ರಾಮನಗರ : “ನನ್ನನ್ನು ಸೋಲಿಸಬೇಕು ಎಂದು ನಿರ್ದೇಶಕ, ನಿರ್ಮಾಪಕ, ಚಿತ್ರಕತೆ ಬರೆಯುವವರು, ನಟ, ಬಂಡವಾಳ ಹೂಡಿಕೆ ಮಾಡುವವರು ಎಲ್ಲಾ ಒಂದಾಗಿದ್ದಾರಂತೆ. ಸಿನಿಮಾ ರೀಲ್ ಬಿಟ್ಟಂತೆ ಇಲ್ಲಿ ಬಿಟ್ಟರೇ ಜನ ಒಪ್ಪುವುದಿಲ್ಲ” ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ತಮ್ಮ ರಾಜಕೀಯ ಎದುರಾಳಿ ಕುಮಾರಸ್ವಾಮಿ, ಮುನಿರತ್ನ ಹಾಗೂ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು. ಡಿ.ಕೆ. ಸುರೇಶ್
ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮೊದಲ ದಿನವಾದ ಗುರುವಾರ ಡಿ.ಕೆ. ಸುರೇಶ್ ಅವರು ರಾಮನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸುರೇಶ್ ಅವರು ತಮ್ಮ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಡಿ.ಕೆ. ಸುರೇಶ್
“ಎಲ್ಲರು ಒಂದಾಗಿದ್ದಾರಂತೆ ಅದಕ್ಕೆ ನನ್ನನ್ನು ಸೋಲಿಸುತ್ತಾರಂತೆ? ಏತಕ್ಕೆ ನನ್ನ ಸೋಲಿಸುತ್ತೀರ? ಬಡವರ ಪರವಾಗಿ, ರೈತರ ಪರವಾಗಿ, ಕನ್ನಡಿಗರ ಪರವಾಗಿ ದನಿ ಎತ್ತಿದಕ್ಕಾ? ನಿಮ್ಮ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದಕ್ಕೆ ನನ್ನನ್ನು ಸೋಲಿಸಲು ಹೊರಟ್ಟಿದ್ದೀರಾ? ಅವರಿಗೆ ನಿಜ ಜೀವನಕ್ಕು, ಸಿನಿಮಾಗೂ ವ್ಯತ್ಯಾಸ ಗೊತ್ತಿಲ್ಲ. ನಿಜ ಜೀವನದಲ್ಲಿ ಸೋಲಿಸಬೇಕೆ ಹೊರತು, ಸಿನಿಮಾದಲ್ಲಿ ಅಲ್ಲ. ನೀವು ಬಿಟ್ಟಿರುವ ಎಲ್ಲಾ ರೀಲುಗಳು ಡಬ್ಬ ಸೇರಿಕೊಂಡಿವೆ. ಡಿ.ಕೆ. ಸುರೇಶ್
ಯಾರೋ ಹೇಳುತ್ತಿದ್ದರು ಡಿ.ಕೆ.ಶಿವಕುಮಾರ್ ಕಾಲಿಗೆ ಬೀಳಲು ಬಂದಿದ್ದರು ಎಂದು. ಇದೇ ಡಿ.ಕೆ.ಶಿವಕುಮಾರ್ ಅವರ ಕಾಲಿಗೆ ಬಿದ್ದು ಶಾಸಕರಾಗಲು, ಬಿಕ್ಷೆ ಬೇಡಿದವರು, ಆಸ್ತಿ ಉಳಿಸಿಕೊಂಡವರು ಯಾರು ಎಂದು ಈ ಕ್ಷೇತ್ರದ ಜನ ನೋಡಿದ್ದಾರೆ. ಡಿ.ಕೆ. ಸುರೇಶ್
ರಾಜಕೀಯ ಪ್ರವೇಶ ಮಾಡುವ ಹೊತ್ತಿನಲ್ಲಿ ಶಿವಕುಮಾರ್ ಅವರ ಮನೆ ಬಾಗಿಲನ್ನು ಬೆಳಗ್ಗೆಯಿಂದ ಸಂಜೆಯ ತನಕ ಕಾಯುತ್ತಿದ್ದರು. ಈ ವಿಚಾರ ಎಲ್ಲರಿಗೂ, ಮಾಧ್ಯಮದವರಿಗೂ ಗೊತ್ತು. ಆದರೂ ಅವರ ವಿಚಾರವನ್ನು ಬೆಳಗ್ಗೆಯಿಂದ ಸಂಜೆಯ ತನಕ ತೋರಿಸುತ್ತಾರೆ.
ಮುಂದಿನ ಮೂವತ್ತು ದಿನಗಳ ಕಾಲ ಯಾರು, ಯಾರು ಏನು ಮಾತನಾಡುತ್ತಾರೆ ಎಂಬುದನ್ನು ನಾವು, ನೀವು ಕೇಳಬೇಕಾಗಿದೆ. ಅದಕ್ಕೆ ಉತ್ತರ ಕೊಡುವ ಕಾಲ ಮುಂದಿದೆ. ಕಣ್ಣೀರು ಹಾಕುವವರಿಗೆ ಈ ಚುನಾವಣೆಗೆ ಒಂದು ಕರ್ಮಭೂಮಿ, ಇನ್ನೊಂದು ಚುನಾವಣೆಗೆ ಮತ್ತೊಂದು ಕರ್ಮಭೂಮಿ. ಯಾವ, ಯಾವ ಕರ್ಮಭೂಮಿಯಲ್ಲಿ ಏನೇನು ಸುಳ್ಳು ಹೇಳಿದ್ದಾರೋ ಗೊತ್ತಿಲ್ಲ.
ನಾವು ಮುಂದಿನ 4 ವರ್ಷಗಳ ಕಾಲ ರಾಜ್ಯದ ಜನರ ಕಷ್ಟಗಳನ್ನು ಪರಿಹರಿಸಲು ಬದ್ಧರಾಗಿದ್ದೇವೆ. ಸುಳ್ಳಿನ ಗ್ಯಾರಂಟಿಗಳನ್ನು ಹೊತ್ತುಕೊಂಡು ಬಿಜೆಪಿಯವರು ಮತ ಕೇಳಲು ಬರುತ್ತಿದ್ದಾರೆ. ಸುಳ್ಳು ಹೇಳುವವರ ಜೊತೆ ಕಣ್ಣೀರು ಹಾಕುವವರು ಸೇರಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಡಿ.ಕೆ. ಸುರೇಶ್
ಚುನಾವಣೆಗಳು, ಸರ್ಕಾರಗಳು ಬರುತ್ತವೆ ಹೋಗುತ್ತವೆ, ಆದರೆ ಯಾರು ಸುಳ್ಳು ಹೇಳುತ್ತಾರೆ, ಯಾರು ಸತ್ಯವನ್ನು ಹೇಳುತ್ತಾರೆ, ಸತ್ಯದಿಂದ ನಡೆದುಕೊಳ್ಳುತ್ತಾರೆ ಎನ್ನುವುದು ಈ ಚುನಾವಣೆಯ ಪ್ರಸ್ತುತ ವಿಚಾರ. ಈ ಚುನಾವಣೆ ಮಾಧ್ಯಮದವರಿಗೆ ಹೊಸದಾಗಿ ಕಾಣಿಸುತ್ತಿದೆ. ಆದರೆ ನಮ್ಮ ರೈತರು, ಬಡವರು, ಹಿಂದುಳಿದವರಿಗೆ, ಮಹಿಳೆಯರಿಗೆ, ಯುವಕರಿಗೆ ಈ ಚುನಾವಣೆ ಹೊಸದಲ್ಲ. ಡಿ.ಕೆ. ಸುರೇಶ್
ಇಂದು ಇತಿಹಾಸ ಬದಲಾಗಿದೆ. ಐದು ಗ್ಯಾರಂಟಿಗಳನ್ನು ರಾಜ್ಯದ ಎಲ್ಲಾ ಜನರಿಗೆ ನೀಡಿದ್ದೇವೆ. ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳಿಗೆ ಮತಹಾಕಿದ ಜನರಿಗೂ ನಮ್ಮ ಗ್ಯಾರಂಟಿಗಳು ತಲುಪುತ್ತಿವೆ. ಎಲ್ಲರ ಮನೆಯಲ್ಲಿ ವಿದ್ಯುತ್ ದೀಪ ಉರಿಯುತ್ತಿದೆ. ಗೃಹಲಕ್ಷ್ಮಿ ತಲುಪುತ್ತಿದೆ, ಅಕ್ಕಿ, ಹಣ, ಯುವನಿಧಿ ತಲುಪುತ್ತಿದೆ. ಇವು ಮೋದಿ ಗ್ಯಾರಂಟಿಯಿಂದಾಗಿಲ್ಲ, ಕಾಂಗ್ರೆಸ್ ಗ್ಯಾರಂಟಿಯಿಂದ ಆಗಿದೆ. ಡಿ.ಕೆ. ಸುರೇಶ್
ಮೋದಿ ಗ್ಯಾರಂಟಿ ಎಂದರೆ ಕೇವಲ ಸುಳ್ಳು. ನಿರುದ್ಯೋಗಿ ಯುವಕರನ್ನು ಪಕೋಡ ಮಾರಲು ಹೇಳಿದ ಸುಳ್ಳು. ನಮ್ಮ ತಾಯಂದಿರಿಗೆ ಗ್ಯಾಸ್ ಸಿಲೆಂಡರ್ ಅನ್ನು ಪೂಜೆ ಮಾಡಿ ಎಂದು ಹೇಳಿದ ಸುಳ್ಳು. ಜಿಎಸ್ಟಿ ತೆಗೆಯುತ್ತೇನೆ ಎಂದು ಹೇಳಿದ ಸುಳ್ಳು. ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿಗಳು ಸುಳ್ಳು ಎಂದು ಬಿಂಬಿಸಲು ಪ್ರಯತ್ನ ಮಾಡಿದರು. ನೀವು ಕಮಿಷನ್ ಪಡೆಯುವ ಹಣದಲ್ಲೇ ನಾವು ಗ್ಯಾರಂಟಿ ನೀಡುತ್ತೇವೆ ಎಂದು ಸಿದ್ದರಾಮಯ್ಯ ಅವರು ತಿರುಗೇಟು ನೀಡಿದರು.
ಕಳೆದ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು ಅನೇಕ ಭಾಗ್ಯಗಳನ್ನು ಕೊಟ್ಟು ಕರ್ನಾಟಕದಲ್ಲಿ ಬದಲಾವಣೆ ತಂದವರು ಸಿದ್ದರಾಮಯ್ಯ ಅವರು. ಹಸಿದವರ, ರೈತರ ಕಷ್ಟಗಳನ್ನು ಅರಿತು ಕೆಲಸ ಮಾಡಿದರು. ನಂತರ ಬಂದಂತಹ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ಗಾಗಿ ಈ ರಾಜ್ಯವನ್ನು ದಿವಾಳಿ ಮಾಡಿದರು. ವಿರೊಧ ಪಕ್ಷದಲ್ಲಿ ಇದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ರಾಜ್ಯದಾದ್ಯಂತ ಪ್ರವಾಸ ಮಾಡಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ಇಕ್ಬಾಲ್ ಅವರನ್ನು ಗೆಲ್ಲಿಸಲು ಗ್ಯಾರಂಟಿ ಸುಳ್ಳು ಹೇಳುತ್ತಿದ್ದಾರೆ. ಕುಸುಮ ಅವರನ್ನು, ಡಾ.ರಂಗನಾಥ್ ಅವರನ್ನು ಗೆಲ್ಲಿಸಿದರೆ ಏನು ಸಿಗುವುದಿಲ್ಲ ಎಂದರು. ಎಲ್ಲಿದೆ ಹಣ? ಎಂದು ಕೇಳಿದರು. ಆದರೆ ಇಂದು ನಮ್ಮ ಪಕ್ಷ ಅಧಿಕಾರಕ್ಕೆ ಬಂದು ಜನರಿಗೆ ಈ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ತಲುಪಿಸಿದೆ. ಡಿ.ಕೆ. ಸುರೇಶ್
ಇದನ್ನು ಓದಿ : ಭಾರತದ ಪ್ರಜಾಪ್ರಭುತ್ವ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದೇ ಕಾಲಕಾಲಕ್ಕೆ ನಡೆಯುವ ಚುನಾವಣೆಗಳ ಮೂಲಕ
ಇಷ್ಟು ದಿನ ಮೌನವಾಗಿದ್ದವರಿಂದ ಈಗ ಮೇಕೆದಾಟು ಜಪ:
ಇಂದು ಚುನಾವಣೆ ಸಮಯದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಮೇಕೆದಾಟು ಯೋಜನೆ ಆಗ್ರಹಿಸಿ ಮಾಡಿದ ಹೋರಾಟದ ವೇಳೆ ಒಂದೇ ಒಂದು ದನಿ ಎತ್ತಿದ್ದರೆ, ಯೋಜನೆಗೆ ಅನುಮತಿ ನೀಡಿ ಎಂದು ಪ್ರಧಾನಿಗಳ ಬಳಿ ಮನವಿ ಸಲ್ಲಿಸಿದ್ದರೆ ಅವರ ಬದ್ಧತೆಯನ್ನು ಒಪ್ಪುತ್ತಿದ್ದೆ. ಇಷ್ಟು ದಿನ ಮೌನವಾಗಿದ್ದವರು ಈಗ ಮೇಕೆದಾಟು ಜಪ ಮಾಡುತ್ತಿದ್ದಾರೆ. ಇವರ ನಾಟಕ ಸರಿಯೇ ಎಂದು ರೈತರು, ಬೆಂಗಳೂರಿಗರು ತೀರ್ಮಾನ ಮಾಡಬೇಕು.
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಮುಂದಿನ ಆರು ತಿಂಗಳಲ್ಲಿ ಸಂಪೂರ್ಣ ಬೆಂಗಳೂರಿಗೆ ಕುಡಿಯುವ ನೀರನ್ನು ನೀಡಲಿದ್ದಾರೆ. 6 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ನೀಡುತ್ತಿದ್ದಾರೆ. ಮೇಕೆದಾಟು ಯೋಜನೆಗೆ ಪಕ್ಷಾತೀತವಾಗಿ ಬೆಂಬಲ ಕೇಳಿದರು ನೀಡಲಿಲ್ಲ. ನಿಮ್ಮನ್ನು ಜನ ನೋಡಿದ್ದಾರೆ, ಅವರು ತೀರ್ಮಾನ ಮಾಡುತ್ತಾರೆ.
ನಾನು ಕ್ಷೇತ್ರದ ಪ್ರತಿ ಜನತೆಯ ಕಷ್ಟಗಳನ್ನು ಆಲಿಸಿದ್ದೇನೆ. ಕಂದಾಯ ಇಲಾಖೆಯಲ್ಲಿ ಆಗುತ್ತಿದ್ದ ಅನ್ಯಾಯಗಳನ್ನು ಸರಿಪಡಿಸಿದ್ದೇನೆ. ಪ್ರತಿ ಗ್ರಾಮಗಳಿಗೆ ಬಂದು ಕಾರ್ಯಕ್ರಮಗಳನ್ನು ರೂಪಿಸಿದ್ದೇನೆ. ನಾನು ಈ ಜಿಲ್ಲೆಯ ಸೇವಕ, ನಿಮ್ಮ ಮಣ್ಣಿನ ಮಗನಾಗಿ ಕೆಲಸ ಮಾಡಿದ್ದೇನೆ. ಜಿಎಸ್ಟಿ ವಿರುದ್ಧ, ಕನ್ನಡಿಗರ ತೆರಿಗೆ ಹಣದ ಪರವಾಗಿ, ಬೆಲೆ ಏರಿಕೆ ವಿರುದ್ಧ ಹೋರಾಟವನ್ನು ಪಕ್ಷದಿಂದ ಮಾಡಿದ್ದೇವೆ.
ರಾಜ್ಯಕ್ಕಾದ ಅನ್ಯಾಯ ಪ್ರಶ್ನಿಸಿದ್ದಕ್ಕೆ ದೇಶದ್ರೋಹಿ ಪಟ್ಟ ಕಟ್ಟಿದರು
ಕನ್ನಡಿಗರ ತೆರಿಗೆ ಹಣವನ್ನು ಉತ್ತರ ಭಾರತಕ್ಕೆ ನೀಡಿ ಲೂಟಿ ಮಾಡಲಾಗುತ್ತಿದೆ ಎಂದು ದನಿ ಎತ್ತಿದ ಕಾರಣಕ್ಕೆ ಬಿಜೆಪಿಯವರು ದೇಶದ್ರೋಹಿ ಪಟ್ಟ ಕಟ್ಟಿದರು. ನಮ್ಮ ತೆರಿಗೆ ನಮ್ಮ ಹಕ್ಕು, ನಮ್ಮ ನೀರು ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. 4.30 ಲಕ್ಷ ಕೋಟಿ ತೆರಿಗೆ ಹಣವನ್ನು ಕನ್ನಡಿಗರು ಕೇಂದ್ರಕ್ಕೆ ನೀಡಿದ್ದಾರೆ. ರಾಜ್ಯದ ಬಜೆಟ್ 3.71 ಲಕ್ಷ ಕೋಟಿ, ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಿಂದ ಕೇಂದ್ರಕ್ಕೆ 24 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ನೀಡಿದ್ದೇವೆ. ಆದರೆ ಅವರು ನಮಗೆ ಮರಳಿ ಕೊಟ್ಟಿರುವುದು ಕೇವಲ 2.94 ಲಕ್ಷ ಕೋಟಿ ಮಾತ್ರ.
ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಕಳೆದ 10 ವರ್ಷಗಳಲ್ಲಿ ಕರ್ನಾಟಕ, ಬೆಂಗಳೂರು ಅಭಿವೃದ್ದಿಗೆ ಬಿಜೆಪಿ ಸರ್ಕಾರದ ಕೊಡುಗೆ ಏನು? ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ನಿರುದ್ಯೋಗ ಸಮಸ್ಯೆ, ನೀರಿನ ಸಮಸ್ಯೆ ಪರಿಹಾರಕ್ಕೆ ಬಿಜೆಪಿಯವರ ಕೊಡುಗೆ ಏನು ಎಂದು ಕೇಳಿದರೆ, ನನಗೆ ದೇಶದ್ರೋಹಿ ಪಟ್ಟ ಕಟ್ಟುತ್ತಾರೆ.
ಕನ್ನಡಿಗರ ದನಿಯಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಈ ಹೋರಾಟ ನಿರಂತರ, ಯಾರ ಬೆದರಿಕೆಗೂ ಜಗ್ಗುವ ವ್ಯಕ್ತಿ ನಾನಲ್ಲ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ಉದ್ಯೋಗ ಖಾತ್ರಿ ಸೇರಿದಂತೆ ಅನೇಕ ಯೋಜನೆಗಳು ಮನೆ, ಮನೆಗೆ ತಲುಪಿಸುವ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿಗಳಿಂದ ರಾಮನಗರಕ್ಕೆ ರೂ.400 ಕೋಟಿಗೂ ಹೆಚ್ಚು ಅನುದಾನ ತರಲಾಗಿದೆ.
ಕೊರೋನಾ ಸಮಯದಲ್ಲಿ ನಿಮ್ಮ ಕಷ್ಟಗಳಿಗೆ ಹೆಗಲಾಗಿದ್ದೇನೆ
ಕೊರೋನಾ ಸಂದರ್ಭದಲ್ಲಿ ಎಲ್ಲಾ ಮನೆ ಸೇರಿದ್ದರು. ಆದರೆ ನಾನು ನಿಮ್ಮ ಜೊತೆ ನಿಂತು ನಿಮ್ಮ ಕಷ್ಟಗಳಿಗೆ ಹೆಗಲಾಗಿ ಕೆಲಸ ಮಾಡಿದ್ದೇ. ಡಾಕ್ಟರ್ಗಳು ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಶವಸಂಸ್ಕಾರ ಮಾಡಲು ಜನ ಇರಲಿಲ್ಲ. ಅನೇಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದಾಗ ಬಿಜೆಪಿಯವರು ಒಬ್ಬರೂ ನೆರವಿಗೆ ಬರಲಿಲ್ಲ. ಅಂದು ನಿಮ್ಮ ನೆರವಿಗೆ ಬಂದಿದ್ದು ಡಿ.ಕೆ.ಸುರೇಶ್ ಮಾತ್ರ.
10 ವರ್ಷಗಳ ಕಾಲ ನಿಮ್ಮ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಟ್ಟಿದವರು ಕ್ಷೇತ್ರದ ಜನತೆ. ಸಿದ್ದರಾಮಯ್ಯ ಅವರು, ಹಿಂದಿನ ಅಧ್ಯಕ್ಷರಾಗಿದ್ದ ಜಿ.ಪರಮೇಶ್ವರ್ ಅವರು ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಆಶೀರ್ವಾದದಿಂದ ಈ ಕ್ಷೇತ್ರದ ಅಭಿವೃದ್ದಿಗೆ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. ನಿಮ್ಮ ಮನೆಮಗನಾಗಿ ಪ್ರಾಮಾಣಿಕವಾಗಿ ಕೆಸಲ ಮಾಡಿದ್ದೇನೆ. ಕೂಲಿಯನ್ನು ಕೇಳುತ್ತಿದ್ದೇನೆ. ಜಾತ್ಯಾತೀತ, ಪಕ್ಷಾತೀತವಾಗಿ ಜನರ ಸೇವೆ ಮಾಡಿರುವ ನನಗೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಮನವಿ ಮಾಡುತ್ತೇನೆ.
ದೇವರಿಗೆ ಪೂಜೆ ಸಲ್ಲಿಸಿ, ಕನ್ನಡ ಪೇಟ ಧರಿಸಿ ನಾಮಪತ್ರ ಸಲ್ಲಿಕೆ:
ಗುರುವಾರ ಬೆಳಗ್ಗೆ ತಮ್ಮ ತಾಯಿ ಗೌರಮ್ಮ, ಸಹೋದರ ಡಿ.ಕೆ ಶಿವಕುಮಾರ್, ಅತ್ತಿಗೆ ಉಷಾ, ಅಣ್ಣನ ಮಗಳು ಐಶ್ವರ್ಯ ಡಿಕೆಎಸ್ ಹೆಗ್ಡೆ ಜೊತೆಗೂಡಿ ಸಾತನೂರಿನ ಕಬ್ಬಾಳಮ್ಮ, ಮನೆದೇವರಾದ ಕನಕಪುರದ ಕೆಂಕೇರಮ್ಮ, ರಾಮನಗರದ ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು.
ನಂತರ ರಾಮನಗರದಲ್ಲಿ ಸಹಸ್ರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜತೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸುರೇಶ್ ಅವರು ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಬಾವುಟದ ಪೇಟ ಧರಿಸಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ ರೇವಣ್ಣ, ಮಾಗಡಿ ಶಾಸಕರಾದ ಬಾಲಕೃಷ್ಣ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಇದನ್ನು ನೋಡಿ : ರಂಗಭೂಮಿ : ಸಮೂಹದೊಳಗೆ ನಡೆಯುವ ಕ್ರಿಯೆ Janashakthi Media