ಚೆನ್ನೈ: ಅ.11ರಂದು ಮೈಸೂರು ದರ್ಭಾಂಗಾ ಬಾಗ್ಮತಿ ಎಕ್ಸ್‌ಪ್ರೆಸ್ ರೈಲು ತಮಿಳುನಾಡಿನ ಕವರಪಟ್ಟೈನಲ್ಲಿ ಹಳಿತಪ್ಪಿದ್ದಕ್ಕೆ ತಾಂತ್ರಿಕ ದೋಷಗಳು ಕಾರಣವಲ್ಲ, ಹಳಿಯಲ್ಲಿದ್ದ ಬೋಲ್ಟ್ ನಟ್‌ಗಳನ್ನು ತೆಗದುಹಾಕಿ ರೈಲು ಹಳಿ ತಪ್ಪಿಸಲು ಪಿತೂರಿ ರೂಪಿಸಲಾಗಿತ್ತು ಎಂಬುದನ್ನು ತನಿಖೆ ಬಹಿರಂಗ ಪಡಿಸಿದೆ. ದರ್ಭಾಂಗಾ
ರೈಲಿನ 12 ಬೋಗಿಗಳು ಹಳಿ ತಪ್ಪಿದ ಪರಿಣಾಮ 20 ಮಂದಿ ಗಾಯಗೊಂಡಿದ್ದರು. ಈ ಸಂಬಂಧಿಸಿದಂತೆ ತನಿಖೆಗೂ ಆದೇಶಿ ಸಲಾಗಿತ್ತು. ಅದರಂತೆ ಟ್ರ್ಯಾಕ್‌ಮ್ಯಾನ್, ಲೋಕೋ ಪೈಲಟ್ ಹಾಗೂ ಸ್ಟೇಷನ್ ಮಾಸ್ಟರ್ ಸೇರಿದಂತೆ 15 ಮಂದಿ ರೈಲ್ವೇ ಸಿಬಂದಿಯು ರೈಲ್ವೇ ಸುರಕ್ಷ ಆಯುಕ್ತರಾದ ಎ.ಎಂ.ಚೌಧರಿ ಅವರ ಮುಂದೆ ಅಪಘಾತಕ್ಕೆ ಕಾರಣವಾದ ಅಂಶಗಳನ್ನು ವಿವರಿಸಿದ್ದಾರೆ.
ಇದನ್ನು ಓದಿ : ರಾಜಸ್ಥಾನ| ಬಸ್ ಹಾಗೂ ಟೆಂಪೋ ಡಿಕ್ಕಿ- 11 ಮಂದಿ ಸ್ಥಳದಲ್ಲೇ ಸಾವು
ತಾಂತ್ರಿಕವಾಗಿ ಯಾವ ಲೋಪವೂ ಉಂಟಾಗಿರಲಿಲ್ಲ ಎಂದು ಹೇಳಿದ್ದಾರೆ. ಪರಿಶೀಲನೆ ವೇಳೆ ಹಳಿಯ ನಟ್ ಮತ್ತು ಬೋಲ್ಟ್‌ಗಳನ್ನು ತೆಗೆದು ಪಿತೂರಿ ರೂಪಿಸಲಾಗಿತ್ತು ಎಂಬುದನ್ನು ದೃಢಪಡಿಸಿದ್ದಾರೆ.
ಅಲ್ಲದೇ, ಕೃತ್ಯ ಎಸಗಲು ಕನಿಷ್ಠ 30 ನಿಮಿಷಗಳ ಅಗತ್ಯವಿದ್ದು, ರೈಲು ಸಂಚರಿಸು ವುದಕ್ಕೆ ಮೊದಲೇ ಈ ಕೃತ್ಯ ಎಸಗಲಾಗಿದ್ದು, ಇದರಲ್ಲಿ ಯಾರೋ ಪರಿಣತರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಇದನ್ನು ನೋಡಿ : ಜೀವ ತೆಗೆದವನು ತಾನೂ ಸತ್ತ…ಸಿಕ್ಕೀತೆ ನ್ಯಾಯ…? – ಕೆ.ಎಸ್ ವಿಮಲಾ Janashakthi Media