ಅಂಬೇಡ್ಕರ್‌, ವಾಲ್ಮೀಕಿ ಫೋಟೋ ತೆಗೆಸಿದ ಜೋಷಿ ವಿರುದ್ದ ದಲಿತ ಸಂಘಟನೆಗಳ ಆಕ್ರೋಶ,ಕಿಡಿಕಾರಿದ ಕಾಂಗ್ರೆಸ್‌

ಹುಬ್ಬಳ್ಳಿ: ಹುಬ್ಬಳ್ಳಿ ಕಚೇರಿಯಲ್ಲಿ ಪ್ರಹ್ಲಾದ್‌ ಜೋಷಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್‌, ವಾಲ್ಮೀಕಿ ಭಾವಚಿತ್ರವನ್ನು ಬೆಂಬಲಿಗರೊಬ್ಬರಿಂದ ತೆಗೆಸಿದ್ದಾರೆ ಎನ್ನುವ ಫೋಟೋ ಟ್ರೋಲ್‌ ಆಗಿದ್ದು, ಅದಕ್ಕೆ ಕಾಂಗ್ರೆಸ್‌ ಕಿಡಿಕಾರಿದ್ದರೆ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ದಲಿತ ಸಂಘಟನೆಗಳು

ಜೋಷಿ ವಿರುದ್ಧ ಹರಿದಾಡುತ್ತಿರುವ ಫೋಟೋ, ವಿಡೀಯೋದಲ್ಲಿ ವ್ಯಕ್ತಿಯೊಬ್ಬ, ಹುಬ್ಬಳ್ಳಿ ಬಿಜೆಪಿ ಸಂಘ ಪರಿವಾರ ಮತ್ತು ಬಿಜೆಪಿ ನಾಯಕರಾದ ದೀನ್‌ ದಯಾಳ್‌ ಉಪಾಧ್ಯಾಯ್‌, ಶ್ಯಾಮ್‌ ಪ್ರಸಾದ್‌ ಮುಖರ್ಜಿ ಹಾಗೂ ಭಾರತ ಮಾತೆಯ ಫೊಟೋಗಳ ಜೊತೆ ಇಡಲಾಗಿದ್ದ ಅಂಬೇಡ್ಕರ್‌ ಹಾಗೂ ವಾಲ್ಮೀಕಿಯವರ ಫೋಟೋಗಳನ್ನು ತೆಗೆದು, ಈ ಫೋಟೋಗಳನ್ನು ತೆಗೆದು ಒಳಗೆ ಹೋಗುತ್ತಿರುವುದು ಕಾಣುತ್ತಿದೆ. ದಲಿತ ಸಂಘಟನೆಗಳು

ಇನ್ನು ಈ ಫೋಟೋ ವಿಡೀಯೋ ಟ್ರೋಲ್‌, ವೈರಲ್‌ ಆಗುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್‌ ಎಕ್ಸ್‌ ಟ್ವಿಟ್ಟರ್‌ ಮೂಲಕ ಜೋಷಿ ವಿರುದ್ಧ ಕಿಡಿಕಾರಿದೆ. “ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಅಂಬೇಡ್ಕರ್‌ ಅವರನ್ನು ಕಂಡರೆ ಕೋಪ, ಬಸವಣ್ಣರನ್ನು ಕಂಡರೆ ದ್ವೇಷ, ವಾಲ್ಮೀಕಿಯನ್ನು ಕಂಡರೆ ಅಸಹನೆಯಾಗಿದ್ದು, ಸಂಘಪರಿವಾರದ ಮುದ್ದಿನ ಕೂಸಾದ ಪ್ರಹ್ಲಾದ್‌ ಜೋಷಿಯವರು ತಮ್ಮೊಳಗಿನ ಲಿಂಗಾಯತ, ದಲಿತ ಮತ್ತು ಹಿಂದುಳಿದ ವರ್ಗಗಳ ಮೇಲಿನ ದ್ವೇಷವನ್ನು ಮಹನೀಯರ ಫೋಟೋಗಳನ್ನು ಹೊರಹಾಕುವ ಮೂಲಕ ವ್ಯಕ್ತಪಡಿಸಿದ್ದಾರೆ.

ಜೋಷಿ, ಅಂಬೇಡ್ಕರ್‌ ಅವರು ಕೊಟ್ಟಿರುವ ಸಂವಿಧಾನದಡಿಯಲ್ಲಿಯೇ ಚುನಾವಣೆಗೆ ನಿಂತಿದ್ದರೂ ಅಂಬೇಡ್ಕರ್‌ ಅವರನ್ನು ಆಚೆ ಎಸೆಯುವ ಈ ಮನಸ್ಥಿತಿಯನ್ನು ನಾಡಿನ ಜನತೆ ಸಹಿಸುವುದಿಲ್ಲ. ಬಿಜೆಪಿ ಹಾಗೂ ಜೋಷಿಯವರ ದುರಂಹಕಾರ ಪರವಾಧಿಗೆ ತಲುಪಿದೆ. ಜನತೆ ಬಿಜೆಪಿಯನ್ನು ಹೆಸರಿಲ್ಲದಂತೆ ನಿರ್ನಾಮ ಮಾಡಲಿದ್ದಾರೆ”.ಬಿಜೆಪಿಗೆ ದೇಶದ ಸಮಗ್ರತೆ ಧಕ್ಕೆ ಯಾವುದೇ ಕೊಡುಗೆ ನೀಡದ ಆರ್‌ಎಸ್‌ಎಸ್‌ ನಾಯಕರೇ ಸರ್ವಶ್ರೇಷ್ಠರು. ಅಂಬೇಡ್ಕರ್‌, ವಾಲ್ಮೀಕಿ, ಬಸವಣ್ಣರಿಗೆ ಅವಮಾನಿಸಿದ ಬಿಜೆಪಿ ಹಾಗೂ ಪ್ರಹ್ಲಾದ್‌ ಜೋಷಿ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ದಲಿತ ಸಂಘಟನೆಗಳು

ಇದನ್ನು ಓದಿ : ಎನ್.ಐ.ಎ ಹಾಗೂ ಕರ್ನಾಟಕ ಪೊಲೀಸ್ ಕಾರ್ಯ ಶ್ಲಾಘನೀಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಇತ್ತ ಜೋಷಿಯವರದ್ದು ಕೋಮುವಾದ ಗುಣ ಎಂದು ಆಕ್ರೋಶವ್ಯಕ್ತಪಡಿಸಿರುವ ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ಗೋಪಾಲ್‌ಕೃಷ್ಣ ಹರಳಹಳ್ಳಿ, ದಲಿತರು ತಿರುಗಿಬೀಳುತ್ತಾರೆಂಬ ಭಾವನೆ ಬಿಜೆಪಿ ನಾಯಕರಲ್ಲಿದೆ. ತೋರಿಕೆಗಾಗಿ ಮಾತ್ರ ಅವರು ಅಂಬೇಡ್ಕರ್‌, ಬಸವಣ್ಣ ಅವರಂತಹ ಮಹನೀಯರ ಫೋಟೋಗಳನ್ನು ಹಾಕಿಕೊಳ್ಳುತ್ತಾರಷ್ಟೇ. ಜೋಷಿಯವರದ್ದು ಕೋಮುವಾದಿ ದೃಷ್ಟಿಕೋನವಾಗಿದೆ. ಚುನಾವಣೆಯಲ್ಲಿ ದಲಿತರು ತಿರುಗಿಬೀಳುತ್ತಾರೆ ಎಂಬ ಭಯ ಜೋಷಿ ಅವರಿಗಿದೆ.ಕೋಮುವಾದಿ ದೃಷ್ಟಿಕೋನದಿಂದಲೇ ಜೋಷಿ ಹೀಗೆ ಮಾಡಿರುವುದು ಎಂದು ಕಿಡಿಕಾರಿದ್ದಾರೆ. ದಲಿತ ಸಂಘಟನೆಗಳು

ಈ ವಿಚಾರವಾಗಿ ಸುದ್ದಿಗೋಷ್ಠಿ ಹಾಗೂ ಟ್ವಿಟ್ಟರ್‌ ಮೂಲಕ ಬಿಜೆಪಿ ಪ್ರತಿಕ್ರಿಯಿಸಿದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ವೇದಿಕೆ ಮೇಲೆ ತೆಗೆದುಕೊಂಡು ಬರುವ ವಿಡಿಯೋ ತುಣಕುನ್ನು ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಷಿ ಅವರನ್ನು ಇಟ್ಟುಕೊಂಡು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ತೇಜೋವಧೆ ಮಾಡುವ ಕಾರಣದಿಂದ ಈ ರೀತಿಯ ಕೃತ್ಯವನ್ನು ಮಾಡಿರುವುದು ಅತ್ಯಂತ ಖಂಡನೀಯ. ಅಂಬೇಡ್ಕರ್‌, ಬಸವಣ್ಣ, ವಾಲ್ಮೀಕಿ ಮಹರ್ಷಿಗಳು ಸೇರಿದಂತೆ ದೇಶ ಕಟ್ಟಿದ ಇತರ ಮಹಾನ್‌ ನಾಯಕರಿಗೆ ನಮ್ಮ ಹೃದಯದಲ್ಲಿ ಶಾಶ್ವತ ಸ್ಥಾನವಿದೆ ಎಂದಿದೆ.

ಇದನ್ನು ನೋಡಿ : ಹಿಂದುತ್ವವಾದಕ್ಕೆ ಇರುವುದೊಂದೇ ಪರ್ಯಾಯ ಮಾರ್ಗ ಅಂಬೇಡ್ಕರ್‌ವಾದ – ಸಂತೋಷ್ ಲಾಡ್ Janashakthi Media

Donate Janashakthi Media

Leave a Reply

Your email address will not be published. Required fields are marked *