ತಳ ಸಮುದಾಯದ ಸಬಲೀಕರಣಕ್ಕಾಗಿ ಸಿಪಿಐಎಂ ಹೋರಾಟ – ಎಸ್‌ . ವರಲಕ್ಷ್ಮಿ

ಹಾಸನ : ದುಡಿಯುವ ವರ್ಗದ ಮತ್ತು ಎಲ್ಲಾ ರೀತಿಯ ತಳಸಮುದಾಯದ ಬದುಕನ್ನ ಹಸನುಗೊಳಿಸುವ ನಿಟ್ಟಿನಲ್ಲಿ  ನಡೆಸುತ್ತಿರುವ ಚಳುವಳಿ ರಾಜಕಾರಣದಲ್ಲಿ ಸಿಪಿಐಎಂ ಇಂದಿಗೂ ಮುಂಚೂಣಿ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಸ್.ವರಲಕ್ಷ್ಮಿ ಹೇಳಿದರು. ಹಾಸನ ನಗರದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) 12 ನೇ ಜಿಲ್ಲಾ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಆಳುವ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸುತ್ತಾ ನಿರಂತರವಾಗಿ ಜನಸಾಮಾನ್ಯರ ಬದುಕನ್ನ ಉತ್ತಮಗೊಳಿಸುವ ನಿಟ್ಟಿನಲ್ಲಿ ಸಿಪಿಐಎಂ ನ ಕೆಲಸ ಗಮನಾರ್ಹವಾದದ್ದು. ದೇಶದ ಸ್ವಾತಂತ್ರ್ಯ ಪೂರ್ವದಿಂದಲೂ ಭೂಮಿಯ ಪ್ರಶ್ನೆ, ಜಾತಿ ಅಸೃಷ್ಯತೆಯ ಪ್ರಶ್ನೆ ಮತ್ತು ಆರ್ಥಿಕದಂತಹ ಪ್ರಧಾನ ಪ್ರಶ್ನೆಗಳನ್ನಾಗಿ ಕೈಗೆತ್ತಿಕೊಂಡು ಜನಚಳುವಳಿ ರೂಪಿಸಿಕೊಂಡು ಬಂದಿದೆ. ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪೂರ್ಣ ಸ್ವರಾಜ್ಯ ಘೋಷಣೆಯನ್ನು ಕೊಟ್ಟವರು ಕಮ್ಯೂನಿಸ್ಟರು. ಈ ಚಳುವಳಿ ಗಟ್ಟಿಗೊಂಡರೆ ಮಾತ್ರ ಜನರ ಪ್ರಶ್ನೆಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ದುಡಿಯುವ ಜನ ಕೆಲಸ ಮಾಡಬೇಕೆಂದು ಕರೆ ಕೊಟ್ಟರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿಪಿಐಎಂ ಹಾಸನ ಜಿಲ್ಲಾ ಸಮಿತಿಯ ಮಾಜಿ‌ ಕಾರ್ಯದರ್ಶಿಗಳಾದ ಧರ್ಮೇಶ್ ಜಿಲ್ಲೆಯಲ್ಲಿ ಪಕ್ಷ ಎಲ್ಲಾ ವಿಭಾಗದ ಸಮಸ್ಯೆಗಳಿಗೆ ಸ್ಪಂದಿಸುತ್ತಾ ನಿರಂತರ ರಾಜಕೀಯ ಮಧ್ಯಪ್ರವೇಶ ಮಾಡುತ್ತಾ ಬಂದಿದೆ ಎಂದರು.

ನೂತನ ಜಿಲ್ಲಾ ಸಮಿತಿ ಆಯ್ಕೆ : ಸಮ್ಮೇಳನದಲ್ಲಿ 13 ಜನರ ಸಿಪಿಐಎಂ ಹಾಸನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ಜಿಲ್ಲಾ ಕಾರ್ಯದರ್ಶಿಯಾಗಿ ಎಚ್.ಆರ್.ನವೀನ್ ಕುಮಾರ್ ಆಯ್ಕೆಯಾಗಿದ್ದು,  ಸದಸ್ಯರುಗಳಾಗಿ ಧರ್ಮೇಶ್, ಎಂ.ಜಿ. ಪೃಥ್ವಿ, ಪುಷ್ಪ, ಸೌಮ್ಯ, ಅರವಿಂದ್, ಶ್ರೀಧರ್, ಮಹಮದ್, ಎಚ್.ಎಸ್. ಮಂಜುನಾಥ್,  ಉಮೇಶ್,  ಲಿಂಗರಾಜು ಮತ್ತು ಖಾಯಂ ಆಯ್ಕಾನಿತರಾಗಿ ವಿ.ಸುಕುಮಾರ್ ಹಾಗು ಜಿ.ಪಿ.ಸತ್ಯನಾರಾಯಣ ಆಯ್ಕೆಮಾಡಲಾಯಿತು.

 

Donate Janashakthi Media

Leave a Reply

Your email address will not be published. Required fields are marked *