ಹೊಸಪೇಟೆ : ದಲಿತ ಹಕ್ಕುಗಳ ಸಮಿತಿಯ ನೂತನ ಅಧ್ಯಕ್ಷರಾಗಿ ಗೋಪಾಲಕೃಷ್ಣ ಹರಳಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಎನ್. ರಾಜಣ್ಣ ಆಯ್ಕೆಯಾಗಿದ್ದಾರೆ. ದಲಿತ
ದಲಿತರ ಸಾಮಾಜಿಕ, ಆರ್ಥಿಕ, ರಾಜಕೀಯ ಅಭಿವೃದ್ಧಿ, ಜಾತಿ ನಿರ್ಮೂಲನೆ ಮತ್ತು ಐಕ್ಯತೆಗಾಗಿ ಹೊಸಪೇಟೆಯಲ್ಲಿ ಎರಡು ದಿನಗಳ ಕಾಲ ಸಮಾವೇಶ ನಡೆಯಿತು. ಮೊದಲ ದಿನ, ರಾಜ್ಯದಲ್ಲಿ ದಲಿತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು, ಮತ್ತು ಅವರ ಭೂಮಿ, ನಿವೇಶನ, ಉದ್ಯೋಗ ಪ್ರಾತಿನಿಧ್ಯ, ಮೀಸಲಾತಿ ಹಾಗೂ ಸರ್ಕಾರದ ಯೋಜನೆಗಳ ಅನುಷ್ಠಾನದ ವೈಫಲ್ಯ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ದಲಿತ ಸಂಘಟನೆಗಳ ಐಕ್ಯ ಹೋರಾಟ ಕುರಿತು ಸಮಾವೇಶದಲ್ಲಿ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ದಲಿತ
ಇದನ್ನೂ ಓದಿ : ಬೆರಳೆಣಿಕೆ ಸಂಖ್ಯೆಯ ಬ್ರಾಹ್ಮಣಶಾಹಿ ಚಿಂತನೆ ಇಂದು ಬಹುಸಂಖ್ಯಾತರನ್ನು ಆಳುತ್ತಿದೆ, ಇದರ ವಿರುದ್ಧ ಹೋರಾಡಬೇಕಿದೆ – ಕೆ.ರಾಧಾಕೃಷ್ಣನ್ ಕರೆ ದಲಿತ
ಎರಡನೆಯ ದಿನ ದಲಿತರ ಸಮಸ್ಯೆಗಳು ಹಾಗೂ ಸಂಘಟನೆಯನ್ನು ಬಲಪಡಿಸುವ ಕುರಿತು ವರದಿ ಮಂಡಿಸಲಾಯಿತು. ಅಂತಿಮವಾಗಿ ಸಮಾವೇಶವು 36 ಜನ ರಾಜ್ಯ ಸಮಿತಿ ಸದಸ್ಯರನ್ನು, 15 ಜನ ಪದಾಧಿಕಾರಿಗಳನ್ನು ಆಯ್ಕೆ ಮಾಡಿತು. ದಲಿತ ದಲಿತ
ಆಯ್ಕೆಯಾದ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ.
ರಾಜ್ಯಾಧ್ಯಕ್ಷರು: ಗೋಪಾಲಕೃಷ್ಣ ಹರಳಹಳ್ಳಿ.
ಪ್ರಧಾನ ಕಾರ್ಯದರ್ಶಿ: ರಾಜಣ್ಣ. ಎನ್
ಖಜಾಂಚಿ: ಅನಿಕೇತನ್
ರಾಜ್ಯ ಉಪಾಧ್ಯಕ್ಷರುಗಳು:
ಮಾಳಮ್ಮ ಬಿ.
ನಾಗರಾಜ್ ಎನ್
ಬಿ. ರಾಜಶೇಖರ್ ಮೂರ್ತಿ
ತಂಗರಾಜ್
ಜಂಬಣ್ಣ ನಾಯಕ್
ಕೆ. ನಾಗರಾಜ್
ರಾಜ್ಯ ಕಾರ್ಯದರ್ಶಿಗಳು:
ಕೃಷ್ಣ ಆರ್.
ನಾಗಣ್ಣ
ಪೃಥ್ವಿ ಎಂ.ಜಿ
ಸುಧಾಮ ದನ್ನಿ
ರಾಜು ವೆಂಕಟಪ್ಪ
ಕೃಷ್ಣಪ್ಪ
ಈ ವಿಡಿಯೋ ನೋಡಿ : ಲಿಂಗಾಯತರು ಮಾಂಸ ತಿನ್ನೋದ ಬಿಟ್ಟರೆ ಮಾತ್ರ ಲಿಂಗ ದೀಕ್ಷಾ ಕೊಡತೀವಿ ಅಂತ ಯಾಕೆ ಹೇಳತೀರಿ ? ದಲಿತ