ತಿರುವನಂತಪುರಂ: ಸೈಬರ್ ವಂಚನೆಯಿಂದ ಕೇರಳ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯೊಬ್ಬರಿಗೆ ಬರೋಬ್ಬರಿ 90 ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.
ತ್ರಿಪುಣಿತುರಾದ ಎರೂರ್ ಅಮೃತ ಲೇನ್ ನಿವಾಸಿ 73 ವರ್ಷದ ನ್ಯಾ. ಶಶಿಧರನ್ ನಂಬಿಯಾರ್ ಅವರನ್ನು ಷೇರು ಮಾರುಕಟ್ಟೆ ವಹಿವಾಟಿಗೆ ಸಂಬಂಧಿಸಿದ ಆದಿತ್ಯ ಬಿರ್ಲಾ ಇಕ್ವಿಟಿ ಲರ್ನಿಂಗ್ ಹೆಸರಿನ ವಾಟ್ಸಾಪ್ ಗುಂಪಿಗೆ ಸೇರಿಸಲಾಗಿದೆ. ಹೂಡಿಕೆಯು 850 % ಆದಾಯವನ್ನು ನೀಡುತ್ತದೆ ಎಂದು ಗುಂಪಿನ ಸದಸ್ಯರು ಅವರಿಗೆ ಭರವಸೆ ನೀಡಿದರು.
ಇದನ್ನೂ ಓದಿ : ಗುತ್ತಿಗೆದಾರರೊಬ್ಬರಿಂದ 10 ಸಾವಿರ ರೂಪಾಯಿ ಲಂಚ: ವ್ಯವಸ್ಥಾಪಕನ ಬಂಧನ
ಹೀಗಾಗಿ ನಂಬಿಯಾರ್ ಅವರು ಗುಂಪಿನಲ್ಲಿ ಹಂಚಿಕೊಂಡ ಲಿಂಕ್ ಮೂಲಕ ಹಣವನ್ನು ವರ್ಗಾಯಿಸಿದ್ದಾರೆ. 2024 ರ ಡಿ. 4 ಮತ್ತು ಡಿ. 30, ನಡುವೆ ವಂಚಕರು ನ್ಯಾಯಮೂರ್ತಿಗಳ ವಿವಿಧ ಬ್ಯಾಂಕ್ ಖಾತೆಗಳಿಂದ 90 ಲಕ್ಷ ರೂ.ವನ್ನು ದೋಚಿದ್ದಾರೆ. ಭರವಸೆ ನೀಡಿದ ಲಾಭವಾಗಲಿ ಅಥವಾ ಹೂಡಿಕೆ ಮಾಡಿದ ಮೊತ್ತವಾಗಲಿ ಹಿಂದಿರುಗಲಿಲ್ಲ. ವಂಚನೆಯನ್ನು ಅರಿತ ನ್ಯಾಯಮೂರ್ತಿ ಜನವರಿ 5 ರಂದು ತ್ರಿಪುಣಿತುರಾ ಹಿಲ್ ಪ್ಯಾಲೇಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಆದರೆ ಈ ಕೇಸನ್ನು ಶೀಘ್ರದಲ್ಲೇ ಸೈಬರ್ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಹಿಲ್ ಪ್ಯಾಲೇಸ್ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ನೋಡಿ : ಸೈಬರ್ ಕಳ್ಳರ ಬಗ್ಗೆ ಎಚ್ಚರವಿರಲಿ Janashakthi Media #Cybercrime #Cyberfraud #CyberPolice