ. ಹೆಂಡತಿ ಮಕ್ಕಳಿರುವ ನಾಯಕ ನಟನ ದುರಭ್ಯಾಸಗಳು, ಅನೈತಿಕತೆಯನ್ನು ರೂಢಿಸಿಕೊಂಡಿದ್ದರೂ ಕೂಡ ಅವನ  ಅಭಿಮಾನಿಗಳು ಅವನನ್ನು “ಅಯ್ಯೋ ಪಾಪ ಅವನಿಗೆ ಜೈಲಾಗಬಾರದಿತ್ತು” ಎನ್ನುತ್ತಿರುವಂತೆ ಪವಿತ್ರಾರನ್ನು ದೋಷಿಯಾಗಿ ಮಾಡುತ್ತಿರುವುದು ಸರಿಯೇ?.ಗಂಡನಿಗೆ ವಿಚ್ಛೇದನ ನೀಡಿರುವ ಪವಿತ್ರಾ ಒಂದು ಮಗುವಿನ ತಾಯಿ. ಹೆಂಡತಿ ಇದ್ದೂ, ಒಬ್ಬ ಮಗ ಇದ್ದೂ ಹೀಗೆ ಮಾಡುತ್ತಿರುವ ದರ್ಶನನ ನಡೆ ಸರಿಯೇ? ಎಂಬುದನ್ನು ಗಮನಿಸಬೇಕಿದೆ. ದರ್ಶನ್

ದರ್ಶನ್ ಪ್ರಕರಣದಲ್ಲಿ ಪವಿತ್ರಾ ಗೌಡ ಅವರಿಗೆ ಯಾರೋ ಚಿತ್ರದುರ್ಗದ ತಿಕ್ಕಲು ರೇಣುಕಾ ಸ್ವಾಮಿ ಕಳಿಸಿದ್ದ ಅವನ ಮರ್ಮಾಂಗದ ಫೋಟೋದ ಹೀನ ಕಾರ್ಯಕ್ಕೆ ದರ್ಶನನ ಅಂಧಾಭಿಮಾನಿಯ ಕೆಲಸ ಇದಾಗಿದೆ. ಇವನು ಆರ್.ಎಸ್.ಎಸ್. ಶಾಖೆಯಿಂದ ಬಂದವನಾಗಿದ್ದರೂ ಇಂತಹ ಹೀನ ಕೆಲಸ ಮಾಡಿದ್ದಾನೆ. ಅವನು ಮಾಡಿದ ಈ ಕಾರಣಕ್ಕೆ ಅವನನ್ನು ಕೊಲೆ ಮಾಡಬಹುದೇ? ಅಷ್ಟಕ್ಕೂ ಪವಿತ್ರಾ ಗೌಡ ಅವರು ತನ್ನ ಮೊಬೈಲಿಗೆ ಅಶ್ಲೀಲ ಚಿತ್ರ ಕಳಿಸುತ್ತಿದ್ದ ರೇಣುಕಾ ಸ್ವಾಮಿಯ ನಂಬರನ್ನು ಬ್ಲಾಕ್ ಮಾಡಬಹುದಿತ್ತು. ಅದು ಅವಳ ಕೈಯಲ್ಲಿಯೇ ಇತ್ತು. ಅದನ್ನು ಬಿಟ್ಟುಇಷ್ಟೊಂದು ದೊಡ್ಡ ಘಟನೆಗೆ ಕಾರಣಳಾದಳೆಂಬ ಅಪವಾದವನ್ನು ಹೊತ್ತು ಈಗ ಆರೋಪಿ ನಂ.1 ಆಗಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ದರ್ಶನನ ದುರಂಕಾರ ಇಂದು ನಿನ್ನೆಯದಲ್ಲ. ಹಿಂದೆಯೂ ಅವನ  ಪತ್ನಿ ವಿಜಯಲಕ್ಷ್ಮಿ ತನ್ನ ಗಂಡ ತನ್ನನ್ನು ಹೊಡೆಯುವುದು ಹಿಂಸಿಸುವುದನ್ನು ಮಾಡಿದ್ದರ ವಿರುದ್ಧ ಪೋಲೀಸ್‌ ಠಾಣೆಗೂ ಹೋಗಿದ್ದರು. ಗಂಡಸರು ತಮ್ಮಅಹಂಕಾರ, ಮತ್ತು ಸೇಡಿನ ಮನೋಭಾವವನ್ನು ನಿಯಂತ್ರಿಸದೇ ಹೋದರೆ, ಗಂಡಸರೆಂದರೆ ಪೌರುಷ, ದುರಹಂಕಾರದ ಮೀಸೆ ಹೊತ್ತವರು. ಅವರು ಶ್ರೇಷ್ಟತೆಯ ವ್ಯಸನವನ್ನು ಬಿಟ್ಟು ನಿಜದ ಮನುಷ್ಯರಾಗ ಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ.

ಈ ಘಟನೆಯಲ್ಲಿ ಸತ್ತವನೂ ಒಬ್ಬ ಪುರುಷನೇ, ಸಾಯಿಸಿದವನೂ ಸಹ ಪುರುಷನೇ. ಆದರೆ ಅಪವಾದ ಹೊತ್ತವಳು ಮಾತ್ರ ಒಬ್ಬ ಹೆಣ್ಣು ಎಂಬುದನ್ನು ನಾವಿಲ್ಲಿ ಗಮನಿಸ ಬೇಕಾಗಿದೆ. ಗಂಡಿನ ಅಹಮಿಕೆಯಿಂದ ಮತ್ತೊಬ್ಬ ಗಂಡಸನ್ನ ಬಲಿ ಪಡೆಯುತ್ತಿರುವ ವಾಸ್ತವ ನಮ್ಮೆ ದುರಿಗಿದೆ. ಬಹಳಷ್ಟು ಸಲ ಸಿನಿಮಾದ  ಪಾತ್ರಗಳೇ ಆದರ್ಶವಾಗಿ ಬಿಡುವ ಅಪಾಯವಿದೆ. ಸಿನಿಮಾಗಳೂ ಸಹ ಗಂಡಾಳ್ವಿಕೆಯ ಪ್ರತಿ ರೂಪದಂತಹ ಪಾತ್ರಗಳನ್ನೇ ಮತ್ತೇ ಮತ್ತೇ ಸೃಷ್ಟಿಸುತ್ತಿವೆ. ಸಮಾಜದ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಗಂಡಿನ ಯಜಮಾನಿಕೆಯನ್ನು ಮುಂದು ಮಾಡಿಕೊಂಡು ಬಂದಿವೆ. ಸಿನಿಮಾಗಳಲ್ಲಿ ಇಂತಹ ಗಂಡಿನ ಪೌರುಷದ ಪಾತ್ರಗಳನ್ನೇ ಪ್ರೇಕ್ಷಕರೂ ಬೆಂಬಲಿಸಿಕೊಂಡು ಬಂದಿದ್ದಾರೆ. ಸಿನಿಮಾಗಳಲ್ಲಿ ನಟರು ನಟಿಸುವ ಹಿರೋನ ಪಾತ್ರಗಳೇ ಆದರ್ಶವಾಗಿವೆ.  ವಾಸ್ತವ ನೆಲೆಯಅರಿವಿಲ್ಲದೇ ಈ ಜನರು ಅದನ್ನು ವಾಸ್ತವದಲ್ಲಿ ಕೃತಿಗಿಳಿಸಲು ತೊಡಗುತ್ತಾರೆ. ಒಂದು ರೀತಿಯಲ್ಲಿ ನಮ್ಮ ಸಿನಿಮಾಗಳೇ ಇಂತಹ ಗಂಡಾಳ್ವಿಕೆಯ ನಡೆಗಳನ್ನು ಬೆಳೆಸುತ್ತಾ ಬಂದಿದೆ. ಅದಕ್ಕೆ ಪೂರಕವಾಗಿ ಗಂಡಸಿನ ಮನೋಭೂಮಿಕೆಯೂ ಬೆಳೆದಿದೆ.

ಲೋಕದಲ್ಲಿಇಷ್ಟೊಂದು ವೈಜ್ಞಾನಿಕ ಬೆಳವಣಿಗೆಗಳಾದರೂ ಸಹ ಗಂಡಿನ ಯಜಮಾನಿಕೆಯನ್ನು ಛಿದ್ರ ಮಾಡುವುದಕ್ಕೆ ಮುಂದಾಗದಿರುವುದು ದುರಂತ. ನಮ್ಮ ಸಮಾಜ ಸಿನಿಮಾದ ಹಿರೋಯಿಸಂನಿಂದ ದೂರವಾಗಿ ವಾಸ್ತವದ ನಡೆಯನ್ನು ರೂಢಿಸಿಕೊಳ್ಳುವುದು ಇನ್ನೂ ಯಾವಾಗ? ಎಂಬ ಪ್ರಶ್ನೆಕಾಡುತ್ತಿದೆ. ಕೊನೆಗೆ ಈ ಗಂಡಾಳ್ವಿಕೆಯ ನಡೆಯು ಗಂಡಸಿನ ಯಜಮಾನಿಕೆಕಾರಣವಾಗಿ ಕೊನೆಗೆ ಗಂಡುಗಳನ್ನೂ ಬಲಿ ಪಡಿಯುತ್ತದೆ. ಗಂಡಸಿನ ವಿಕೃತಿಗಳಿಗೆ ಹೆಣ್ಣನ್ನೇಅಸ್ತ್ರವಾಗಿ ಮಾಡಿಕೊಳ್ಳುತ್ತದೆ. ಈ ಪ್ರಕರಣದಲ್ಲಿಯೂ ಪವಿತ್ರಾ ಗೌಡ ಗಂಡಾಳಿಕೆಯ ದುರಹಂಕಾರಕ್ಕೆ ಬಳಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿಅವರ ಬಗ್ಗೆ ಪಕ್ಷಪಾತಿಯಾಗಿ ಹೇಳುವುದಲ್ಲ. ಆದರೆಗಂಡಸರನ್ನುತಮ್ಮ ಮಹತ್ವಾಕಾಂಕ್ಷೆಗೆ ಬಳಸಿಕೊಳ್ಳುವುದೂ ಸಹ ಸರಿಎಂದು ಹೇಳಲಾಗದು. ತನ್ನಗಂಡನನ್ನೇ ಬಳಸಿಕೊಳ್ಳುತ್ತಿರುವ, ಮತ್ತು ಅವರಿಬ್ಬರ ಅನೈತಿಕ ಸಂಬಂಧಗಳನ್ನು ವಿಜಯಲಕ್ಷ್ಮೀ ಯಾವ ಭಯದಿಂದ ಬಾಯಿ ಬಿಡುತ್ತಿಲ್ಲ. ವಿಜಯಲಕ್ಷ್ಮೀಯೂ ಇಲ್ಲಿ ಗಂಡಾಳ್ವಿಕೆಯ ಬಲಿಪಶುವೇ? ಹಿಂದೆ ಸೀತೆಯನ್ನು ಒಲಿಸಲು ರಾವಣ ಮಂಡೋದರಿಯನ್ನು ಸೀತೆಯೊಂದಿಗೆ ಸಂಧಾನಕ್ಕೆ ಬಳಸಿಕೊಂಡಂತೆಯೇ ಇಂದು ದರ್ಶನ್‌ ತನ್ನ ಬಗ್ಗೆ ಜನರ ಅನುಕಂಪ ಗಳಿಸಲು ಹೆಂಡತಿಯನ್ನು ಬಳಸಿಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಗಂಡಸಿನ ಅಹಂಕಾರದ ನಡೆಗೆ ಇಲ್ಲಿಇಬ್ಬರು ಹೆಣ್ಣುಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಗಂಡಸಿನ ಗಂಡಾಳ್ವಿಕೆಯ ನಡೆಗಳು ಕೊನೆಗೆ ಗಂಡಸನ್ನೂ ಬಲಿಪಡೆಯುತ್ತವೆ. ಸಮಾಜದ ನೈತಿಕ ಮೌಲ್ಯಗಳನ್ನು ಕೊನೆಗಾಣಿಸುತ್ತವೆ. ಮನುಕುಲದ ಉಳಿವಿಗೆ ಮನುಷ್ಯಪರ ನಡವಳಿಕೆಗಳು ಬೇಕಾಗಿವೆ. ಪುರುಷಾಹಂಕಾರದ ಪಳೆಯುಳಿಕೆಗಳು ಬೇಡ. ಗಂಡು ಹೆಣ್ಣುಗಳಿಬ್ಬರ ಎದೆಯಲ್ಲಿಯೂ ತಾಯ್ತನದ ಕಾರುಣ್ಯದ ಕರುಳು ಬೇಕಾಗಿದೆ. ಇಂದು ಸಮಾಜವನ್ನು ಪೊರೆವತಾಯ್ತನ ನಮಗೆ ಬೇಕಾಗಿದೆ. ಗಂಡಸುತನ್ನ ಮನದಲ್ಲಿಯ ಗಂಡಸುತನವನ್ನು, ಗಡಸುತನವನ್ನು ಸ್ವಲ್ಪ ಸ್ವಲ್ಪವೇ ನಿಯಂತ್ರಿಸಿಕೊಳ್ಳುತ್ತಾ, ತಮ್ಮೋಳಗಿನ ಅಹಂಕಾರಕ್ಕೆ ಕೊನೆ ಹಾಡಬೇಕಿದೆ. ಹೆಣ್ಣಿನ ತಾಯ್ತನವನ್ನು ರೂಢಿಸಿಕೊಳ್ಳಬೇಕಾಗಿದೆ. ತಾಯ್ತನದ ನಡೆಯೇ ಎಲ್ಲ ಕೆಟ್ಟದ್ದನ್ನು ಅಳಿಸಿ ಹಾಕಿ ಮನುಷ್ಯತ್ವವನ್ನು ಉಳಿಸುವ ಹರಿಗೋಲಾಗುತ್ತದೆ. ಮನುಜಲೋಕಕ್ಕೆಅದೊಂದುದೊಡ್ಡರೋಗ ನಿವಾರಕ ಮಂತ್ರವಾಗುತ್ತದೆ. ಅಮೇರಿಕನ್ನ ಸ್ತ್ರೀವಾದಿ ಚಿಂತಕಿ ಬೆಲ್ ಹುಕ್ಸ್ ಹೇಳುವಂತೆ “ಮಹಿಳಾವಾದ ಸ್ವತ: ಗಂಡುಲೋಕದ ಉಳಿವಿಗೂ ಬೇಕಾಗಿದೆ. ಗಂಡುಗಳ ಒಳಗೂ ಎಲ್ಲರನ್ನೂ ಪೊರೆವ ತಾಯ್ತತನದ ಹೆಣ್ಣಿನ ಕಣ್ಣೋಟ ಚಿಗುರೊಡೆದಾಗ ಮಾತ್ರ ಗಂಡಾಳ್ವಿಕೆಯನ್ನು ಕೊನೆಗಾಣಿಸಬಹುದು” ಎನ್ನುತ್ತಾರೆ. ಮುಂದುವರೆದು ಸಿಲ್ವರ್‌ ಸ್ಟೀನ್ ಹೇಳುವುದೇನೆಂದರೆ. “ಸ್ತ್ರೀ ವಾದಿ ಸಂಗಾತಿತನ ವುಗಂಡಸುತನವನ್ನು ಪ್ರೀತಿಸುವುದಕ್ಕಿಂತಲೂ ನ್ಯಾಯವನ್ನು ಪ್ರೀತಿಸಲು ಸಮರ್ಥರು ಎನಿಸಲು ಅಗತ್ಯವಾದ ಒಂದು ನೈತಿಕತೆಯ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳಿ”ಎಂದು ಪುರುಷರಲ್ಲಿ ಮನವಿ ಮಾಡಿಕೊಳ್ಳುತ್ತಾನೆ.

ಇದನ್ನೂ ನೋಡಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿಯಲ್ಲಿ ಉದ್ಯೋಗ ಭದ್ರತೆಗೆ ಆಗ್ರಹಿಸಿ ಪ್ರತಿಭಟನೆJanashakthi Media

Donate Janashakthi Media

Leave a Reply

Your email address will not be published. Required fields are marked *