ಹೈನು ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಹಾಕುವುದನ್ನು ರೈತ ಸಂಘಟನೆಗಳು ತೀಕ್ಷ್ಣವಾಗಿ ಖಂಡಿಸಿವೆ. ಹೆಚ್ಚುತ್ತಿರುವ ಲಾಗುವಾಡುಗಳ ವೆಚ್ಚವನ್ನು ಕಷ್ಟಪಟ್ಟು ನಿಭಾಯಿಸುತ್ತಿರುವ ಸಣ್ಣ ಡೈರಿಗಳು ಮತ್ತು ರೈತರಿಗೆ ಇದು “ಮರಣ ಶಾಸನ” ವಾಗಲಿದೆ ಎಂದು ಅವು ಹೇಳಿವೆ.
ಜಿಎಸ್‍ಟಿ ಮಂಡಳಿಯ 47ನೇ ಸಭೆಯು ಹಾಲಿನ ಉತ್ಪನ್ನಗಳ ಮೇಲೆ 5% ಜಿಎಸ್‌ಟಿ ವಿಧಿಸಲು ಮತ್ತು ಹಾಲು ಕರೆಯುವ ಯಂತ್ರಗಳು ಸೇರಿದಂತೆ ಡೈರಿ ಯಂತ್ರಗಳ ಮೇಲಿನ ತೆರಿಗೆ ದರವನ್ನು 12% ರಿಂದ 18% ಕ್ಕೆ ಹೆಚ್ಚಿಸುವಂತೆ ಮಾಡಿರುವ ಶಿಫಾರಸುಗಳು ಹಾಲು ಉತ್ಪಾದನೆಯಲ್ಲಿ ತೊಡಗಿರುವ 9 ಕೋಟಿಗೂ ಹೆಚ್ಚು ಕುಟುಂಬಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷ ಅಶೋಕ್ ಧವಳೆ ಹೇಳಿದ್ದಾರೆ. ಬಿಜೆಪಿಯು ರಾಜಕೀಯ ಅಧಿಕಾರ ಮತ್ತು ಬಂಡವಾಳದ ಕೇಂದ್ರೀಕರಣವನ್ನು ಬಯಸುತ್ತಿದ್ದು, ಈ ಕ್ರಮವು ಆ ದಿಕ್ಕಿನಲ್ಲೇ ಇದೆ ಎಂದು ಅವರು ಹೇಳಿದರು.
“ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶವಾಗಿದೆ. ಈ ಕ್ಷೇತ್ರದಲ್ಲಿ ತೊಡಗಿರುವವರು ಹೆಚ್ಚಿನವರು ಸಣ್ಣ ಉತ್ಪಾದಕರು. 75% ಗ್ರಾಮೀಣ ಕುಟುಂಬಗಳು 2-4 ಹಸುಗಳನ್ನು ಹೊಂದಿವೆ. ಅತ್ಯಂತ ಕೆಳಮಟ್ಟದ ಸಾಮಾಜಿಕ ಸ್ತರದ ಮಹಿಳೆಯರು ಮತ್ತು ರೈತರು ಹೈನುಗಾರಿಕೆ ವಲಯದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಜಾನುವಾರು ವಲಯವು ಕೃಷಿ ವಲಯದ ನಾಲ್ಕನೇ ಒಂದು ಭಾಗದ ಉತ್ಪಾದನೆಗೆ ಕೊಡುಗೆ ನೀಡುತ್ತದೆ ಎಂಬ ಅಂಶವು 9 ಕೋಟಿ ಕೃಷಿ ಕುಟುಂಬಗಳಿಗೆ ಈ ಕ್ಷೇತ್ರದ ಆರ್ಥಿಕ ಮಹತ್ವವನ್ನು ತೋರಿಸುತ್ತದೆ. ಆದರೆ ಜಿಎಸ್‍ಟಿಯಲ್ಲಿನ ಇತ್ತೀಚಿನ ಬದಲಾವಣೆಗಳಿಂದ ಈಗಾಗಲೇ ಹೆಚ್ಚಿನ ಹಣದುಬ್ಬರದ ಒತ್ತಡದಲ್ಲಿ ತತ್ತರಿಸುತ್ತಿರುವ ಪ್ರಾಥಮಿಕ ಉತ್ಪಾದಕರು ಅಥವಾ ಗ್ರಾಹಕರಿಗೆ ಪ್ರಯೋಜನವಾಗುವುದಿಲ್ಲ. ಬೆಲೆಗಳ ಹೆಚ್ಚಳವು ತುಳಿತಕ್ಕೊಳಗಾದ ವರ್ಗ, ಜಾತಿ ಮತ್ತು ಲಿಂಗದ ಜನರ ಪೌಷ್ಟಿಕಾಂಶದ ಅವಶ್ಯಕತೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ” ಎಂದು ಅಶೋಕ ಧವಳೆ ಹೇಳುತ್ತಾರೆ.
ಕೇಂದ್ರ ಹಣಕಾಸು ಸಚಿವಾಲಯವು ಜಿಎಸ್‍ಟಿಯನ್ನು ಸಂವಿಧಾನದ “ಮೂಲ ರಚನೆ” ಮತ್ತು ಸಹಕಾರಿ ಒಕ್ಕೂಟ ತತ್ವದ ಎಲ್ಲಾ ಪರಂಪರೆಗಳನ್ನು ಒಡೆದುಹಾಕಲು ಪ್ರಬಲ ಸಾಧನವಾಗಿ ಬಳಸಿದೆ ಎಂದು ಅವರು ಹೇಳಿದರು. “ರಾಜ್ಯಗಳು ತಮ್ಮ ನಿರ್ದಿಷ್ಟ ಉತ್ಪಾದನಾ ಮಾದರಿಗಳ ಪ್ರಯೋಜನವನ್ನು ಪಡೆಯುವ ತೆರಿಗೆ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲು ಅನುವು ಮಾಡಿಕೊಡುತ್ತಿದ್ದ ತಮ್ಮ ಹಣಕಾಸಿನ ಸ್ವಾಯತ್ತತೆಯನ್ನು ಬಿಟ್ಟುಕೊಡುವುದರೊಂದಿಗೆ, ಹಣಕಾಸು ನೀತಿಗಳಲ್ಲಿ ಕೇಂದ್ರ ಸರ್ಕಾರ ಅತ್ಯಂತ ಶಕ್ತಿಶಾಲಿಯಾಗಿ ಬಿಟ್ಟಿದೆ. ಕಳೆದ ಐದು ವರ್ಷಗಳಲ್ಲಿ ಜಿಎಸ್‌ಟಿ ವ್ಯವಸ್ಥೆಯು ಬಡ ರೈತರು ಮತ್ತು ಸಣ್ಣ ಉದ್ಯಮಿಗಳ ಹಿತಾಸಕ್ತಿಗಳನ್ನು ಬಲಿಗೊಟ್ಟು ಹಣಕಾಸು ಮತ್ತು ಗುತ್ತೇದಾರಿ ಮನೆತನಗಳ ವರ್ಗ ಹಿತಾಸಕ್ತಿಗಳಿಗೆ ಅನುಕೂಲವಾಗುವ ಹಣಕಾಸಿನ ನೀತಿಗಳಿಗೆ ದಾರಿ ಮಾಡಿಕೊಟ್ಟಿದೆ”ಎಂದು ಮುಂದುವರೆದು ಅವರು ಹೇಳುತ್ತಾರೆ.
ಡೈರಿ ಉದ್ಯಮದ ಕಾರ್ಪೊರೇಟೀಕರಣದತ್ತ ಇನ್ನೊಂದು ಹಜ್ಜೆ
ಹೌರಾದ ಫೌಂಡ್ರಿ ಉದ್ದಿಮೆ ಮತ್ತು ಸೂರತ್ ನ ಜವಳಿ ಉದ್ಜಿಮೆಯ ಉದಾಹರಣೆಯನ್ನೇ ತಗೊಳ್ಳಬಹುದು. ಜಿಎಸ್‌ಟಿ ವ್ಯವಸ್ಥೆ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳಲ್ಲಿ ವಿವಿಧ ಹಂತಗಳ ಮೌಲ್ಯ ಸರಪಳಿಗಳಲ್ಲಿ ಇರುವವರ ಮೇಲೆ ನಕಾರಾತ್ಮ ಪರಿಣಾಮ ಬೀರಿ, ಅದರ ಪ್ರಯೋಜನ ಪಡೆದ ಈ ಕ್ಷೇತ್ರಗಳ ದೊಡ್ಡ ಉದ್ಯಮಿಗಳು ತಮ್ಮ ಪ್ರಭಾವವನ್ನು ಕ್ರೋಡೀಕರಿಸಿಕೊಳ್ಳಲು ಅನುವು ಮಾಡಿ ಕೊಟ್ಟಿರುವುದು ಸ್ಪಷ್ಟವಾಗಿ ಕಾಣುತ್ತದೆ ದೊಡ್ಡ ಆಟಗಾರರ ಬಲವರ್ಧನೆಯನ್ನು ಇದು ಸ್ಪಷ್ಟವಾಗಿ ಪ್ರದರ್ಶಿಸಿದೆ ಎಂದು ಹೇಳಿದರು.
ಇದೇ ರೀತಿಯ ಭಾವನೆಗಳನ್ನು ಸಣ್ಣ ಡೈರಿ ವ್ಯಾಪಾರಿ ಮತ್ತು ಜೈ ಕಿಸಾನ್ ಆಂದೋಲನದ ವಕ್ತಾರ ಮನೀಶ್ ಭಾರತಿ ‘ನ್ಯೂಸ್‌ಕ್ಲಿಕ್’ ಸುದ್ದಿ ಸಂಸ್ಥೆಯ ವರದಿಗಾರರಿಗೆ ವ್ಯಕ್ತಪಡಿಸಿದ್ದಾರೆ.
“ವೈಯಕ್ತಿಕ ವ್ಯವಹಾರಗಳ ಯಶಸ್ಸು ನಿರ್ದಿಷ್ಟ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಯ ಸಾಮರ್ಥ್ಯಗಳ ಮೇಲೆ ಅವಲಂಬಿತವಾಗಿರುತ್ತದೆ ಆದರೆ ಸರ್ಕಾರವು ನೀತಿಗಳನ್ನು ಪರಿಚಯಿಸಿದಾಗ ಸನ್ನಿವೇಶವು ಸಂಪೂರ್ಣವಾಗಿ ರೂಪಾಂತರಗೊಳ್ಳುತ್ತದೆ. ಅದು ಹೈನುಗಾರಿಕೆ ವಲಯದಲ್ಲಿ ನಿಖರವಾಗಿ ನಡೆಯುತ್ತಿದೆ. ಉತ್ಪಾದಿಸಿದ ಬಹುಪಾಲು ಹಾಲನ್ನು ಒಕ್ಕೂಟಗಳ ಮೂಲಕ ಸಂಸ್ಕರಿಸಲಾಗುತ್ತದೆ ಮತ್ತು ಅದನ್ನು ಪ್ಯಾಕೇಜ್ ಮಾಡಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಈಗ, ಈ ಒಕ್ಕೂಟಗಳು ಅಂತಿಮವಾಗಿ ರೈತರು ಮತ್ತು ಗ್ರಾಹಕರಿಗೆ ಹೊರೆಯನ್ನು ವರ್ಗಾಯಿಸುತ್ತವೆ. ನಾವು ರೈತರ ವಿಷಯಕ್ಕೆ ಬಂದಾಗ, ಮೇವು, ಔಷಧಗಳು ಅಥವಾ ಇತರ ಎಲ್ಲ ಲಾಗುವಾಡುಗಳ ವೆಚ್ಚಗಳು ಏರಿದೆ. ಮೇವಿನ ಬೆಲೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕ್ವಿಂಟಲ್‌ಗೆ 800 ರೂ.ನಿಂದ 1600 ರೂ.ಗೆ ಏರಿಕೆಯಾಗಿದೆ. ಅದೇ ರೀತಿ, ಔಷಧಿಗಳ ಬೆಲೆಗಳು ಏರಿಕೆಯಾಗಿದ್ದರೂ ಆದಾಯದಲ್ಲಿ ಏರಿಕೆಯಾಗಿಲ್ಲ. ಒಂದು ಉದಾಹರಣೆಯನ್ನು ಹೇಳುವುದಾದರೆ, ಉತ್ತರ ಪ್ರದೇಶದ ಅತಿದೊಡ್ಡ ಡೈರಿಗಳಲ್ಲಿ ಒಂದಾದ ಪರಾಗ್ ಡೈರಿಯು ಹಿಂದಿನ ಐದು ವರ್ಷಗಳಿಂದ ರೈತರಿಂದ ಸಂಗ್ರಹಿಸಿದ ಹಾಲಿಗೆ ಒಂದು ಪೈಸೆಯನ್ನೂ ಹೆಚ್ಚಿಸಿಲ್ಲ” ಎಂದು ಅವರು ವಿವರಿಸಿದರು.
ಡೈರಿ ಉದ್ದಿಮೆಯನ್ನು ಕಾರ್ಪೋರೇಟ್‍ಗಳಿಗೆ ವಹಿಸಿ ಕೊಡುವ ಕೆಲಸ ಆಗಲೇ ಆರಂಭವಾಗಿದೆ ಎಂದು ಮನೀಶ್ ಭಾರತಿಯವರೂ ಹೇಳುತ್ತಾರೆ. ಸರ್ಕಾರವು ಹಾಲಿನ ಪೋಷಕಾಂಶ ವರ್ಧನೇ ಮಾಡಬೇಕು ಎಂದು ಸೂಚಿಸುವುದರೊಂದಿಗೆ ಇದು ಆರಂಭವಾಗಿದೆ. ಇದು ಮಕ್ಕಳಲ್ಲಿ ವಿಟಮಿನ್ ಎ ಯ ತೀವ್ರ ಕೊರತೆಯಿದೆ, ಅದನ್ನು ತುಂಬಲು ಪೋಷಕಾಂಶ ವರ್ಧಿತ ಹಾಲನ್ನು ಮಕ್ಕಳಿಗೆ ಕೊಡಬೇಕು ಎಂಬ ಪೋಷಕಾಂಶ ವರದಿ ಬಂದ ಮೇಲೆ ಈ ಸೂಚನೆ ಬಂದಿತ್ತು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಈ ರೀತಿ ಹಾಲಿನ ಪೋಷಕಾಂಶ ವರ್ಧಿಸುವ ತಂತ್ರಜ್ಞಾನದ ಮೇಲೆ ಕೆಲವೇ ದೊಡ್ಡ ಡೈರಿ ಬ್ರಾಂಡುಗಳ ಏಕಸ್ವಾಮ್ಯವಿದೆ. ಪ್ರಸ್ತಾಪಿಸಿದ ನಂತರ ಹೈನುಗಾರಿಕೆ ಉದ್ಯಮವನ್ನು ಕಾರ್ಪೊರೇಟ್ ವಲಯಕ್ಕೆ ಹಸ್ತಾಂತರಿಸಲು ಪ್ರಾರಂಭಿಸಿತು ಎಂದು ಭಾರತಿ ಸಮರ್ಥಿಸಿಕೊಂಡರು. ಅಪೌಷ್ಟಿಕತೆಯ ವರದಿಯ ನಂತರ ಇದು ಬಂದಿತು ಮತ್ತು ಪೌಷ್ಟಿಕಾಂಶವನ್ನು ಒದಗಿಸಲು ಹಾಲನ್ನು ಬಲಪಡಿಸಬೇಕು ಎಂದು ಸೂಚಿಸಿತು. ಅವರು ಹೇಳಿದರು, “ಹಾಲನ್ನು ಬಲಪಡಿಸುವ ತಂತ್ರಜ್ಞಾನವು ಕೆಲವು ದೊಡ್ಡ ಡೈರಿ ಬ್ರಾಂಡ್‌ಗಳ ಏಕಸ್ವಾಮ್ಯವಾಗಿ ಉಳಿದಿದೆ. ಒಂದು ದೊಡ್ಡ ಸಹಕಾರಿ ಸಂಸ್ಥೆಯಾದ ಅಮುಲ್ ಕೂಡ ಈ ಪ್ರಸ್ತಾಪವನ್ನು ವಿರೋಧಿಸಬೇಕಾಯಿತು. ಹೀಗೆ, ಡೈರಿ ಕ್ಷೇತ್ರವನ್ನು ದೊಡ್ಡ ಉದ್ಯಮಿಗಳಿಗೆ ವಹಿಸಿ ಕೊಡುವ ಪ್ರಕ್ರಿಯೆ ಆಗಲೇ ಆರಂಭವಾಗಿದೆ, ಈ ಜಿಎಸ್‍ಟಿ ಶಿಫಾರಸುಗಳು ಈ ದಿಕ್ಕಿನಲ್ಲಿ ಇನ್ನೊಂದು ಹೆಜ್ಜೆಯಾಗಿದೆಯಷ್ಟೇ ಎನ್ನುತ್ತಾರೆ ಮನೀಶ್ ಭಾರತಿಯವರೂ ಕೂಡ.