‘ನಿಮ್ಮಲ್ಲಿ ಎಷ್ಟು ಮಂದಿ ದಲಿತರು?’: ಮಾಧ್ಯಮಗಳಲ್ಲಿನ ಪ್ರಾತಿನಿಧ್ಯತೆಯ ಬಗ್ಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಸೋಮವಾರ ನಡೆದ ಪತ್ರಿಕಾಗೋಷ್ಠಿಯ ವೇಳೆ, “ಇಲ್ಲಿ ಎಷ್ಟು ಮಂದಿ ದಲಿತ, ಒಬಿಸಿ ವ್ಯಕ್ತಿಗಳು ಇದ್ದಾರೆ?” ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾಧ್ಯಮದ ಪ್ರತಿನಿಧಿಗಳಿಗೆ ಪ್ರಶ್ನಿಸುವ ಮೂಲಕ ದೇಶದಲ್ಲಿ ಜಾತಿ ಗಣತಿ ಮಾಡುವ ಮತ್ತು ಆ ಮೂಲಕ ಪ್ರಾತಿನಿಧ್ಯದ ಕೊರತೆಯನ್ನು ನೀಗಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ)ಯು ಜಾತಿ ಆಧಾರಿತ ಜನಗಣತಿ ಮಾಡುವ ಬಗ್ಗೆ ಪರ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಂಡಿದೆ ಮತ್ತು ಆಯಾ ರಾಜ್ಯಗಳಲ್ಲಿ ಪಕ್ಷದ ನೇತೃತ್ವದ ಸರ್ಕಾರಗಳು ಇದನ್ನು ನಡೆಸಲಿವೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಹೇಳಿದ್ದರು. ಹೊಸದಿಲ್ಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಇದನ್ನೂ ಓದಿ: ಗ್ರಾಮಪಂಚಾಯಿತಿಯಲ್ಲಿ ಗೆಲ್ಲಿಸಲು ಶಕ್ತಿ ಇಲ್ಲದವರು ಬಿಜೆಪಿ ನಿಯಂತ್ರಿಸ್ತಿದ್ದಾರೆ? ರೇಣುಕಾಚಾರ್ಯ ಆರೋಪ

“ದೇಶದ ಸಂಸ್ಥೆಗಳಲ್ಲಿ ಎಷ್ಟು ದಲಿತ, ಆದಿವಾಸಿ, ಒಬಿಸಿ ಜನರಿದ್ದಾರೆ?. ಈ ಕೊಠಡಿಯನ್ನೇ ತೆಗೆದುಕೊಳ್ಳೋಣ, ಇಲ್ಲಿ ಎಷ್ಟು ದಲಿತ ಮತ್ತು ಒಬಿಸಿ ವ್ಯಕ್ತಿಗಳು ಇದ್ದಾರೆ?” ಎಂದು ರಾಹುಲ್ ಗಾಂಧಿ ಪತ್ರಕರ್ತರೊಂದಿಗೆ ಕೇಳಿದ್ದಾರೆ. ಜೊತೆಗೆ ರಾಷ್ಟ್ರದ ಎಲ್ಲಾ ಕ್ಷೇತ್ರಗಳಲ್ಲಿ ಇರುವ ಪ್ರಾತಿನಿಧ್ಯದ ಕೊರತೆಯನ್ನು ರಾಹುಲ್ ಗಾಂಧಿ ಒತ್ತಿ ಹೇಳಿದ್ದು, ಜಾತಿ ಗಣತಿಯು ದೇಶದ ಬಡವರ ವಿಮೋಚನೆಗೆ ಅಗತ್ಯವಾದ, ಶಕ್ತಿಯುತ, ಪ್ರಗತಿಪರ ಹೆಜ್ಜೆಯಾಗಿದೆ ಎಂದು ಪ್ರತಿಪಾಸಿಸಿದ್ದಾರೆ.

ನಾಲ್ಕು ರಾಜ್ಯಗಳ ಕಾಂಗ್ರೆಸ್‌ ಮುಖ್ಯಮಂತ್ರಿಗಳು ಕೂಡಾ ತಮ್ಮ ರಾಜ್ಯಗಳಲ್ಲಿ ಜಾತಿ ಗಣತಿ ಮಾಡುವುದಾಗಿ ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದಕ್ಕೂ ಮುಂಚೆ ಶನಿವಾರ ರಾತ್ರಿ ರಾಜಸ್ಥಾನ ಸರ್ಕಾರವು ಜಾತಿ ಆಧಾರಿತ ಸಮೀಕ್ಷೆಯನ್ನು ನಡೆಸುವುದಾಗಿ ಘೋಷಿಸಿದೆ.

ಇದನ್ನೂ ಓದಿ: Bengaluru Rain| ಸಂಜೆಯಾಗುತ್ತಲೇ ಬೆಂಗಳೂರಿನಲ್ಲಿ ಮಳೆ ಆರಂಭ, ರಸ್ತೆಗಳು ಜಲಾವೃತ

“ಕಾಂಗ್ರೆಸ್ ಜಾತಿ ಗಣತಿಯನ್ನು ಪೂರ್ಣ ಹೃದಯದಿಂದ ಬೆಂಬಲಿಸಲು ಮತ್ತು ಜಾತಿ ಗಣತಿಯನ್ನು ನಡೆಸುವಂತೆ ಬಿಜೆಪಿಯನ್ನು ಒತ್ತಾಯಿಸಲು ನಿರ್ಧರಿಸಿದೆ. ಒಂದು ವೇಳೆ ಜನಗಣತಿ ಮಾಡಲು ಅವರು ವಿಫಲವಾದರೆ, ದೇಶವು ಬಯಸಿದಂತೆ ಅವರು ದಾರಿ ಬಿಟ್ಟುಕೊಡಲಿ, ಅದನ್ನು ನಾವು ಮಾಡುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇಂಡಿಯಾ ಒಕ್ಕೂಟದ ಪಕ್ಷಗಳು ಒಗ್ಗಟ್ಟಾಗಿದೆಯೆ ಜಾತಿ ಆಧಾರಿತ ಜನಗಣತಿಯನ್ನು ಬೆಂಬಲಿಸುತ್ತವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, “ಇಂಡಿಯಾದ ಬಹುತೇಕ ಪಕ್ಷಗಳು ಇದನ್ನು ಬೆಂಬಲಿಸುತ್ತವೆ. ಅಲ್ಪ ಸ್ವಲ್ಪ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ಕೆಲವರು ಇರಬಹುದು. ಆದರೆ ಬಹುಸಂಖ್ಯಾತ ಪಕ್ಷಗಳು ಇದನ್ನು ಬೆಂಬಲಿಸುತ್ತದೆ ಎಂಬ ವಿಶ್ವಾಸ ನನಗಿದೆ. ನಾವು ಫ್ಯಾಸಿಸ್ಟ್ ಶಕ್ತಿಯಲ್ಲ ಮತ್ತು ಬೆಂಬಲಿಸದೆ ಇರುವವರನ್ನು ಒತ್ತಾಯಿಸುವುದಿಲ್ಲ” ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ‌ನಮಗೆ ಸೆಂಗೋಲ್ ಬೇಡ ನೇಗಿಲು ಬೇಕು – ಮಾವಳ್ಳಿ ಶಂಕರ್ Janashakthi Media

Donate Janashakthi Media

Leave a Reply

Your email address will not be published. Required fields are marked *