ಡಿ ದೇವರಾಜ ಅರಸು ಟ್ರಕ್ ಟರ್ಮಿನಲ್ ಅಕ್ರಮ ಪ್ರಕರಣ: ಹಾಲಿ ವಾರ್ತಾ ಇಲಾಖೆಯ ಅಧಿಕಾರಿ ಬಂಧನ

ಬೆಂಗಳೂರು: ಡಿ ದೇವರಾಜ ಅರಸು ಟ್ರಕ್ ಟರ್ಮಿನಲ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪ್ರಸಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಾಣಿಜ್ಯ ಪ್ರಚಾರ ಶಾಖೆಯ ಉಪನಿರ್ದೇಶಕ ಶಂಕರಪ್ಪರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಸಿಐಡಿ ಅಧಿಕಾರಿಗಳು 47.10 ಕೋಟಿ ರೂ. ಅಕ್ರಮ ಪ್ರಕರಣದ ತನಿಖೆ ಚುರುಕು ಗೊಳಿಸಿದ್ದಾರೆ.

ಡಿಡಿಯೂಟಿಟಿಎಲ್ ನಲ್ಲಿ ಎಂಡಿ ಅಗಿ ಕೆಲಸ ಮಾಡುತ್ತಿದ್ದ ಶಂಕರಪ್ಪ, ತನ್ನ ಅಧಿಕಾರಾವಧಿಯಲ್ಲಿ ನಡೆಸಿದ್ದಾರೆನ್ನಲಾದ ಪುರಾವೆಗಳು ಲಭ್ಯವಾಗಿದೆ. ಡಿಡಿಯೂಟಿಟಿಎಲ್ 2021 ರಿಂದ 2023ರ ಅವಧಿಯಲ್ಲಿ ಆಗಿದೆ ಎನ್ನಲಾದ ಅಕ್ರಮದ ಬಗ್ಗೆ ಹಾಲಿ ಎಂಡಿ ಸಿ.ಎನ್ ಶಿವಪ್ರಕಾಶ್ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದರು. 2023  ಸೆಪ್ಟೆಂಬರ್ 23ರಂದು ಎಫ್ಐಆರ್ ದಾಖಲಾಗಿತ್ತು. ದೇವರಾಜ

ಇದನ್ನೂ ಓದಿ: ತಂದೆ ಹಾಗೂ ನನ್ನ ಮಾತಿಗೆ ಬೆಲೆಕೊಟ್ಟು ಪ್ರಜ್ವಲ್‌ ಬರುತ್ತಿದ್ದಾನೆ: ಹೆಚ್‌ಡಿಕೆ

ಈ ಪ್ರಕರಣದ ತನಿಖೆಯನ್ನ ಸಿಐಡಿಗೆ ವಹಿಸಲಾಗಿತ್ತು.ಡಿಡಿಯೂಟಿಟಿಎಲ್ 2021 ಅಕ್ಟೋಬರ್ 25ರಂದು 194ನೇ ನಿರ್ದೇಶಕ ಮಂಡಳಿ ಸಭೆ ನಡೆಸಲಾಗಿತ್ತು..ಟರ್ಕ್ ಟರ್ಮಿನಲ್ ಗಳ ದುರಸ್ತಿ ಹಾಗೂ ನಿರ್ವಹಣೆ ಕಾಮಗಾರಿಯನ್ನು ತುರ್ತಾಗಿ ತುಂಡು ಗುತ್ತಿಗೆ ನೀಡುವ ಬಗ್ಗೆ  ಚರ್ಚೆ ನಡೆದು 10 ಕೋಟಿ ರೂಪಾಯಿವರೆಗೆ ತುಂಡು ಗುತ್ತಿಗೆ ನೀಡಲು  ಅಕ್ರಮವಾಗಿ ಅನುಮೋದನೆ ನಿರ್ಣಯ ಮಾಡಲಾಗಿತ್ತು. ಕಾಮಗಾರಿ ನಡೆಯದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಪಡೆಯಲಾಗಿತ್ತು.ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಡಿಯೂಟಿಟಿಎಲ್ ಕಚೇರಿ ಹಾಗೂ ಹಲವಾರು ಮನೆಗಳ ಮೇಲೆ ದಾಳಿ ನಡೆಸಿ, 600ಕ್ಕೂ ಹೆಚ್ಚು ದಾಖಲೆಗಳು ಜಪ್ತಿ ಮಾಡಿ ಪರಿಶೀಲನೆ ನಡೆಸಿದ್ದರು.

ಇದನ್ನೂ ನೊಡಿ: ರಾಜಸ್ಥಾನ : ಬಿಜೆಪಿ ಪ್ರಾಬಲ್ಯ ಕಳೆದುಕೊಳ್ಳಲಿದೆಯೆ? ಲೆಕ್ಕಾಚಾರಗಳು ಏನು ಹೇಳುತ್ತಿವೆ! Janashakthi Media

Donate Janashakthi Media

Leave a Reply

Your email address will not be published. Required fields are marked *