ಬೆಂಗಳೂರು: ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದನ್ನು ಸಿಎಂ ರಾಜ್ಯಪಾಲರಿಗೆ ಕಳುಹಿಸಿದ್ದು ಒಂದುಕಡೆಯಾದರೆ, ಸಚಿವಸ್ಥಾನದ ರಾಜೀನಾಮೆಯಿಂದಲೂ ತೃಪ್ತವಾಗದ ವಿಪಕ್ಷ ಬಿಜೆಪಿ ನಾಗೇಂದ್ರರನ್ನು ಕಾಂಗ್ರೆಸ್ ಪಕ್ಷದಿಂದಲೇ ಉಚ್ಚಾಟಿಸುವಂತೆ ಪಟ್ಟುಹಿಡಿದಿದೆ. ಸಾಲುಸಾಲು
ವಾಲ್ಮೀಕಿ ನಿಗಮದ ಬಹುಕೋಟಿ ಆರೋಪದಡಿ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡುವವರೆಗೂ ಬಿಜೆಪಿ ಬಿಗಿಪಟ್ಟುಹಿಡಿದಿತ್ತು. ಇದೀಗ ಅದರ ಮುಂದುವರೆದ ಭಾಗವೆನ್ನುವಂತೆ ಪಕ್ಷದಿಂದಲೇ ಉಚ್ಚಾಟನೆಗೆ ಮೇಲ್ಮನೆ ಬಿಜೆಪಿ ಸದಸ್ಯ ಸಿ.ಟಿ.ರವಿ ಕಾಂಗ್ರೆಸ್ ಅನ್ನು ಆಗ್ರಹಿಸಿ, ಸಾಲುಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ಸಾಲುಸಾಲು
ಇದನ್ನೂ ನೋಡಿ: ಕೆಳಮನೆಯಿಂದ ಮೇಲ್ಮನೆಗೆ 11ಮಂದಿ ಅವಿರೋಧ ಆಯ್ಕೆ
ಇಂದು ನ್ಯಾಯಾಲಯದ ವಿಚಾರಣೆಯೊಂದಕ್ಕೂ ಸೇರಿದಂತೆ ಪಕ್ಷದ ಮುಖಂಡರ ಜೊತೆ ಸಭೆ ನಡೆಸಲೆಂದು ಎಐಸಿಸಿ ಅಧಿನಾಯಕ ಸಂಸದ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಕೆಲ ಮುಖಂಡರು ಬೆಂಗಳೂರಿನ ವಿಮಾನ ನಿಲ್ದಾನದಲ್ಲಿ ರಾಹುಲ್ ಗಾಂಧಿಯನ್ನು ಬರಮಾಡಿಕೊಂಡರು.
ರಾಹುಲ್ ಗಾಂಧಿ ಆಗಮನದ ಹಿನ್ನಲೆಯಲ್ಲಿ ಟ್ವೀಟ್ ಮೂಲಕ ಸಿ.ಟಿ.ರವಿ ಕಾಂಗ್ರೆಸಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ಜನತೆಯ ಪರವಾಗಿ ಈ ಪ್ರಶ್ನೆಗಳನ್ನು ಕೇಳುತ್ತಿರುವುದಾಗಿ ಸಿ.ಟಿ.ರವಿ ಟ್ವಿಟ್ಟರ್‌ನಲ್ಲಿ ಉಲ್ಲೇಖಿಸಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ಅವ್ಯವಹಾರ ಮಾಡಿ ರಾಜೀನಾಮೆ ನೀಡಿರುವ ಮಾಜಿ ಸಚಿವ ನಾಗೇಂದ್ರ ಅವರನ್ನು ಪಕ್ಷದಿಂದ ಯಾವಾಗ ಉಚ್ಛಾಟಿಸುತ್ತೀರಿ? ಎಲ್ಲವನ್ನು ನುಂಗುವ ಪ್ರಾಚೀನ “ಸಿದ್ದ ಹಸ್ತ” ಕಲೆಯನ್ನು ಕರಗತ ಮಾಡಿಕೊಂಡ ನಿಮ್ಮದು 100% ಭ್ರಷ್ಟ ಸರ್ಕಾರ ಎಂಬುದನ್ನು ಒಪ್ಪಿಕೊಳ್ಳುತ್ತೀರಾ? ಭ್ರಷ್ಟಾಚಾರ ತಮ್ಮ ಮೂಗಿನ ಕೆಳಗೆ ನಡೆಯುತ್ತಿರುವಾಗ ಜಾಣ ಕುರುಡನಂತೆ ವರ್ತಿಸಿದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ನಿಮ್ಮ ಕ್ರಮ ಏನು? ಶಿಕ್ಷಣ ಮಂತ್ರಿ 5,8 ಮತ್ತು 9 ನೇ ತರಗತಿಯ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಇವರ ಬದಲಾವಣೆ ಎಂದು? ಲೋಕಸಭಾ ಚುನಾವಣೆಯಲ್ಲಿ ತಮ್ಮ ಜಿಲ್ಲೆಯಲ್ಲಿ ಮುನ್ನಡೆ ಕೊಡಿಸಲು ವಿಫಲವಾಗಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ 17 ಸಚಿವರ ವಿರುದ್ದ ಕ್ರಮ ಯಾವಾಗ ತೆಗೆದುಕೊಳ್ಳುತ್ತೀರಿ? ರಾಜ್ಯದ ಅಭಿವೃದ್ಧಿಯನ್ನು ನಿಮ್ಮ ಮತಬ್ಯಾಂಕ್ ರಾಜಕೀಯಕ್ಕಾಗಿ ಬಲಿಕೊಟ್ಟಿದ್ದೀರಿ. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಯಲ್ಲಿ ಹಿನ್ನಡೆಯಾಗಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇದಕ್ಕೆ ಯಾರು ಹೊಣೆ? ಅನೇಕ ಉದ್ದಿಮೆಗಳು ನೆರೆ ರಾಜ್ಯಗಳ ಪಾಲಾಗಿ ರಾಜ್ಯದ ಯುವಕರು ಉದ್ಯೋಗ ವಂಚಿತರಾಗಿದ್ದಾರೆ.
ನಿಮ್ಮ ಸರಕಾರದ ನಿಷ್ಕ್ರಯತೆಗೆ ರಾಜ್ಯದ ಕ್ಷಮೆಯಾಚಿಸುತ್ತೀರಾ? ರಾಜ್ಯದಲ್ಲಿ ಸರ್ಕಾರವನ್ನು ಟೀಕಿಸಿದವರನ್ನು ಬಂಧಿಸಿ, ಅಭಿಪ್ರಾಯ ಸ್ವಾತಂತ್ರ ಹತ್ತಿಕ್ಕಿ, ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ದವಾಗಿ ನಿಮ್ಮ ಸರ್ಕಾರ ನಡೆದುಕೊಳ್ಳುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ? ಸನ್ಮಾನ್ಯ ಶ್ರೀ ರಾಹುಲ್ ಗಾಂಧಿಯವರನ್ನು ಕೇಳಲು ಇನ್ನೂ ಹಲವು ಪ್ರಶ್ನೆಗಳು ಇವೆ, ಸದ್ಯಕ್ಕೆ ಈ ಕೆಲ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: ಬಂಡವಾಳಶಾಹಿ ಬೆಳೆದಷ್ಟು ಪ್ರತಿರೋಧ ಹೆಚ್ಚಾಗುತ್ತಲೆ ಇರುತ್ತದೆ – ರಾಜೇಂದ್ರ ಚೆನ್ನಿJanashakthi Media