ಬೆಂಗಳೂರು|ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ  ಸ್ಫೋಟ ಸಂಭವಿಸಿದೆ ಬಾಲಕ ಮೃತ

ಬೆಂಗಳೂರು: ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ  ಸ್ಫೋಟ ಸಂಭವಿಸಿದೆ. ಬಾಲಕ ಮೃತಪಟ್ಟು ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸಂಜಯ್ ಗಾಂಧಿಆಸ್ಪತ್ರೆಗೆ ಸೇರಿಸಲಾಗಿದೆ.  ಬೆಂಗಳೂರು

ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ‌‌. ಸ್ಫೋಟದ ತೀವ್ರತೆಗೆ ಮೂರು ಮನೆಯ ಗೋಡೆಗೆ ಹಾನಿಯಾಗಿದೆ‌. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಉದ್ಯಮಿ ರಾಜ್ ಕುಂದ್ರಾ  ಹಾಗೂ ನಟಿ  ಶಿಲ್ಪಾ ಶೆಟ್ಟಿವಿರುದ್ಧ ವಂಚನೆ ಪ್ರಕರಣ ದಾಖಲು

ತಿಮ್ಮರಾಜು ಅವರ‌ ಮನೆಯಲ್ಲಿ ಸ್ಫೋಟ ಶಂಕೆ, ಕಸ್ತೂರಿ, ನರಸಮ್ಮ, ಸಬ್ರಿನ್ ಬಾನು, ಫಾತಿಮಾ ಸೇರಿದಂತೆ ಹತ್ತು ಮಂದಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಸಿಲಿಂಡರ್‌ನಿಂದ ಅನಿಲ ಸೋರಿಕೆಯಿಂದ ಆಗಿರುವ ಅವಘಡವೇ ಅಥವಾ ಬೇರೆ ಕಾರಣವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸ್ಥಳದಲ್ಲಿ ಯಾವುದಾದರೂ ಸ್ಫೋಟಕವಿತ್ತೇ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಸ್ಥಳಕ್ಕೆ ಹೆಚ್ಚುವರಿ ಕಮಿಷನರ್ ರಮೇಶ್ ಬಾನೋತ್ ಭೇಟಿ, ಪರಿಶೀಲನೆ ನಡೆಸಿದರು

ಇದನ್ನೂ ನೋಡಿ: ಫ್ಯಾಸಿಸಂ ವಿರುದ್ಧ ವಿಜಯದ 80ನೇ ವಾರ್ಷಿಕೋತ್ಸವ | ಜನತಾ ಪ್ರತಿರೋಧ ಗೆರಿಲ್ಲಾ ಸೈನ್ಯಗಳ ಪಾತ್ರ – ಭಾಗ 3

Donate Janashakthi Media

Leave a Reply

Your email address will not be published. Required fields are marked *