ಮಧುರೈ: ನಾಲ್ಕು ಬೃಹತ್‌ ಕೈಗಾರಿಕಾ ಕಾರಿಡಾರ್‌ ಸ್ಥಾಪಿಸಲು ಮುಖ್ಯಮಂತ್ರಿಗಳಿಗೆ ಸಿಪಿಐ(ಎಂ) ನಿಯೋಗ ಮನವಿ

ಚೆನ್ನೈ: ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಮಧುರೈ ಜಿಲ್ಲೆಯಲ್ಲಿ ಬೃಹತ್‌ ಮಟ್ಟದಲ್ಲಿ ನಾಲ್ಕು ಹೊಸ ಕೈಗಾರಿಕಾ ಕಾರಿಡಾರ್‌ಗಳನ್ನು ಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರ ಕ್ರಮವಹಿಸಬೇಕೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐ(ಎಂ) ನಿಯೋಗವು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ನಿಯೋಗದಲ್ಲಿ ಮಧುರೈ ಲೋಕಸಭಾ ಕ್ಷೇತ್ರದ ಸಿಪಿಐ(ಎಂ) ಸಂಸದ ಸು.ವೆಂಕಟೇಶನ್‌, ಜಿಲ್ಲಾ ಕಾರ್ಯದರ್ಶಿ ಎಂ. ಗಣೇಶನ್‌, ಪಕ್ಷದ ಮುಖಂಡ ಕೆ. ರಾಜೇಂದ್ರನ್‌ ಇದ್ದರು.

ಜಿಲ್ಲೆಯಲ್ಲಿರುವ ಈಗಿನ ಮೂರು ಕೈಗಾರಿಕಾ ಪ್ರದೇಶದಲ್ಲಿ ಶೇ.5ಕ್ಕಿಂತ ಕಡಿಮೆ ಕೈಗಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ಮೇಲೂರಿನಲ್ಲಿ ಒಂದು ಸೇರಿದಂತೆ ಇನ್ನೂ ನಾಲ್ಕು ಕೈಗಾರಿಕಾ ಪ್ರದೇಶಗಳನ್ನು ಸ್ಥಾಪಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಹೊಸದಾಗಿ ರಚಿಸಲಾಗಿರುವ ಮಧುರೈ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಕೈಗಾರಿಕಾ ಬಳಕೆಗಾಗಿ ಜಿಲ್ಲೆಯಲ್ಲಿ 10% ಭೂಮಿಯನ್ನು ವರ್ಗೀಕರಿಸಲು ಪಕ್ಷವು ಬಯಸಿದೆ. ಕೈಗಾರಿಕಾ ಬಳಕೆಗಾಗಿ ಕೇವಲ 4% ಭೂಮಿಯನ್ನು ಪ್ರಸ್ತುತ ವರ್ಗೀಕರಣವು ಸಮರ್ಪಕವಾಗಿಲ್ಲ ಮತ್ತು ಇದು ಅಭಿವೃದ್ಧಿಯನ್ನು ಕುಂಠಿತಗೊಳಿಸಲಿದೆ ಎಂದು ತಿಳಿಸಲಾಗಿದೆ.

ಮಧುರೈ-ತೂತುಕುಡಿ ಕೈಗಾರಿಕಾ ಕಾರಿಡಾರ್ ಯೋಜನೆ ಅನುಷ್ಠಾನಕ್ಕೆ ಹಿರಿಯ ಅಧಿಕಾರಿಯನ್ನು ನೇಮಿಸಬೇಕು. ಕಳೆದ ಹಲವು ವರ್ಷಗಳಿಂದ ಯೋಜನೆ ಕಾರ್ಯಗತಗೊಂಡಿಲ್ಲ. ರಾಜ್ಯ ಸರ್ಕಾರವು ಕಾರಿಡಾರ್‌ನಲ್ಲಿ ಎರಡು ಅಥವಾ ಮೂರು ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸಬೇಕು ಎಂದು ತಿಳಿಸಲಾಗಿದೆ.

ಜವಳಿ ಮಾರುಕಟ್ಟೆ ಸೌಲಭ್ಯ

ದಕ್ಷಿಣ ಜಿಲ್ಲೆಗಳಲ್ಲಿ ಉತ್ಪಾದನೆಯಾಗುತ್ತಿರುವ ಜವಳಿ ಮತ್ತು ಕೈಮಗ್ಗದ ವಸ್ತುಗಳಿಗೆ ಮಧುರೈನಲ್ಲಿ ಬೃಹತ್ ಮಾರುಕಟ್ಟೆ ಸೌಲಭ್ಯ‌ ನಿರ್ಮಿಸುವ ಬಗ್ಗೆ ಸಿಪಿಐ(ಎಂ) ಪಕ್ಷವು ಮನವಿ ಮಾಡಿದೆ.

ಮಧುರೈ ಕೇಂದ್ರ ಕಾರಾಗೃಹವನ್ನು 1960ರಲ್ಲಿ ಸ್ಥಾಪಿಸಲಾಯಿತು, ಇದನ್ನು ನಗರದ ಹೃದಯಭಾಗದಿಂದ ಸ್ಥಳಾಂತರಗೊಳಿಸಬೇಕು. ಜೈಲು ಇರುವ ಪ್ರದೇಶವನ್ನು ತಮಿಳು ನಾಗರಿಕತೆಯ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಬೇಕು.

ಮೂಲಸೌಕರ್ಯಗಳ ಆದ್ಯತೆಯಾಗಿ ಫಾತಿಮಾ ಕಾಲೇಜು ಜಂಕ್ಷನ್ ಮತ್ತು ಕಾಳವಾಸಲ್ ಜಂಕ್ಷನ್ ಅನ್ನು ರಿಂಗ್ ರಸ್ತೆಯೊಂದಿಗೆ ಸಂಪರ್ಕಿಸುವ ವೈಗೈಯ ಎರಡೂ ಬದಿಗಳಲ್ಲಿ ತಡೆರಹಿತ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಕೋರಲಾಗಿದೆ.

ಅಲ್ಲದೆ, ವೀರಘನೂರು ಜಂಕ್ಷನ್, ಮಂಡೇಲಾ ನಗರ ಜಂಕ್ಷನ್, ಸರ್ಕಾರಿ ರಾಜಾಜಿ ಆಸ್ಪತ್ರೆ ರಸ್ತೆ, ಮಟ್ಟುತಾವಣಿ, ಸೌತ್ ಗೇಟ್ ಮತ್ತು ಗೋರಿಪಾಳ್ಯಂನಲ್ಲಿ ಮೆಲಮಾಡೈಂಡ್ ಎಲಿವೇಟೆಡ್ ಕಾರಿಡಾರ್‌ ಅಡಿಯಲ್ಲಿ ಸೇತುವೆಗಳನ್ನು ನಿರ್ಮಿಸಬೇಕೆಂದು ಕೋರಲಾಗಿದೆ.

ಮೇಯರ್ ಮುತ್ತು ರಸ್ತೆಯ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕೆಂದು ಸಿಪಿಐ(ಎಂ) ಪಕ್ಷವು ಮನವಿ ಮಾಡಿದೆ.

ಮೆಟ್ರೋ ಸೇವೆ

ಮಧುರೈ ನಗರದಲ್ಲಿ ಮೆಟ್ರೋ ಸಾರಿಗೆ ಸೇವೆಯನ್ನು ನಿರ್ಮಾಣ ಮಾಡುವ ಬಗ್ಗೆ ಮಾರ್ಗವನ್ನು ಗುರುತಿಸಿ ಅಂತಿಮಗೊಳಿಸಬೇಕೆಂದು ಮನವಿ ಮಾಡಲಾಗಿದೆ. ಅಲ್ಲದೆ, ಹೆಚ್ಚುವರಿ ಪಂಪಿಂಗ್ ಸೌಲಭ್ಯದ ಜೊತೆಗೆ ಮುಚ್ಚಿದ ಪ್ರದೇಶಗಳಿಗೆ ಭೂಗತ ಒಳಚರಂಡಿ ವ್ಯವಸ್ಥೆಯನ್ನು ಒದಗಿಸಬೇಕು. ವೈಗೈ ನದಿಗೆ ಕೊಳಚೆ ನೀರು ಬಿಡುವುದನ್ನು ತಡೆಯಲು ಕ್ರಮವಹಿಸಬೇಕು. ನಗರದಲ್ಲಿ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳನ್ನು ಸುಧಾರಿಸಲು ₹ 150 ಕೋಟಿ ವಿಶೇಷ ನಿಧಿಯನ್ನು ಮೀಸಲಿಡಬೇಕೆಂದು ಮನವಿ ಮಾಡಲಾಗಿದೆ.

ಅಲಂಗನಲ್ಲೂರಿನಲ್ಲಿ ಜಲ್ಲಿಕಟ್ಟುಗಾಗಿ ಆಧುನಿಕ ಗ್ಯಾಲರಿ ನಿರ್ಮಿಸುವುದು, ತಮಿಳು ಸಂಗಮ್ ಕಟ್ಟಡವನ್ನು ಸದುಪಯೋಗಪಡಿಸಿಕೊಳ್ಳುವುದು ಮತ್ತು ಜಿಲ್ಲೆಯಲ್ಲಿ ಹೊಸ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಸ್ಥಾಪಿಸುವುದು, ಕೊಟ್ಟಂಪಟ್ಟಿಯಲ್ಲಿ ಐಟಿಐ ಕಾಲೇಜು ಮತ್ತು ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯ ಕಾಲೇಜನ್ನು ಸರ್ಕಾರಿ ಕಾಲೇಜಾಗಿ ಪರಿವರ್ತಿಸುವುದು ಸೇರಿದಂತೆ, ಮಧುರೈ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಅನುಕೂಲವಾಗುವಂತೆ ಒಳವರ್ತುಲ ರಸ್ತೆಯಲ್ಲಿ ಅಂಡರ್‌ಪಾಸ್‌ ನಿರ್ಮಾಣವನ್ನು ತ್ವರಿತಗೊಳಿಸಬೇಕೆಂದು ಮನವಿ ಮಾಡಿಕೊಂಡಿದೆ.

ಅಲಂಗನಲ್ಲೂರಿನ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಕಾರ್ಯಗತಗೊಳಿಸಲು ₹ 10 ಕೋಟಿ ವಿಶೇಷ ನಿಧಿಯನ್ನು ಮಂಜೂರು ಮಾಡಬೇಕು. ಹೆಚ್ಚುವರಿ 2,000 ಎಕರೆಗೆ ನೀರಾವರಿ ಒದಗಿಸಲು ಪೆರಿಯಾರ್ ಮುಖ್ಯ ಕಾಲುವೆ ಮೂಲಕ ಸಥಿಯಾರ್ ಅಣೆಕಟ್ಟಿಗೆ ನೀರನ್ನು ಹರಿಸಲು ಕೋರಲಾಗಿದೆ.

Donate Janashakthi Media

Leave a Reply

Your email address will not be published. Required fields are marked *