ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯೊಂದು ಹೊತ್ತಿ ಉರಿದ ಘಟನೆ ನಡೆದಿದೆ.
ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಓಡಿ ಹೋಗಿ ಪ್ರಾಣಿ ಉಳಿಸಿಕೊಂಡ ಕುಟುಂಬಸ್ಥರು. ಸ್ಫೋಟದ ಪರಿಣಾಮ ಇಡೀ ಗ್ರಾಮದಲ್ಲಿ ದಟ್ಟ ಹೊಗೆ ಆವರಿಸಿದೆ. ಬೆಂಕಿ ನೋಡಿ ಗ್ರಾಮದ ಜನ ಆತಂಕಗೊಂಡಿದ್ದಾರೆ.
ಇದನ್ನೂ ಓದಿ : ಆರ್ಡರ್ ಮಾಡಿದ್ದ ಆಹಾರವನ್ನು ತಲುಪಿಸದ ಕಾರಣ ಜೊಮ್ಯಾಟೊ ಹಾಗೂ ಡಾಮಿನೋಸ್ ಸಂಸ್ಥೆಗಳಿಗೆ 40 ಸಾವಿರ ರೂ. ದಂಡ
ಗ್ರಾಮದ ರೈತ ಕಾಶಪ್ಪ ಎಂಬುವರ ಮನೆ ಹೊತ್ತಿ ಉರಿದಿದೆ. ಮನೆಯಲ್ಲಿ ತಾಯಿ ಮಗ ಇಬ್ಬರೇ ವಾಸವಾಗಿದ್ದರು. ಅಡುಗೆ ಮನೆಯಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿತ್ತು, ಇದನ್ನ ನೋಡಿ ತಾಯಿ ಮಗ ಹೊರಗೆ ಓಡಿ ಬಂದಿದ್ದಾರೆ. ಇವರು ಹೊರ ಹೋದ ಎರಡು ನಿಮಿಷದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ.
ಬೆಂಕಿಯನ್ನ ನಂದಿಸಲು ಚನ್ನಗಿರಿ ಅಗ್ನಿ ಶಾಮಕ ದಳದ ಸಿಬ್ಬಂದಿ ಹರ ಸಾಹಸಪಟ್ಟಿದ್ದಾರೆ. ಬೇರೆ ಮನೆಗಳಿಗೆ ಬೆಂಕಿ ಆವರಿಸಿದಂತೆ ಕಟ್ಟಚ್ಚರಿಕೆ ವಹಿದ್ದರು. ಮನೆ ಸಂಪೂರ್ಣ ಸುಟ್ಟುಕರಕಲಾಗಿದೆ. ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ನೋಡಿ : ತುಮಕೂರು ರಸ್ತೆಯ ತಾಳೇಕೇರಿ ಬಳಿ ಭೀಕರ ಅಪಘಾತ Janashakthi Media