ಉಡುಪಿ: ಮೀನುಗಾರ ವೃತ್ತಿಯಲ್ಲಿ ಕೆಲಸ ಮಾಡಿಕೊಂಡಿದ್ದ ದಲಿತ ಮಹಿಳೆಯ ಮೇಲೆ ಮೀನು ಕಳವು ಆರೋಪ ಹೊರಿಸಿ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದ್ದೂ, ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘ (ಸಿಐಟಿಯು) ತೀವ್ರವಾಗಿ ಖಂಡಿಸಿದೆ.
ದೇಶದ ಹೆಸರಾಂತ ಮೀನುಗಾರಿಕಾ ಬಂದರು ಆಗಿರುವ ಮಲ್ಪೆಯ ಬಂದರಿನ ಒಳಗೆ ಮೀನು ಕದ್ದ ಆರೋಪ ಹೊರಿಸಿ ಸಾರ್ವಜನಿಕವಾಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಹಾಗೂ ಹಲ್ಲೆ ನಡೆಸಲು ಕುಮ್ಮಕ್ಕು ನೀಡಿದ ಎಲ್ಲ ಆರೋಪಿಗಳ ವಿರುದ್ಧ ಕಠಿಣ ಶಿಕ್ಷೆಗೆ ಒಳಪಡಿಸಬೇಕು.
ಮಾರ್ಚ್ ತಿಂಗಳು ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಯದಲ್ಲಿ ಒಬ್ಬ ಮಹಿಳಾ ಬಡಾ ಮೀನುಗಾರರ ಮಹಿಳೆಯನ್ನು ಮರಕ್ಕೆ ಕಟ್ಟಿ, ಕೈಕಾಲು ಕಟ್ಟಿ ಅವ್ಯಾಚ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವುದು ಉಡುಪಿಯ ಬುದ್ದಿವಂತ ಸಮಾಜದ ಜನತೆ ತಲೆತಗ್ಗಿಸುವಂತಾಗಿದೆ. ಮಲ್ಪೆ ಬಂದರಿನಲ್ಲಿ ಇಂತಹ ಸುಮಾರು ಘಟನೆಗಳು ನಡೆದು ಹೊಗಿದೆ.
ಇದನ್ನೂ ಓದಿ: ಒಕ್ಕೂಟ ಸಂಸ್ಕೃತಿಯನ್ನು ಗೌರವಿಸಿ, ಶಿಕ್ಷಣವನ್ನು ರಾಜ್ಯ ಪಟ್ಟಿಗೆ ಹಿಂತಿರುಗಿಸಿ: ಜಾನ್ ಬ್ರಿಟ್ಟಾಸ್
ಹೊರ ಜಿಲ್ಲೆ ಯಿಂದ ಮೀನುಗಾರಿಕೆ ವ್ರತ್ತಿಯನ್ನು ನಂಬಿಕೊಂಡು ಬಂದ ಮಹಿಳೆಯರು ಹಾಗೂ ಪುರುಷರಿಗೂ ಮಲ್ಪೆ ಬಂದರಿನಲ್ಲಿ ಹಲ್ಲೆ ನಡೆಸುತ್ತಿದ್ದಾರೆ ಅದರೆ ಪೋಲಿಸ್ ಠಾಣೆಯ ಮೆಟ್ಟಿಲು ಹತ್ತಾದ ಹಾಗೆ ಕೆಲವು ಪ್ರತಿಷ್ಟಿತ ವ್ಯಕ್ತಿಗಳು ನೋಡಿ ಕೊಳ್ಳುತ್ತಿದ್ದರು.ಅದ್ದರಿಂದ ಜಿಲ್ಲಾಧಿಕಾರಿಯವರು ಮತ್ತು ಪೋಲಿಸ್ ಇಲಾಖೆ ಮಧ್ಯ ಪ್ರವೇಶಿಸಿ ಉನ್ನತಮಟ್ಟದಲಿ ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು.
ಕಾನೂನು ಎಲ್ಲರಿಗೂ ಒಂದೆ ಇಂತಹ ಘಟನೆಗಳು ಮರುಕಳಿಸದ ಹಾಗೆ ಪೋಲಿಸ್ ಇಲಾಖೆ ಗಮನಹರಿಸಬೇಕು.
ಈ ಘಟನೆ ದೇಶಮಟ್ಟದಲ್ಲಿ ಚರ್ಚೆ ನಡೆಯುತ್ತಿರುವಾಗ ಉಡುಪಿ ಶಾಸಕರಾಗಲಿ,ಸಂಸದರಾಗಲಿ ದಲಿತ ಮಹಿಳೆಯ ಹಲ್ಲೆಯ ಬಗ್ಗೆ ಮಾತಾನಾಡದಿರುವುದು ಮಾತ್ರ ವಿಪರ್ಯಾಸ ಎಂದು ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಇದನ್ನೂ ನೋಡಿ: ಎಲ್ಲಾ ವಲಯಗಳಲ್ಲಿ ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ – ರೂಪಾ ಹಾಸನ Janashakthi Media