ಸಕಲೇಶಪುರ: ದಲಿತ ರೈತನೊಬ್ಬ ಬೆಳದಿದ್ದ 2 ಎಕ್ಕರೆ ಕಾಫಿ ಗಿಡಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಡಿದು ಹಾಕಿರುವ ಅಮಾನವೀಯ ಪ್ರಕರಣ ಸಕಲೇಶಪುರ ತಾಲ್ಲೂಕು ಉಚ್ಚಂಗಿ ಗ್ರಾಮದಲ್ಲಿ ನಡೆದಿದೆ.
ರುದ್ರಯ್ಯ ಲೇಟ್ ತಿಪ್ಪಯ್ಯ ಎಂಬವರು ಯಸಳೂರು ಹೋಬಳಿ, ಉಚ್ಚಂಗಿ ಗ್ರಾಮದಲ್ಲಿ ಸರ್ವೆ ನಂ.2ನ ಎರಡು ಎಕ್ಕರೆ ವಿಸ್ತೀರ್ಣದ ಜಮೀನು ಹೊಂದಿದ್ದು, ಈ ಜಮೀನಿನಲ್ಲಿ ಕಾಫಿ, ಕಾಳುಮೆಣಸು, ಬಾಳೆ ಸಾಗು ಮಾಡಿದ್ದು, ಹಲಸು, ಮಾವು ಜಾತಿಯ ಮರಗಳನ್ನು ಬೆಳೆಸಿದ್ದಾರೆ.
ಸದರಿ ಜಮೀನು, ರುದ್ರಯ್ಯ ರವರೆಗೆ ಬಗುರ್ ಹುಕುಂ ಮೂಲಕ ಮಂಜೂರಿಯಾಗಿರುತ್ತದೆ ಹಾಗೂ ಈ ಜಮೀನಿಗೆ ಸಂಬಂಧಪಟ್ಟಂತೆ ಎಂ.ಆರ್. ಹೆಚ್12/2015-17ರಂತೆ ಖಾತೆ, ಪಹಣಿ ಹಾಗೂ ಇತರೆ ವಿಶಿಷ್ಟ ಸರ್ಕಾರಿ ದಾಖಲಾತಿಗಳು ಕ್ರಮಬದ್ದವಾಗಿ ಇವೆ. ಆದರೆ, ದುರುದ್ದೇಶದಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಮರಗಳನ್ನು ಕಡಿದುಹಾಕಿದ್ದಾರೆ ಎಂದು ರುದ್ರಯ್ಯ ಆರೋಪಿಸಿದರು.
ಈ ಅನ್ಯಾಯವನ್ನು ಸರಿಪಡಿಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ತಪ್ಪಿತಸ್ಥರ ವಿರುದ್ಧದ ಕಠಿಣ ಕ್ರಮ ಕೈಗೋಳ್ಳದಿದ್ದರೆ, ಉಗ್ರ ಪ್ರತಿಭಟನೆ ನಡೆಸುವುದಾಗಿ ಹಿರಿಯ ದಲಿತ ಮುಖಂಡ ಎಸ್ ಎನ್ ಮಲ್ಲಪ್ಪ, ವಕೀಲ ವೇಣು ಕುಮಾರ್, ಭೀಮ ದ್ವನಿ ಸಂಘದ ಅಧ್ಯಕ್ಷ ನಾಗೇಶ್ ಹೇಳಿದ್ದಾರೆ.