ಸಿಪಿಐ(ಎಂ) ಪಕ್ಷಕ್ಕೆ ಎರಡು ಎಕರೆ ಜಮೀನು ದಾನ ಮಾಡಿದ ಆರ್‌.ಎಂ. ಚಲಪತಿ

ಬಾಗೇಪಲ್ಲಿ: ಪಟ್ಟಣದಲ್ಲಿ ಸೆಪ್ಟಂಬರ್‌ 18ರಂದು ಜರುಗಿದ  ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ರಾಜಕೀಯ ಸಮಾವೇಶದಲ್ಲಿ ಪಟ್ಟಣದ ಹೊರವಲಯದ ಆರ್‌.ಎಂ. ಚಲಪತಿ ಎಂಬವರು ತನ್ನ ಪತ್ನಿ ಸಹಮತ ಪಡೆದು ಸುಮಾರು ಆರು ಕೋಟಿ ರೂ. ಮೌಲ್ಯದ ತನ್ನ ಎರಡು ಎಕರೆ ಜಮೀನನ್ನು ಸಿಪಿಐ(ಎಂ) ಪಕ್ಷಕ್ಕೆ ದಾನವಾಗಿ ನೀಡಿದ್ದಾರೆ.

ಸಿಪಿಐ(ಎಂ) ಪಕ್ಷದ ವತಿಯಿಂದ ಸೌಹಾರ್ದ – ಸಮೃದ್ಧ – ಜನತಾ ಕರ್ನಾಟಕ ನಿರ್ಮಾಣಕ್ಕಾಗಿ ರಾಜ್ಯ ಮಟ್ಟದ ರಾಜಕೀಯ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕೇರಳ ಎಡರಂಗ ಸರ್ಕಾರದ ಮುಖ್ಯಂತ್ರಿ ಪಿಣರಾಯಿ ವಿಜಯನ್‌  ಸೇರಿದಂತೆ ಸಿಪಿಐ(ಎಂ) ಪಾಲಿಟ್‌ ಬ್ಯೂರೋ ಸದಸ್ಯರಾದ ಬಿ.ವಿ. ರಾಘವಲು, ಎಂ.ಎ.ಬೇಬಿ, ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮತ್ತು ರಾಜ್ಯ ಮತ್ತು ಜಿಲ್ಲಾ ಮುಖಂಡರು ಸೇರಿದಂತೆ ಭಾರೀ ಜನಸ್ತೋಮ ನೆರೆದಿತ್ತು.

ಇದೇ ವೇಳೆ ಆರ್.‌ಎಂ.ಚಲಪತಿ ಹಾಗೂ ಅವರ ಪತ್ನಿ ಪಿ. ರಮಾಮಣಿ ಪಿಣರಾಯಿ ವಿಜಯನ್‌ ರವರಿಗೆ ತಮ್ಮ ಆಸ್ತಿಯ ನೋಂದಾಯಿತ ಪತ್ರಗಳನ್ನು ಸಮರ್ಪಿಸಿದ್ದಾರೆ.

ಚಲಪತಿ ಸಿಪಿಐ(ಎಂ) ಪಕ್ಷಕ್ಕೆ ದಾನವಾಗಿ ನೀಡಿರುವ ಈ ಆಸ್ತಿ, ಈ ಹಿಂದೆ ಸುಮಾರು 70ರ ದಶಕದಲ್ಲಿ ಸಿಪಿಐ(ಎಂ) ಪಕ್ಷ ಸಿದ್ಧಾಂತಗಳಿಗೆ ಮಾರುಹೋಗಿ ತಮ್ಮ ಆಸ್ತಿ ಅರ್ಪಿಸಿದ ಮಹನಿಯರನ್ನು ಮತ್ತೇ ಸ್ಮರಣೆ ಮಾಡುವಂತಾಗಿತ್ತು. ಇದೇ ರೀತಿಯಲ್ಲಿ ನಾಗಭೂಷಣಾಚಾರಿ ಎನ್ನುವವರು ತನ್ನ ಆಸ್ತಿಯನ್ನು ದಾನ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Donate Janashakthi Media

Leave a Reply

Your email address will not be published. Required fields are marked *