ಸಿಂಧನೂರು | ಮಹಿಳೆಯರನ್ನು ಮಾತ್ರ ದ್ವೀತಿಯ ದರ್ಜೆ ಪ್ರಜೆಗಳಂತೆ ನೊಡುವ ಪರಿಸ್ಥಿತಿ ನಿರ್ಮಾಣ

ಸಿಂಧನೂರು : ಪ್ರತಿಗಂಟೆಗೆ 30 ಮಹಿಳೆಯರು ದೇಶ ದಲ್ಲಿ ಅತ್ಯಾಚಾರಕ್ಕೆ ತುತ್ತಾಗುತ್ತಿದ್ದಾರೆ. ದೌರ್ಜನ್ಯ, ಹಿಂಸೆಗಳು ಸಾಮಾನ್ಯವಾಗಿವೆ  ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಿದೆ. ಆದರೆ ಮಹಿಳೆಯರು ಮಾತ್ರ ದ್ವೀತಿಯ ದರ್ಜೆ ಪ್ರಜೆಗಳಂತೆ ಜೀವಿಸ ಬೇಕಾ ಗಿದೆ. ಎಂದು ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಪಿ.ಕೆ.ಶ್ರೀಮತಿ ಟೀಚರ್ ಅಸಮಧಾನ ವ್ಯಕ್ತಪಡಿಸಿದರು. ಸಿಂಧನೂರು

ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೋಮುವಾದ ಮತ್ತು ಬಂಡವಾಳಿಗರ ರಕ್ಷಣೆಗಾಗಿ ಆಡಳಿತ ನಿರ್ವಹಣೆ ಮಾಡುತ್ತಿದೆ. ಎಲ್ಲ ವಿಧದ ದಬ್ಬಾಳಿಕೆಯನ್ನು ವಿರೋಧಿಸಲು ಸಿಂಧನೂರಿನ ನಗರದ ವಿವಿಧ ಬೀದಿಗಳಲ್ಲಿ ಜನವಾದಿ ಮಹಿಳೆಯರು ಒಗ್ಗಟ್ಟಾಗಬೇಕಾದ ಅವಶ್ಯಕತೆ ಇದೆ ಎಂದು  ನಗರದ ಟೌನ್‌ ಹಾಲ್‌ ನಲ್ಲಿನಡೆದ ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಪಿ.ಕೆ.ಶ್ರೀಮತಿ ಟೀಚರ  ಶನಿವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿಯಿಂದ ಹಮ್ಮಿಕೊಂಡಿದ್ದ 12ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸಿಂಧನೂರು

ಇದನ್ನೂ ಓದಿ: ಮಗಳನ್ನು ಕೊಲೆ ಮಾಡಿ, ಆತ್ಮಹತ್ಯೆ ಎಂದು ಕಥೆ ಕಟ್ಟಿದ ತಂದೆ

ರಾಜ್ಯ ಘಟಕದ ಅಧ್ಯಕ್ಷೆ ಮೀನಾಕ್ಷಿ ಬಾಳೆ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಯು.ವಾಸುಕಿ, ಖಜಾಂಚಿ ಪುಣ್ಯವತಿ, ಉಪಾಧ್ಯಕ್ಷರಾದ ಕೆ. ಎಸ್.ವಿಮಲಾ, ಕೆ.ನೀಲಾ ಮಾತನಾಡಿದರು. ಮಹಿಳಾ ಸಂಘಟನೆಯ 12 ನೇ ರಾಜ್ಯ ಸಮ್ಮೇಳನ ಹಿನ್ನೆಲೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ದೇವಿ ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷೆ ಶಕುಂತಲಾ ಪಾಟೀಲ್, ಜಿಲ್ಲಾ ಘಟಕದ ಕಾರ್ಯದರ್ಶಿ ವರಲಕ್ಷ್ಮಿ, ಸ್ವಾಗತ ಸಮಿತಿಯ ಗೌರವಾಧ್ಯಕ್ಷೆ ಶಕುಂತಲಾನಾಗರೆಡ್ಡಿ, ಬಸವಂತರಾಯಗೌಡ ಕಲ್ಲೂರು, ಎಸ್.ದೇವೇಂದ್ರಗೌಡ ಉಪಸ್ಥಿತರಿದ್ದರು. ಸಿಂಧನೂರು

ಮಹಿಳೆಯರು ಬೃಹತ್ ಮೆರವಣಿಗೆ ನಡೆಸಿದರು. ದ್ದರು. ಸ್ವಾಗತ ಸಮಿತಿಯ ಅಧ್ಯಕ್ಷೆ ಸರಸ್ವತಿ ಪಾಟೀಲ್ ಸ್ವಾಗತಿಸಿದರು. ಕೆ.ಎಸ್.ಲಕ್ಷ್ಮಿ ನಿರೂಪಿಸಿದರು. ಗೌರಮ್ಮ ಸಾಧಕರನ್ನು ಪರಿಚಯಿಸಿದರು. ಹೋರಾಟದ ಮೂಲಕ ದೇವನಹಳ್ಳಿ ಕೃಷಿ ಭೂಮಿಉಳಿಸಿಕೊಂಡಧೀರಮಹಿಳೆಯರಾದ ವೆಂಕಟಮ್ಮ, ಲಕ್ಷ್ಮಮ್ಮ, ಮುನಿಯಮ್ಮ, ಕಮಲ, ಅಂತರ್‌ಧರ್ಮೀಯ ವಿವಾಹವಾದ ಕಾರಣಕ್ಕೆ ಮಗನನ್ನು ಕಳೆದುಕೊಂಡು ಹೋರಾ ಡುತ್ತಿರುವ ತಾಯಿ ನಾಜುಮ್ ಮಹಮ್ಮದ್  ದೌರ್ಜನ್ಯದ ವಿರುದ್ಧ ಹೋರಾಡಿದ ಭಾರತಿ ರಾಘವರೆಡ್ಡಿ, ರಾಧಿಕಾ ಲಿಂಗಸು ಗೂರು ಅವರನು ಸಂಘರ್ಷದ ಸಾರ್ಥಕ ಹೆಜ್ಜೆ ಗುರುತು ಮೂಡಿಸಿದ ವ್ಯಕ್ತಿಗಳೆಂದು ಸನ್ಮಾನಿಸಲಾಯಿತು. ಸಿಂಧನೂ

ಸಿಂಧನೂರು | ಮಹಿಳೆಯರನ್ನು ಮಾತ್ರ ದ್ವೀತಿಯ ದರ್ಜೆ ಪ್ರಜೆಗಳಂತೆ ನೊಡುವ ಪರಿಸ್ಥಿತಿ ನಿರ್ಮಾಣ

ರು

ನಗರದ ಶಾದಿಮಹಲ್‌ನಿಂದ ಪ್ರಾರಂಭವಾದ ಮಹಿಳೆಯರ ಬೃಹತ್ ಮೆರವಣಿಗೆ ಕನಕದಾಸ ವೃತ್ತ, ರಾಯಚೂರು ಗಂಗಾವತಿ ರಸ್ತೆ, ಗಾಂಧಿವೃತ್ತ, ಬಸವ ವೃತ್ತ, ನಟರಾಜ ಕಾಲೋನಿ ರಸ್ತೆಯ ಮೂಲಕ ಸಾಗಿ ಬಂದು ಹಳೆ ಬಜಾರ ಮೂಲಕ ಟೌನ್ಹಾಲ್ ತಲುಪಿತು. ಮೆರವಣಿಗೆ ಯುದ್ದಕ್ಕೂ ಸಮಾನತೆ ನಮ್ಮ ಹಕ್ಕು, ಘನತೆಗಾಗಿ ನಮ್ಮ ಹೋರಾಟ, ಸ್ವಾತಂತ್ರ್ಯ ನಮ್ಮ ಹಕ್ಕು, ಮಹಿಳಾ ವಿರೋಧಿ ಗಳಿಗೆ ಧಿಕ್ಕಾರ, ಕೋಮುವಾದಿಗಳಿಗೆ ಧಿಕ್ಕಾರದ ಘೋಷಣೆಗಳು ಮೊಳಗಿದವು.

ಇದನ್ನೂ ನೋಡಿ: ಘನತೆಯ ಬದುಕು ನಮ್ಮ ಹಕ್ಕು | ಜನವಾದಿ ಮಹಿಳಾ ಸಂಘಟನೆ ; 12ನೇ ರಾಜ್ಯ ಸಮ್ಮೇಳನJanashakthi Media

Donate Janashakthi Media

Leave a Reply

Your email address will not be published. Required fields are marked *