ಹಾಸನ : ಸಕಲೇಶಪುರ ಉಪವಿಭಾಗಾಧಿಕಾರಿ ರಾಜೇಶ್ ಅವರು ಸಮೀಕ್ಷೆ ಕಾರ್ಯ ನಿಮಿತ್ತ ಅರಕಲಗೂಡು ತಹಶೀಲ್ದಾರ್ ಹಾಗೂ ತಹಶೀಲ್ದಾರ್ ಗ್ರೇಡ್-2 (ಪ್ರಭಾರ) ಆಗಿದ್ದ ಸ್ವಾಮಿ ಸಿ. ವಿವಿಧ ಸ್ಥಳಗಳಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಇಬ್ಬರೂ ಒಂದೇ ಕಾರಿನಲ್ಲಿ ತೆರಳಿದ್ದರು. ತಹಶೀಲ್ದಾರ್ ಕಾರಿನ ಮುಂಬದಿ ಸೀಟಿನಲ್ಲಿ ಗ್ರೇಡ್-2 ತಹಶೀಲ್ದಾರ್ ಕುಳಿತುಕೊಂಡಿದ್ದರು. ಇದನ್ನು ಗಮನಿಸಿದ ಉಪವಿಭಾಗಾಧಿಕಾರಿ ರಾಜೇಶ್ ಕೂಡಲೇ ವಾಹನ ನಿಲ್ಲಿಸಿ, ಗ್ರೇಡ್-2 ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಸನ
ಇದನ್ನೂ ಓದಿ : ರಸ್ತೆ ಬದಿಯಲ್ಲಿ ಕಸ: 218 ಮನೆಗಳ ಮುಂದೆ ಕಸ ಸುರಿದು; 2.80 ಲಕ್ಷ ರೂ. ದಂಡ ವಸೂಲಿ ಮಾಡಿದ ಗಿಬಿಎ
ಉಪವಿಭಾಗಾಧಿಕಾರಿಯಿಂದ ಅಪಮಾನಕ್ಕೊಳಗಾಗಿ ಪ್ರತಿಭಟನೆ ನಡೆಸಿದ ದಲಿತ ಅಧಿಕಾರಿಯನ್ನೇ ಪ್ರಭಾರ ಹುದ್ದೆಯಿಂದ ಕೆಳಗಿಳಿಸಿ ಜಿಲ್ಲಾಧಿಕಾರಿ ಸಹ ದಲಿತ ವಿರೋಧಿ ಧೋರಣೆ ಪ್ರದರ್ಶಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಆಡಳಿತದಲ್ಲಿ ಹಿರಿಯ ಅಧಿಕಾರಿಗಳು ಹೇಳಿದಂತೆ ಕೇಳಬೇಕೆಂಬ ನಿಯಮ ಒಪ್ಪುವಂತದ್ದೇ, ಆದರೆ ಸಕಲೇಶಪುರ ಉಪವಿಭಾಗಾಧಿಕಾರಿಯು ಅರಕಲಗೂಡಿನ ಗ್ರೇಡ್-2 ತಹಶೀಲ್ದಾರ್ (ಪ್ರಭಾರ) ಅವರನ್ನು ನಡು ರಸ್ತೆಯಲ್ಲಿ ಕಾರಿನಿಂದ ಕೆಳಗಿಳಿಸಿ ನಿಂದಿಸಿರುವುದು ತಪ್ಪಲ್ಲವೇ ಎಂದು ಮಾತುಗಳು ಕೇಳಿ ಬರುತ್ತಿವೆ. “ವಾಹನದಲ್ಲಿ ತಹಶೀಲ್ದಾರ್ ಸೀಟಿನಲ್ಲಿ ಕುಳಿತುಕೊಳ್ಳಲು ಯಾರು ನಿನಗೆ ಅನುಮತಿ ನೀಡಿದ್ದು ಎಂದು ಪ್ರಶ್ನಿಸಿ, ಸ್ವಾಮಿ ಸಿ. ಅವರನ್ನು ಕಾರಿನಿಂದ ಕೆಳಗಿಳಿಸಿ ನಿಂದಿಸಿದ್ದಾರೆ. ಹಾಸನ
ಸಕಲೇಶಪುರದ ಉಪವಿಭಾಗಾಧಿಕಾರಿ ರಾಜೇಶ್ ಅವರು ನನ್ನನ್ನು ತಹಶೀಲ್ದಾರ್ ಕಾರಿನಿಂದ ಇಳಿಸಿ, ಸಿಬ್ಬಂದಿ ಹಾಗೂ ಸಾರ್ವಜನಿಕರ ಎದುರು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಗ್ರೇಡ್-2 ತಹಶೀಲ್ದಾರ್ (ಪ್ರಭಾರ) ಸ್ವಾಮಿ ಸಿ. ಅವರು ಅರಕಲಗೂಡು ತಹಶೀಲ್ದಾರ್ ಕಚೇರಿ ಎದುರು ಮೂರು ದಿನ ಅಂಬೇಡ್ಕರ್ ಪೋಟೋ ಹಿಡಿದು ಅಹೋರಾತ್ರಿ ಧರಣಿ ನಡೆಸಿದ್ದರು. ದಲಿತ ಸಂಘಟನೆಗಳು ಕೂಡ ಅಧಿಕಾರಿಯ ಪ್ರತಿಭಟನೆ ಬೆಂಬಲಿಸಿದ್ದವು.
“ಹಿರಿಯ ಅಧಿಕಾರಿ ತನ್ನನ್ನು ಸಾರ್ವಜನಿಕರು ಹಾಗೂ ಸಿಬ್ಬಂದಿ ಎದುರು ಅವಮಾನ ಮಾಡಿದ್ದು ಮಾನಸಿಕವಾಗಿ ನನ್ನನ್ನು ಘಾಸಿಗೊಳಿಸಿದೆ. ದಲಿತನಾಗಿ ಹುಟ್ಟಿದ್ದೇ ತಪ್ಪಾ ಎಂಬ ಪ್ರಶ್ನೆ ಮೂಡುತ್ತಿದ್ದೆ. ಕುಟುಂಬದೊಂದಿಗೆ ಚರ್ಚಿಸಿ ಸ್ವಯಂ ನಿವೃತ್ತಿ ತೆಗೆದೊಕೊಳ್ಳುವ ಆಲೋಚನೆ ಮಾಡಿದ್ದೇನೆ” ಎಂದು ಶಿರಸ್ತೇದಾರ್ ಸ್ವಾಮಿ ಸಿ. ಹೇಳಿದ್ದಾರೆ.
ಪ್ರತಿಭಟನಾನಿರತ ಅಧಿಕಾರಿ ಹಾಗೂ ದಲಿತ ಸಂಘಟನೆಗಳ ಸಮಸ್ಯೆ ಬಗೆಹರಿಸಲು ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಆಡಳಿತ ವರ್ಗದಲ್ಲಿ ಹಿರಿಯ ಅಧಿಕಾರಿಗಳು ಹೇಳಿದಂತೆ ಕಿರಿಯ ಅಧಿಕಾರಿಗಳು ಕೇಳಬೇಕು ಎಂದು ತಿಳಿಸಿ, ಶಿರಸ್ತೇದಾರ್ ಸ್ವಾಮಿ ಸಿ. ಗೆ ನೀಡಿದ್ದ ಅರಕಲಗೂಡು ತಹಶೀಲ್ದಾರ್ ಗ್ರೇಡ್ -2 (ಪ್ರಭಾರ) ಹುದ್ದೆಯನ್ನು ರದ್ದುಗೊಳಿಸಿ ಶಿರಸ್ತೇದಾರ್ ಹುದ್ದೆಯಲ್ಲಿಯೇ ಮುಂದುವರಿಸಿ ಆದೇಶ ಮಾಡಿದ್ದಾರೆ.
ಇದನ್ನೂ ನೋಡಿ : ಧರ್ಮಸ್ಥಳ ಪ್ರಕರಣ | ಎಸ್ಐಟಿ ಪೊಲೀಸರು ದೌರ್ಜನ್ಯ ಮಾಡುವಂತಿಲ್ಲ- ಹೈಕೋರ್ಟ್ ಆದೇಶ Janashakthi Media
