ಉಡುಪಿ: ಅಮಾಸೆಬೈಲು ಮಾಜಿ ತಾಲೂಕು ಪಂಚಾಯತ್ ಸದಸ್ಯ ಹಾಗೂ ಉಡುಪಿ ಜಿಲ್ಲಾ ಧರ್ಮಸ್ಥಳ ಯೋಜನೆಯ ಜನಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ನವೀನ್ ಚಂದ್ರಶೆಟ್ಟಿ ಅಮಾಸೆಬೈಲು ಧರ್ಮಸ್ಥಳ ಸಂಘದ ಸದಸ್ಯೆಯನ್ನು ಧರ್ಮ ರಕ್ಷಣೆಯ ಕೆಲಸದ ಮೇಲೆ ಸೆಪ್ಟೆಂಬರ್ 5ರಂದು ಮನೆಗೆ ಕರೆಯಿಸಿ ಮಾನಭಂಗಕ್ಕೆ ಯತ್ನಿಸಿದರೆಂದು ವರದಿಯಾಗಿದ್ದು ಇದನ್ನು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಖಂಡಿಸುತ್ತದೆ ಎಂದು ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.
ನವೀನ್ ಚಂದ್ರಶೆಟ್ಟಿ ಧರ್ಮ ಸಂರಕ್ಷಣೆಯ ಯಾತ್ರೆಗೆ ಜನ ಸೇರಿಸಲು ಜವಾಬ್ದಾರಿ ವಹಿಸಿ ಮನೆಮನೆಗೆ ಕರಪತ್ರ ಹಂಚಲು ಧರ್ಮಸ್ಥಳ ಸಂಘದ ಸದಸ್ಯೆ ವಿವಾಹಿತ ಮಹಿಳೆಗೆ ಕರೆ ಮಾಡಿ ಕರಪತ್ರವನ್ನು ತನ್ನ ಮನೆಗೆ ತಂದುಕೊಡಲು ಹೇಳಿದ್ದ ಎನ್ನಲಾಗಿದೆ.
ಯಾರೂ ಇಲ್ಲದ ಮನೆಯಲ್ಲಿ ಆರೋಪಿಯು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದಾಗ ಮಹಿಳೆ ತಪ್ಪಿಸಿಕೊಂಡು ತನ್ನ ಮನೆಯವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಧಾರವಾಡ| ಹಿಂದೂ ಕೋಡ್ ಬಿಲ್ ಮತ್ತು ಬಾಬಾಸಾಹೇಬರು” ಶೀರ್ಷಿಕೆಯಲ್ಲಿ ಲೇಖನ ಸ್ಪರ್ಧೆ -ಗಣಕರಂಗ ಆಯೋಜನೆ
ಸಂತ್ರಸ್ಥ ಮನೆಯವರು ಅಮಾಸೆಬೈಲು ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ ಎಂದು ಪೋಲೀಸ್ ಇಲಾಖೆ ತಿಳಿಸಿದೆ.
ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಆರೋಪಿ ನವೀನ್ ಚಂದ್ರಶೆಟ್ಟಿ ಪರ ನಿಂತು ಪಂಚಾಯಿತಿ ಮಾಡಲು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.
ಇದು ಖಂಡನೀಯವಾಗಿದೆ. ಆರೋಪಿ ನವೀನ್ ಚಂದ್ರ ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದೆ. ಸ್ವತಃ ಬಾದಿತ ಮಹಿಳೆಯ ಕಡೆಯಿಂದ ದೂರು ದಾಖಲಾಗಿರುವುದರಿಂದ ತಕ್ಷಣವೇ ಆರೋಪಿ ಎಲ್ಲಿರುವರೆಂದು ಪತ್ತೆ ಮಾಡಿ ಶಿಕ್ಷೆಗೆ ಗುರಿಪಡಿಸಿ ಮಹಿಳೆಗೆ ನ್ಯಾಯ ಒದಗಿಸಬೇಕು ಎಂದು ಸಿಪಿಎಂ ಆಗ್ರಹಿಸಿದೆ.
ಇದನ್ನೂ ನೋಡಿ: ನಿನ್ನ ಹೆರಿಗೆಗೆ ಆಸ್ಪತ್ರೆ ಮಾಡಿಸೋಣ …. ಏನ್ರೀ ದೇಶಪಾಂಡೆ ಇದು? ಅವಹೇಳನಕಾರಿ ಹೇಳಿಕೆಗೆ ಆಕ್ರೋಶJanashakthi Media
