ತಿರುವನಂದಪುರಂ: ಕೇಂದ್ರ ಸರ್ಕಾರ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ‘ಕೇಂದ್ರ ಮೀಸಲು ಪೊಲೀಸ್ ಪಡೆ'(ಸಿಆರ್‌ಪಿಎಫ್)ನ ಝೆಡ್ ಪ್ಲಸ್ ಭದ್ರತೆಯನ್ನು ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು “ಸಿಆರ್‌ಪಿಎಫ್ ಕೇರಳವನ್ನು ಆಳುತ್ತದೆಯೇ? ಅವರು ಏನು ಭಾವಿಸಿದ್ದಾರೆ?” ಎಂದು ಕೇಳಿದ್ದಾರೆ. ಜನವರಿ 27ರ ಶನಿವಾರದಂದು ರಾಜ್ಯಪಾಲ ಆರಿಫ್ ಖಾನ್ ವಿರುದ್ಧ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಆರಿಫ್ ಖಾನ್ ಅವರು, ವಿದ್ಯಾರ್ಥಗಳನ್ನು ಬಂಧಿಸುವಂತೆ ಕೂತು ಪಟ್ಟು ಹಿಡಿದು ರಸ್ತೆಯಲ್ಲೆ ಎರಡು ಗಂಟೆಗಳ ಕಾಲ ಧರಣಿ ಕೂತಿದ್ದರು.
ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಪಿಣರಾಯಿ, “ಕೇಂದ್ರ ಸರ್ಕಾರವು ಆರ್‌ಎಸ್‌ಎಸ್ ಸದಸ್ಯರಿಗೆ Z+ ಭದ್ರತೆಯನ್ನು ನೀಡುತ್ತಿದೆ. ಇವರೆಲ್ಲರೂ ಆರೆಸ್ಸೆಸ್ ಕಾರ್ಯಕರ್ತರು, ಮತ್ತು ಈಗ ಖಾನ್ ಅವರ ಹೆಸರನ್ನು ಪಟ್ಟಿಗೆ ಸೇರಿಸಲಾಗಿದೆ. ಸಿಆರ್‌ಪಿಎಫ್‌ಗೆ ಇಲ್ಲಿ ಪ್ರಕರಣ ದಾಖಲಿಸಲು ಸಾಧ್ಯವೆ? ನಮ್ಮ ದೇಶದಲ್ಲಿ ಕಾನೂನುಗಳಿವೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೆರಗೋಡು ರಾಷ್ಟ್ರಧ್ವಜದ ಸ್ತಂಭದಲ್ಲಿ ಹನುಮ ಧ್ವಜ ವಿವಾದ | ಕರ್ತವ್ಯಲೋಪ ಆರೋಪದಡಿ ಪಂಚಾಯಿತಿ ಅಧಿಕಾರಿ ಅಮಾನತು
ಶನಿವಾರದಂದು ರಾಜ್ಯಪಾಲರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಎಸ್‌ಎಫ್‌ಐ ಕಾರ್ಯಕರ್ತರು ಕಪ್ಪು ಬಾವುಟಗಳನ್ನು ಬೀಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಈ ವೇಳೆ ಕೇರಳ ಪೊಲೀಸರ ಕಡೆಯಿಂದ ಭದ್ರತಾ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ರಾಜ್ಯಪಾಲರು ಧರಣಿ ಕೂತಿದ್ದರು. ಅಲ್ಲದೆ, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಅವರು, ರಸ್ತೆ ಬದಿಯ ಟೀ ಅಂಗಡಿಯಿಂದ ತಂದ ಕುರ್ಚಿಯ ಮೇಲೆ ಕುಳಿತು ತಮ್ಮ ಕಾರ್ಯದರ್ಶಿ ಮೋಹನ್ ಅವರನ್ನು ಕರೆದು ಅಮಿತ್ ಶಾ ಅಥವಾ ಅಲ್ಲಿನ ಯಾರಿಗಾದರೂ ಕರೆ ಮಾಡು ಅಥವಾ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿಸು ಎಂದು ಹೇಳಿದ್ದರು.
ಅಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳತ್ತ ಬೆರಳು ತೋರಿಸಿ, “ಇದಕ್ಕೆ ನೀವು ಹೊಣೆ, ನಾನು ಇಲ್ಲಿಂದ ಹೋಗುವುದಿಲ್ಲ. ನೀವು ಅವರಿಗೆ ಪ್ರತಿಭಟನಕಾರರಿಗೆ ರಕ್ಷಣೆ ನೀಡುತ್ತಿದ್ದೀರಿ. ನೀವೇ ಕಾನೂನನ್ನು ಉಲ್ಲಂಘಿಸುತ್ತಿದ್ದು, ಮತ್ತೆ ಕಾನೂನನ್ನು ಎತ್ತಿಹಿಡಿಯುವುದು ಯಾರು” ಎಂದು ಆರೀಫ್ ಖಾನ್ ಕೇಳಿದ್ದರು
ಸುಮಾರು 90 ನಿಮಿಷಗಳ ನಂತರ, ಪ್ರತಿಭಟನಾಕಾರರ ವಿರುದ್ಧ ಜಾಮೀನು ರಹಿತ ಆರೋಪದಡಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ ನಂತರ ರಾಜ್ಯಪಾಲರು ಎದ್ದು ತಾವು ಮುಖ್ಯ ಅತಿಥಿಯಾಗಿದ್ದ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಅವರ ಧರಣಿ ಪ್ರತಿಭಟನೆಯ ನಂತರ, ಕೇಂದ್ರ ಸರ್ಕಾರವು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದು, ಅವರಿಗೆ ಸಿಆರ್‌ಪಿಎಫ್‌ನ Z+ ಭದ್ರತೆ ನೀಡಿದೆ.
ಇದನ್ನೂ ಓದಿ: ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಕೆ ವಿವಾದ | ಸಿಟಿ ರವಿ ‘ಕೋಮು ಕ್ರಿಮಿ’ ಎಂದ ಕಾಂಗ್ರೆಸ್
ರಾಜ್ಯಪಾಲರ ನಡೆಯನ್ನು ಟೀಕಿಸಿರುವ ಪಿಣರಾಯಿ ವಿಜಯನ್, “ರಾಜ್ಯದ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣವನ್ನು ಓದಲು ಅವರಿಗೆ ಸಮಯವಿಲ್ಲ… ಅವರು ಅಂದು ಕೇವಲ ಆರಂಭಿಕ ಮತ್ತು ಮುಕ್ತಾಯದ ಪ್ಯಾರಾಗಳನ್ನು ಮಾತ್ರ ಓದಿದ್ದರು. ತಾಂತ್ರಿಕವಾಗಿ ಇದು ಸಾಕಾಗಿದ್ದರೂ, ಎರಡು ಗಂಟೆಗಳ ಕಾಲ ರಸ್ತೆಯಲ್ಲಿ ಧರಣಿ ಕೂರಬಹುದಾದರೆ, ಅವರಿಗೆ ಸಂಪೂರ್ಣ ಭಾಷಣ ಓದಲು ಮಾತ್ರ ಸಮಯವಿಲ್ಲವೇ? ” ಎಂದು ಕೇಳಿದ್ದಾರೆ.
ಅವರನ್ನು ನೋಡಿದರೆ, ಅವರು ಸಂಪೂರ್ಣವಾಗಿ ಆರೋಗ್ಯವಂತರಾಗಿ ಕಾಣುತ್ತಾನೆ. ಆದರೆ ಅವರ ಆರೋಗ್ಯದ ಬಗ್ಗೆ ಪರಿಶೀಲಿಸಬೇಕಾದ ಸಮಸ್ಯೆಗಳಿವೆ. ಆರೋಗ್ಯ ಎಂದರೆ ಎಲ್ಲಾ ವಿಷಯಗಳ ಬಗ್ಗೆ ಆಗಿದೆ ಎಂದು ರಾಜ್ಯಪಾಲರು ಮಾನಸಿಕ ಸ್ಥಿಮಿತತೆಯ ಬಗ್ಗೆ ಉಲ್ಲೇಖಿಸಿ ಸಿಎಂ ಹೇಳಿದ್ದಾರೆ.
“ಅಧಿಕಾರದಲ್ಲಿ ಇವರು ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ. ಅದಾಗ್ಯೂ, ಇಂತಹ ಜನರು ಈ ಸಂದರ್ಭಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಮುಖ್ಯ ವಿಚಾರವಾಗಿದೆ. ಇಂತಹ ಅಧಿಕಾರದಲ್ಲಿ ಇರುವವರು ತಮ್ಮ ಕಾರಿನಿಂದ ಇಳಿದು ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಾರೆಯೇ? ಪೊಲೀಸರು ಅವರ ಕೆಲಸ ಮಾಡಲಿ” ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಆರಿಫ್ ಖಾನ್ ಅವರ ಇತ್ತೀಚಿನ ಕೃತ್ಯಗಳನ್ನು ಗಮನಿಸಿದರೆ, ಅವರು ಇನ್ನೂ ಹೆಚ್ಚು ಪ್ರಬುದ್ಧವಾಗಿ ವರ್ತಿಸಬೇಕಿದೆ. ಸಮಸ್ಯೆಗಳನ್ನು ಸಮತೋಲನದಿಂದ ನಿಭಾಯಿಸಬೇಕು ಎಂದು ಅವರಿಗೆ ಸೂಚಿಸಬೇಕಾಗಿದೆ ಎಂದು ಸಿಎಂ ಹೇಳಿದ್ದಾರೆ.
ವಿಡಿಯೊ ನೋಡಿ: “ರವೀಂದ್ರ ಕಲಾಕ್ಷೇತ್ರಕ್ಕೆ ಆಧುನಿಕ ಸ್ಪರ್ಷ” ಹಿಂದಿರುವ ಹುನ್ನಾರವೇನು? Janashakthi Media