ರಾಮನಗರ: ಹಾರೋಹಳ್ಳಿ ತಾಲೂಕಿನ ಮರಳವಾಡಿಯ ಬನವಾಸಿ ಗ್ರಾಮದಲ್ಲಿ “ಗ್ರಾಮದ ಜಾತ್ರಾ ಮಹೋತ್ಸವದಲ್ಲಿ ನಮ್ಮನ್ನು ಎಲ್ಲರಂತೆ ಕಾಣಿ, ಜಾತ್ರೆಯಲ್ಲಿ ಭಾಗವಹಿಸಲು ಅವಕಾಶ ನೀಡಿ” ಎಂದು ಕೇಳಿದ ದಲಿತ ಸಮುದಾಯದವರಿಗೆ ನೀರು, ದಿನಸಿ ಪದಾರ್ಥ ನೀಡದಂತೆ ಸ್ಥಳೀಯ ಸವರ್ಣೀಯರು ಡಂಗೂರ ಸಾರಿಸಿರುವ ಅಮಾನವೀಯ ಘಟನೆ ನಡೆದಿತ್ತು. ಜಾತ್ರೆ
ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಂಸದ ಡಿಕೆ ಸುರೇಶ್, ಸವರ್ಣೀಯರು ದಲಿತರಿಗೆ ಜಾತ್ರಾ ಮಹೋತ್ಸವಕ್ಕೆ ಪಾಲ್ಗೊಳ್ಳದಂತೆ ಬಹಿಷ್ಕಾರ ಹಾಕಿದ್ದು ಹಾಗೂ ದಿನಸಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಕೊಡದಂತೆ ಡಂಗೂರ ಹೊಡೆಸಿದ ಅಮಾನವೀಯ ಕೃತ್ಯ ನನ್ನ ಗಮನಕ್ಕೆ ಬಂದಿದೆ.
ಇದನ್ನೂ ಓದಿ: ಐಪಿಎಲ್ 2025 – ಪ್ಲೇ ಆಫ್ ಪ್ರವೇಶಿಸಿದ ನಾಲ್ಕು ತಂಡಗಳು
ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇಂಥದ್ದೊಂದು ಘಟನೆ ನಮ್ಮ ತಾಲ್ಲೂಕಿನಲ್ಲಿ ನಡೆದಿರುವುದಕ್ಕೆ ಖೇದವೆನಿಸುತ್ತಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಇದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ತಿಳಿಸುವುದಾಗಿ ಸುರೇಶ್ ಅವರು ತಮ್ಮ ಎಕ್ಸ್ ಖಾತೆ ಮೂಲಕ ಹೇಳಿದ್ದಾರೆ.
ಇನ್ನು ದಲಿತ ವ್ಯಕ್ತಿಯನ್ನೇ ಬಳಸಿಕೊಂಡು ದಲಿತರಿಂದ ಇನ್ಮುಂದೆ ನೀರನ್ನು ಮುಟ್ಟಿಸಬಾರದು, ಅಂಗಡಿಗಳಲ್ಲಿ ದಿನಸಿ, ಹಾಲನ್ನೂ ಸಹ ಹಾಕಿಸಿಕೊಳ್ಳಬಾರದು. ಕೃಷಿ ಚಟುವಟಿಕೆಗಳಿಗೆ ದಲಿತರನ್ನು ಬಳಸಿಕೊಳ್ಳಬಾರದು. ಇದಕ್ಕೇನಾದರೂ ವಿರುದ್ಧವಾಗಿ ನಡೆದುಕೊಂಡಲ್ಲಿ ರೂ.10 ಸಾವಿರ ದಂಡ ಹಾಕಲಾಗುವುದು ಎಂದು ಮೊನ್ನೆಯಷ್ಟೇ ಡಂಗೂರ ಸಾರಲಾಗಿತ್ತು.
ಇದನ್ನೂ ನೋಡಿ: ಬಿಡದಿ : ಮೂಕ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ Janashakthi Media