ವಿಭಜನಕಾರೀ ನಡೆಗಳನ್ನು ತಡೆಗಟ್ಟಬೇಕು – ಸಿಪಿಐ(ಎಂ) ಆಗ್ರಹ

ಜನಗಳ ನಡುವೆ ಬೆಸೆದಿರುವ ಐಕ್ಯತೆಯನ್ನು  ಮುರಿಯಲು ಮತ್ತು ಛಿದ್ರಗೊಳಿಸಲು  ಪ್ರಯತ್ನಿಸುವವರಿರ ವಿರುದ್ಧ ದೃಢ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಪ್ರಿಲ್ 25ರಂದು ನೀಡಿರುವ ಹೇಳಿಕೆಯಲ್ಲಿ ಸಿಪಿಐ(ಎಂ) ಆಗ್ರಹಿಸಿದೆ.

ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ವಿರುದ್ಧ ಇಡೀ ದೇಶವೇ ಒಗ್ಗಟ್ಟಿನಿಂದ ಹೊರಬಂದಿರುವ ಸಮಯದಲ್ಲಿ, ಉತ್ತರಾಖಂಡ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದ ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳ ಮೇಲೆ ಬೆದರಿಕೆ ಮತ್ತು ಕಿರುಕುಳಗಳ ವರದಿಗಳಿವೆ. ಡೆಹ್ರಾಡೂನ್‌ನಲ್ಲಿ, ಒಂದು ಕೋಮುವಾದಿ ಸಂಘಟನೆಯ ಬೆದರಿಕೆ ಮತ್ತು ಅಂತಿಮ ಗಡುವು ವಿಧಿಸಿರುವ, ಅನೇಕ ಕಾಶ್ಮೀರಿ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ತೆರಳಿದ್ದಾರೆ.

ಕಾಶ್ಮೀರಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ದುಷ್ಟ ಅಭಿಯಾನವೂ ನಡೆಯುತ್ತಿದೆ. ಕಾಶ್ಮೀರಿಗಳು ಹೇಗೆ ಏಕಕಂಠದಿಂದ ಭಯೋತ್ಪಾದಕ ಸಂಘಟನೆಯನ್ನು ಖಂಡಿಸಿದ್ದಾರೆ ಮತ್ತು ಪ್ರತಿಭಟಿಸಿದ್ದಾರೆ ಎಂಬುದನ್ನು ಇಡೀ ದೇಶ ನೋಡಿದೆ ಎಂದಿರುವ ಪೊಲಿಟ್‍ಬ್ಯುರೊ, ಈ ಚಟುವಟಿಕೆಗಳು ಭಯೋತ್ಪಾದಕರ ಕಾರ್ಯಸೂಚಿಗೆ ಸಹಾಯ ಮಾಡುತ್ತಿವೆಯಷ್ಟೇ.. ಸಂಬಂಧಪಟ್ಟ ಅಧಿಕಾರಿಗಳು ಇಂತಹ ವಿಚ್ಛಿದ್ರಕಾರಿ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ದೃಢ ಕ್ರಮ ಕೈಗೊಳ್ಳಬೇಕು. ಜನಗಳ ನಡುವೆ ಬೆಸೆದಿರುವ ಐಕ್ಯತೆಯನ್ನು  ಮುರಿಯಲು ಮತ್ತು ಛಿದ್ರಗೊಳಿಸಲು  ಪ್ರಯತ್ನಿಸುವವರಿಗೆ ಯಾವುದೇ ದಯೆ ತೋರಿಸಬಾರದು ಎಂದು ಆಗ್ರಹಿಸಿದೆ.

ಇದನ್ನೂ ನೋಡಿ : ಶಾಂತಿ ಸ್ಥಾಪಿಸುವ ಬದಲು ಪ್ರಚೋದಿಸುತ್ತಿರುವ ಗೋಧಿ ಮೀಡಿಯಾ ಬಗ್ಗೆ ಕಾಶ್ಮೀರಿ ಜನರ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *