ಹತ್ಯೆಗೀಡಾಗಿದ್ದ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿ ಸೇರಿದಂತೆ ನಾಲ್ವರು ಭಾರತೀಯರಿಗೆ ಪುಲಿಟ್ಜರ್ ಪ್ರಶಸ್ತಿ

ನ್ಯೂಯಾರ್ಕ್: 2022ರ ಪ್ರತಿಷ್ಠಿತ ಪುಲಿಟ್ಜೆರ್ ಪ್ರಶಸ್ತಿಗೆ ಭಾಜನರಾದ ನಾಲ್ವರು ಭಾರತೀಯರಲ್ಲಿ 2021ರ ಆಫ್ಘಾನಿಸ್ತಾನದಲ್ಲಿ ಹತ್ಯಗೀಡಾದ ಛಾಯಾಚಿತ್ರ ವರದಿಗಾರ ಡ್ಯಾನಿಶ್ ಸಿದ್ಧಿಕಿ ಅವರಿಗೆ ಛಾಯಗ್ರಹಣ ವಿಭಾಗದಲ್ಲಿ ಪ್ರಶಸ್ತಿ ಲಬಿಸಿದೆ. ಡ್ಯಾನಿಶ್‌ ಸಿದ್ದಿಕಿ ಮತ್ತು ಅವರ ಸಹೋದ್ಯೋಗಿಗಳಾದ ರಾಯಿಟರ್ಸ್ ಸುದ್ದಿ ಸಂಸ್ಥೆಯ ಅದ್ನಾನ್ ಅಬಿದಿ, ಸನ್ನಾ ಇರ್ಷಾದ್ ಮಟ್ಟೊ ಮತ್ತು ಅಮಿತ್ ಡೇವ್ ಅವರಿಗೆ ಪ್ರಶಸ್ತಿಯನ್ನು ಲಭಿಸಿದೆ.

ನಾಲ್ವರು ಪತ್ರಕರ್ತರು ಭಾರತದಲ್ಲಿ ಕೋವಿಡ್‌ ಸಂದರ್ಭದಲ್ಲಿ ಎದುರಾದ ಬಿಕ್ಕಟ್ಟಿನ ಪರಿಣಾಮ ಮತ್ತು ಸಂಭವಿಸಿದ ದುರಂತಗಳ ವಸ್ತುನಿಷ್ಠವಾದ ವರದಿಗಾರಿಕೆಯಲ್ಲಿ ಶ್ರಮವಹಿಸಿದ್ದವರು. ಡ್ಯಾನಿಶ್‌ ಸಿದ್ಧಿಕಿ ಅವರು 2018ರಲ್ಲಿ ಪುಲಿಟ್ಜರ್‌ ಪ್ರಶಸ್ತಿಗೆ ಭಾಜನರಾಗಿದ್ದರು. ಅವರಿಗೆ ಎರಡನೇ ಬಾರಿ ಈ ಪ್ರಶಸ್ತಿ ಲಬಿಸಿದ್ದು ವಿಶೇಷ. ಅದೇ ರೀತಿ ಅದ್ನಾನ್‌ ಅಬಿದಿ ಅವರಿಗೆ ಮೂರನೇ ಬಾರಿ ಪ್ರಶಸ್ತಿ ಲಭಿಸಿದೆ.

ಇದನ್ನು ಓದಿ: ಅಫ್ಘಾನಿಸ್ತಾನದಲ್ಲಿ ಘರ್ಷಣೆ: ಭಾರತೀಯ ಪತ್ರಕರ್ತ ಡ್ಯಾನಿಷ್‌ ಸಿದ್ದೀಕಿ ಹತ್ಯೆ

ಕಳೆದ ವರ್ಷ ಅಪ್ಘಾನಿಸ್ತಾನದಲ್ಲಿ ವರದಿಗಾರರಾಗಿ ನಿಯೋಜನೆಗೊಂಡಿದ್ದ 38 ವರ್ಷದ ಡ್ಯಾನಿಶ್ ಸಿದ್ದಕಿ 2021ರ ಜುಲೈ 16ರಂದು ಕಂದಹಾರ್ ನಗರದ ಸ್ಪಿನ್  ಬೋಲ್ಡಾಕ್ ಜಿಲ್ಲೆಯಲ್ಲಿ ಅಫ್ಗನ್ ಮತ್ತು ತಾಲಿಬಾನ್ ಪಡೆಗಳ ನಡುವಿನ ಸಂಘರ್ಷದ ವರದಿ ಮಾಡುವಾಗ ಕೊಲ್ಲಲ್ಪಟ್ಟಿದ್ದರು.

ಕೋವಿಡ್ ಸಮಯದಲ್ಲಿ ಹೇರಲಾಗಿದ್ದ ಲಾಕ್‌ಡೌನ್‌ ಸಂದರ್ಭದಲ್ಲಿನ ಪರಿಸ್ಥಿತಿಗಳು ಹಾಗೂ ಭಾರತದಲ್ಲಿನ ಬಿಗುವಿನ ಪರಿಸ್ಥಿತಿಯನ್ನು ತಮ್ಮ ಪೋಟೋಗಳ ಮೂಲಕ ಜಗತ್ತಿಗೆ ತರೆದಿಟ್ಟ ಛಾಯಾಗ್ರಾಹಕ ಡ್ಯಾನಿಶ್‌ ಸಿದ್ದಿಕಿ.

ಸಾರ್ವಜನಿಕ ಸೇವೆ ವಿಭಾಗದಲ್ಲಿ ವಾಷಿಂಗ್ಟನ್ ಪೋಸ್ಟ್, ಬ್ರೇಕಿಂಗ್ ನ್ಯೂಸ್ ವರದಿಗಾರಿಕೆಯಲ್ಲಿ ಮಿಯಾಮಿ ಹೆರಾಲ್ಡ್ ಸಿಬ್ಬಂದಿ, ತನಿಖಾ ಪತ್ರಿಕೋದ್ಯಮದಲ್ಲಿ ಟಂಪಾ ಬೇ ಟೈಮ್ಸ್ ಪತ್ರಿಕೆಯ ಜಾರ್ಜ್ ಜಿ ಜಾನ್ಸನ್, ರೆಬೆಕ್ಕಾ ವೂಲಿಂಗ್ಟನ್ ಮತ್ತು ಎಲಿ ಮುರ್ರೇ ಅವರು ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದನ್ನು ಓದಿ: ಕೋವಿಡ್‌ ಸೃಷ್ಟಿಸಿದ ಹೃದಯ ವಿದ್ರಾವಕ ದೃಶ್ಯಗಳನ್ನು ಸೆರೆ ಹಿಡಿದಿದ್ದ ದನಿಶ್‌ ಸಿದ್ದಿಕಿ

ವಿವರಣಾತ್ಮಕ ವರದಿಗಾರಿಕೆಯಲ್ಲಿ ಕ್ವಂಟಾ ಮ್ಯಾಗಜಿನ್‌ ನ ನಟಾಲೀ ವೋಲ್ಚಾವೆರ್, ಸ್ಥಳೀಯ ವರದಿಗಾರಿಕೆಯಲ್ಲಿ ಮ್ಯಾಡಿಸನ್ ಹಾಕಿನ್ಸ್ ಮತ್ತು ಸೆಸಿಲಿಯಾ ರೇಯೆಸ್, ರಾಷ್ಟ್ರೀಯ ವರದಿಗಾರಿಕೆಯಲ್ಲಿ ದಿ ನ್ಯೂಯಾರ್ಕ್ ಟೈಮ್ಸ್, ಅಂತಾರಾಷ್ಟ್ರೀಯ ವರದಿಗಾರಿಕೆ ವಿಭಾಗದಲ್ಲಿ ದಿ ನ್ಯೂಯಾರ್ಕ್ ಟೈಮ್ಸ್, ಫೀಚರ್ ರೈಟಿಂಗ್‌ ನಲ್ಲಿ ಜೆನಿಫರ್ ಸೀನಿಯರ್, ಕಾಮೆಂಟರಿಯಲ್ಲಿ ಮೆಲಿಂದಾ ಹೆನ್ನೆರ್ಬರ್ಗರ್, ವಿಮರ್ಶೆಯಲ್ಲಿ ಸಾಲಾಮಿಶಾಹ್ ಟಿಲ್ಲೆಟ್ ಪ್ರಶಸ್ತಿ ಪಡೆದಿದ್ದಾರೆ.

ಸಂಪಾದಕೀಯ ಬರಹದಲ್ಲಿ ಲಿಸಾ ಫಾಲ್ಕನ್ಬರ್ಗ್, ಮಿಖಾಯಲ್ ಲಿಂಡೆನ್ಬರ್ಗರ್, ಜೋ ಹಾಲಿ ಮತ್ತು ಲೂಯಿಸ್ ಕಾರಾಸ್ಕೋ, ಇಲ್ಲುಸ್ಟ್ರೇಟೆಡ್ ವರದಿಗಾರಿಕೆ ಮತ್ತು ಕಾಮೆಂಟರಿಯಲ್ಲಿ ಫಾಹ್ಮಿದಾ ಅಜೀಂ, ಆಂಥೋನಿ ಡೆಲ್, ಜೋಶ್ ಆಡಮ್ಸ್, ವಾಲ್ಟ್ ಹಿಕ್ಕಿ, ಬ್ರೇಕಿಂಗ್ ನ್ಯೂಸ್ ಫೋಟೊಗ್ರಫಿಯಲ್ಲಿ ಮಾರ್ಕಸ್ ಯಾಮ್, ಮೆಕ್ನೇಮೀ, ಡ್ರ್ಯೂ ಆಂಗೆರೆರ್, ಸ್ಪೆನ್ಸರ್ ಪ್ಲಾಟ್, ಸಾಮ್ಯುಯೆಲ್ ಕೋರಮ್ ಮತ್ತು ಜಾನ್ ಚೆರ್ರಿ ಅವರಿಗೆ ಪ್ರಶಸ್ತಿ ಲಭಿಸಿದೆ.

ಆಡಿಯೋ, ವರದಿಗಾರಿಕೆ, ಫಿಕ್ಷನ್, ನಾಟಕ, ಇತಿಹಾಸ, ಜೀವನ ಚರಿತ್ರೆ, ಪದ್ಯ, ಸಂಗೀತ ಮತ್ತು ಸಾಮಾನ್ಯ ವಿಭಾಗಗಳಿಗೂ ಕೂಡ ಪುಲಿಟ್ಜರ್ ಪ್ರಶಸ್ತಿ ಪ್ರಕಟಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *