ಮಂಗಳೂರು: ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತ ಬಡ ಬೀದಿಬದಿ ವ್ಯಾಪಾರಸ್ಥರ ಮೇಲಿನ ಟೈಗರ್ ಕಾರ್ಯಾಚರಣೆಯು ಅಮಾನುಷವಾಗಿದೆ. ತಮ್ಮ ಚುನಾವಣಾ ರಾಜಕೀಯಕ್ಕೆ ಶಾಸಕರು ವರ್ಷಕ್ಕೊಮ್ಮೆ ಅರ್ದ ನಗರವನ್ನು ಮುಚ್ಚಿಸಿ ಬೀದಿಬದಿ ಆಹಾರ ಉತ್ಸವ ನಡೆಸಲು ಬೀದಿಬದಿ ವ್ಯಾಪಾರವನ್ನು, ಬೀದಿ ಬದಿಯ ಸ್ಥಳವನ್ನು ಜೊತೆಗೆ ಸಾರ್ವಜನಿಕ ರಸ್ತೆಯನ್ನು ಬಳಸಿ ನಗರ ಕೇಂದ್ರಕ್ಕೆ ಸಂಚಾರವೇ ಬಂದ್ ಮಾಡಲಾಗುತ್ತದೆ.
ರಾಜ್ಯ ಕೇಂದ್ರ ಸರಕಾರಗಳು ಸ್ವ ಉದ್ಯೋಗ, ಮಹಿಳೆಯರ ಸ್ವಾವಲಂಬಿ ಉದ್ಯೋಗವೆಂದು ಯೋಜನೆ ಹಾಕಿಕೊಳ್ಳುತ್ತದೆ. ಬೀದಿ ಬದಿ ವ್ಯಾಪಾರಗಳನ್ನು ಜೀವನ ನಡೆಸುವ ಮಾರ್ಗವೆಂದು ತಿಳಿದು ಬಡವರು ಸ್ವಾವಲಂಬಿ ಜೀವನ ನಡೆಸುವಾಗ ಬಿಜೆಪಿ ಆಡಳಿತದ ಮನಪಾ ಟೈಗರ್ ಕಾರ್ಯಾಚರಣೆ ಹೆಸರಿನಲ್ಲಿ ಬಡವನ ಬದುಕು ಬೀದಿಗೆ ತರಲು ಹೊರಟಿದೆ. ವ್ಯಾಪಾರಸ್ಥ
ಇದನ್ನೂ ಓದಿ: ದಲಿತ ಯುವಕ ಮೇಲಿನ ಹಲ್ಲೆ ಖಂಡಿಸಿ ಡಿಹೆಚ್‌ಎಸ್ ರಾಜ್ಯದ್ಯಾಂತ ಪ್ರತಿಭಟನೆ
ಮಂಗಳೂರು ನಗರ ಪಾಲಿಕೆಯ “ಟೈಗರ್ ದಾಳಿ” ಘೋಷಣೆಯು ಬಡವರ ಮೇಲೆ ಕ್ರೂರ ಪ್ರಾಣಿಯ ದಾಳಿ ಎಂಬುವುದನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ. ಮಂಗಳೂರು ನಗರ ಆಯುಕ್ತರು ದಾಳಿ ನಿಲ್ಲಿಸುವ ಸೂಚನೆ ನೀಡಿದ್ದರೂ ಈಗ ಏಕಾಏಕಿ ಕೂಳೂರು ಪಂಜಿಮೊಗರು ವ್ಯಾಪ್ತಿಯಲ್ಲಿ ಇಂದು ಕಾರ್ಯಾಚರಣೆ ನಡೆಸಲಾಗಿದೆ. ಬಡವರ ಮೇಲಿನ ದಬ್ಬಾಳಿಕೆಯನ್ಮು ಸಿಪಿಐಎಂ ಪಂಜಿಮೊಗರು ತೀವೃವಾಗಿ ವಿರೋಧಿಸುತ್ತದೆ.
ಈ ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಿ ಬೀದಿ ಬದಿ ವ್ಯಾಪಾರಿಗಳ ಬದುಕಲು ವ್ಯಾಪಾರ ನಡೆಸಲು ಅನುವು ಮಾಡಿಕೊಡಬೇಕು ಎಂದು ಸಿಪಿಐಎಂ ಮುಖಂಡ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಒತ್ತಾಯಿಸಿದ್ದಾರೆ.
ಇದನ್ನೂ ನೋಡಿ: ವಚನಾನುಭವ – 05 : ಹಸಿವಿನ ಕುರಿತು ಬಡವರ ಧ್ವನಿಯಾಗಿ ದೇವರನ್ನು ಪ್ರಶ್ನಿಸುವ ಜೇಡರ ದಾಸಿಮಯ್ಯ – ಮೀನಾಕ್ಷಿ ಬಾಳಿ