ಬ್ಯಾಂಕ್‌ಗಳಲ್ಲಿ ಕನ್ನಡಿಗರ ಸಂಖ್ಯೆಯಲ್ಲಿ ಕುಸಿತ : ಡಾ. ಪುರುಷೋತ್ತಮ ಬಿಳಿಮಲೆ ಕಳವಳ

ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕುಗಳ ಆಡಳಿತದಲ್ಲಿ ಕನ್ನಡಿಗರ ಸಂಖ್ಯೆ ಕ್ಷೀಣಿಸುತ್ತಿದ್ದು, ಇದು ಮುಂದಿನ ದಿನಗಳಲ್ಲಿ ತೀವ್ರವಾದ ಸಾಮಾಜಿಕ ಸಂಘರ್ಷವನ್ನು ಸೃಷ್ಟಿಸಲಿದೆ ಎಂದು ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿಯ (ಎಸ್‌ಎಲ್‌ಬಿಸಿ) ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು. ತೀವ್ರ

ಇತ್ತೀಚೆಗೆ ಕೇಂದ್ರ ಸಚಿವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಪಡೆದ ಭರವಸೆಯಂತೆ ಬ್ಯಾಂಕುಗಳು ಸಾರ್ವಜನಿಕ ಸಂಪರ್ಕ ವಿಭಾಗಗಳಲ್ಲಿ ಸ್ಥಳೀಯ ಭಾಷೆ ಬಲ್ಲವರನ್ನು ನೇಮಿಸುವುದು ಬಹಳ ಮುಖ್ಯವಾಗಿದ್ದು ಇದು ವಿಳಂಬವಾದಲ್ಲಿ ನಾಡಿನೆಲ್ಲೆಡೆ ಸಾಮಾಜಿಕ ಸಂಘರ್ಷ ಆರಂಭವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಹಿಂದೂರಾಷ್ಟ್ರದ ಹಿಂದೂಸಂವಿಧಾನ

ಶೀಘ್ರ ಸಭೆ

ಆಡಳಿತದಲ್ಲಿ ಕನ್ನಡ ಭಾಷೆಗೆ ಆದ್ಯತೆಯನ್ನು ಒದಗಿಸುವ ಮೂಲಕ ಬ್ಯಾಂಕುಗಳನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಬ್ಯಾಂಕುಗಳ ಪ್ರತಿನಿಧಿ ಗಳೊಂದಿಗೆ ಶೀಘ್ರದಲ್ಲೆ ಸಭೆ ನಡೆಸಿ ವಿವರವಾದ ಸೂಚನೆಗಳನ್ನು ನೀಡಲಾಗುತ್ತದೆ.

ಬ್ಯಾಂಕುಗಳಲ್ಲಿ ನಿರ್ವಹಣೆಯಾಗುವ ಹೊರಗುತ್ತಿಗೆ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಅವಕಾಶ ಕಲ್ಪಿಸುವುದು ಬಹುಮುಖ್ಯವಾಗಿದ್ದು, ಈ ಕುರಿತಂತೆ ಟೆಂಡರ್‌ ನಿಯಮಗಳಲ್ಲಿ ಸ್ಪಷ್ಟವಾಗಿ ಷರತ್ತುಗಳನ್ನು ವಿ ಧಿಸಬೇಕು ಎಂದು ಬಿಳಿಮಲೆ ಹೇಳಿದರು.

ಇದನ್ನೂ ನೋಡಿ: ಗಣತಂತ್ರ ದಿನ : ವೆಂಟ್ರಿಲೋಕ್ವಿಸ್ಟ್ ಜಾನು ಆವಂತಿಕಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *