ಕಬ್ಬನ್‌ ಪಾರ್ಕ್‌ ಪುಷ್ಪ ಪ್ರದರ್ಶನದಲ್ಲಿ : ಸಾಹಾಸ್‌ ಸಂಸ್ಥೆಯಿಂದ ತ್ಯಾಜ್ಯ ವಿಲೇವಾರಿ ಜಾಗೃತಿ ಅಭಿಯಾನ – ರಾಧ ಬಿ ಎಸ್‌

ಬೆಂಗಳೂರು ನವೆಂಬರ್‌ 30 : ಕಬ್ಬನ್‌ ಪಾರ್ಕ್‌ನಲ್ಲಿ ಹೂಗಳ ಹಬ್ಬ-2025 ಪ್ರದರ್ಶನ ಡಿಸೆಂಬರ್ 27 ರಂದು ಪ್ರಾರಂಭವಾಗಿದೆ. ಒಟ್ಟು 11 ದಿನಗಳ ವರೆಗೆ ಇರಲಿದೆ ನವೆಂಬರ್ 27 ರಿಂದ ಡಿ.7ರವರೆಗೆ ಪುಷ್ಪ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ಈ ಫಲಪುಷ್ಪ ಪ್ರದರ್ಶನಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಗುರುವಾರ ಚಾಲನೆ ನೀಡಿ ಮಾಡತನಾಡಿದ ಅವರು. ಸಾವಯವ ತ್ಯಾಜ್ಯವನ್ನು ಮರುಬಳಕೆ ಮಾಡಿ. ಫಲ ಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿರುವ ಪುಷ್ಪಗಳನ್ನು ತ್ಯಾಜ್ಯವಾಗಿಸದೇ ಅವುಗಳನ್ನು ಒಣಗಿಸಿ ಅಥವಾ ಸಂಸ್ಕರಿಸಿ ಮರುಬಳಕೆಗೆ ಯೋಗ್ಯವಾದ ವಸ್ತುಗಳನ್ನು ತಯಾರಿಸಬೇಕೆಂದು ಹೇಳಿದರು.

ಇದನ್ನೂ ಓದಿ : ರಾಗಿಕಣ | ಗ್ರಾಮೀಣ ಸೊಗಡು ತಿಳಿಸುವ ಸಂತೆ

ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಪ್ರಯುಕ್ತ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ‘ಹೂಗಳ ಹಬ್ಬ-2025, ಕಲೆ ಸಂಸ್ಕೃತಿಯ ಸಮಾಗಮ’ದಲ್ಲಿ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್‌) 25 ಕಿರು ಆಹಾರ ಸಂಸ್ಕರಣಾ ಮಳಿಗೆಗಳನ್ನು ತೆರೆದಿದೆ.

ತೋಟಗಾರಿಕೆ ಇಲಾಖೆಯು ವಿಶೇಷವಾಗಿ ಮಕ್ಕಳಿಗಾಗಿ ಹೂವಿನ ಪ್ರದರ್ಶನವನ್ನು ಆಯೋಜಿಸುತ್ತಿದೆ. ಪ್ರತಿಯೊಬ್ಬರೂ ಈ ಹೂವಿನ ಪ್ರದರ್ಶನದಿಂದ ಅಗತ್ಯವಾದ ಪಾಠವನ್ನು ಕಲಿಯಬೇಕು ಮತ್ತು ಅನುಸರಿಸಬೇಕು. ನಮ್ಮ ಜೀವನಶೈಲಿ ನೈಸರ್ಗಿಕವಾಗಿ ನಡೆಸಿರೆ, ಅದು ಎಲ್ಲರಿಗೂ ಒಳ್ಳೆಯದು. ಈ ಪುಷ್ಪ ಪ್ರದರ್ಶನಕ್ಕೆ ಎಲ್ಲರೂ ಭೇಟಿ ನೀಡಿ ಹಾಗೂ ತ್ಯಾಜ್ಯವಾಗಿಸದೇ ಅವುಗಳನ್ನು ಒಣಗಿಸಿ ಅಥವಾ ಸಂಸ್ಕರಿಸಿ ಮರುಬಳಕೆಗೆ ಯೋಗ್ಯವಾದ ವಸ್ತು ಮಹತ್ವ ತಿಳಿಯಿರಿ ಎಂದು ಪುಷ್ಪ ಪ್ರದರ್ಶನ ವಿಕ್ಷಕರಿಗೆ ನಾನು ಒತ್ತಾಯಿಸುತ್ತೇನೆಂದು ಎಂದು ತಿಳಿಸಿದರು.

ಕಬ್ಬನ್‌ ಪಾರ್ಕ್‌ ಪುಷ್ಪ ಪ್ರದರ್ಶನದಲ್ಲಿ : ಸಾಹಾಸ್‌ ಸಂಸ್ಥೆಯಿಂದ ತ್ಯಾಜ್ಯ ವಿಲೇವಾರಿ ಜಾಗೃತಿ ಅಭಿಯಾನ - ರಾಧ ಬಿ ಎಸ್‌
ಕಬ್ಬನ್‌ ಪಾರ್ಕ್‌ ಪುಷ್ಪ ಪ್ರದರ್ಶನದಲ್ಲಿ : ಸಾಹಾಸ್‌ ಸಂಸ್ಥೆಯಿಂದ ತ್ಯಾಜ್ಯ ವಿಲೇವಾರಿ ಜಾಗೃತಿ ಅಭಿಯಾನ – ರಾಧ ಬಿ ಎಸ್‌

ಬೆಂಗಳೂರಿನ ಹೆಮ್ಮೆಯಾದ ಕಬ್ಬನ್ ಪಾರ್ಕ್ ಸಸ್ಯೋದ್ಯಾನವು ನಗರದ ಪ್ರಮುಖ “ಶ್ವಾಸಕೋಶ”ದಂತಿದೆ. ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆಯೊಂದಿಗೆ, ತ್ಯಾಜ್ಯ ನಿರ್ವಹಣೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಾಹಸ ಸಂಸ್ಥೆ, ತ್ಯಾಜ್ಯ ನಿರ್ವಹಣಾ ಕ್ಷೇತ್ರದಲ್ಲಿ ದಶಕಗಳಿಂದ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿರುವ ‘ಸಾಹಸ್’ (Saahas) ಸಂಸ್ಥೆಯು, ಇತ್ತೀಚೆಗೆ ಕಬ್ಬನ್‌ ಪಾರ್ಕ್‌  ಆವರಣದಲ್ಲಿ ನಡೆಯುತ್ತಿರುವ  ಹೂಗಳ ಹಬ್ಬ-2025 ಪ್ರದರ್ಶನ ದಲ್ಲಿ ಸಾರ್ವಜನಿಕರಿಗಾಗಿ ಬೃಹತ್ “ತ್ಯಾಜ್ಯ ವಿಲೇವಾರಿ ಜಾಗೃತಿ ಅಭಿಯಾನ”ವನ್ನು ಹಮ್ಮಿಕೊಂಡಿದೆ.

ಬೃಹತ್ “ತ್ಯಾಜ್ಯ ವಿಲೇವಾರಿ ಜಾಗೃತಿ ಅಭಿಯಾನ : ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ  ಪುಷ್ಪ ಅವರು ಮಾತನಾಡಿ ಈ ಹೂಗಳ ಹಬ್ಬ-2025 ಪ್ರದರ್ಶನ ದಲ್ಲಿ ಸಾರ್ವಜನಿಕರಿಗಾಗಿ ಬೃಹತ್ “ತ್ಯಾಜ್ಯ ವಿಲೇವಾರಿ ಜಾಗೃತಿ ಅಭಿಯಾನ” ಪಾರಂಭ ಮಾಡಿರುವ ಸಾಹಸ್‌ ಸಂಸ್ಥೆಯವರಿಗೆ ಅಭಿನಂದನೆಗಳು ಹಾಗೂ ಅವರಿಗೆ ಎಲ್ಲಾ ರೀತಿಯ ಸಾಹಾಯವನ್ನು ಮಾಡುತ್ತೆವೆ ಎಂದು ತಿಳಿಸಿದರು.

ಸಾಹಸ್‌ ಸಂಸ್ಥೆ ಸಂಯೋಜಕರಾದ ರಾಧಾ ಬಿ ಎಸ್‌ ಮಾತನಾಡಿ :  29- 11- 2025 ರಿಂದ 7-11-2025 ರ ವರೆಗೆ  ಫಲಪುಷ್ಪ ಪ್ರದರ್ಶನ ವಿಕ್ಷಣೆ ಮಾಡಲು ಬರುವ ಪ್ರವಾಸಿಗರಗೆ “ತ್ಯಾಜ್ಯ ವಿಲೇವಾರಿ ಬಗ್ಗೆ  ಸರಿಯಾದ ಮಾಹಿತಿ ಇರುವುದಿಲ್ಲ ಅಲ್ಲಿನ ತಿಂಡಿ ತಿನಿಸುಗಳು ಹಾಗೂ ಇತರೆ ಪಧಾರ್ಥಗಳು ತಿಂದು ಅಲ್ಲೆ ಎಲ್ಲೇಂದರಲ್ಲಿ ಎಸೆದು ಹೊಗುತ್ತಾರೆ ಆದ್ದರಿಂದ ನಮ್ಮ ಸಿಬ್ಬಂದಿಗಳು ಹಸಿ ಕಸ, ಒಣ ಕಸ, ಹಾಗೂ ಅಪಾಯಕಾರಿ ಕಸವನ್ನು ಸರಿಯಾದ ಜಾಗಕ್ಕೆ ಹಾಕಲು ಜಾಗೃತಿ ಮೂಡಿಸುತ್ತಿದ್ದಾರೆ. ಇದರಿಂದ ನಾವು ಈ ಬೃಹತ್ “ತ್ಯಾಜ್ಯ ವಿಲೇವಾರಿ ಜಾಗೃತಿ ಅಭಿಯಾನ” ಹಮ್ಮೀಕೊಂಡಿದ್ದೆವೆ ಇದರಲ್ಲಿ ಪ್ರತಿದಿನ ಸಾಹಾಸ್‌ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಸ್ವಯಂ ಸೇವಕರು ಭಾಗಿಯಾಗಿ ಜನರಿಗೆ ಕಸ ವೀಲೆವಾರಿ ಬಗ್ಗೆ ಜಾಗೃತಿಯನ್ನೂ ಮೂಡಿಸುತ್ತಿದ್ದೆವೆ  ಎಂದು ಜನಶಕ್ತಿ ಮೀಡಿಯಾದೊಂದಿಗೆ ಮಾತನಾಡಿದರು.

ಇದನ್ನೂ ನೋಡಿ : ಜನಸ್ನೇಹಿ ಸಂತೆ – ರಾಗಿಕಣ ಸಂತೆ | ಪ್ರತಿ ಭಾನುವಾರ | ಉಚಿತ ಪ್ರವೇಶ

 

Donate Janashakthi Media

Leave a Reply

Your email address will not be published. Required fields are marked *