ಬೆಂಗಳೂರಿನ ಎಲ್ಲಾ ಮೆಟ್ರೋ ರೈಲು ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗೆ ಅವಕಾಶ ನೀಡಲು ಸಿಪಿಐ(ಎಂ) ಒತ್ತಾಯ

ಬೆಂಗಳೂರು ಮೆಟ್ರೋ ರೈಲು ನಿಲ್ದಾಣಗಳಲ್ಲಿ ಅಮುಲ್ ಉತ್ಪಾದನೆಗಳ ಮಾರಾಟ ಮಳಿಗೆಗಳು ತಲೆ ಎತ್ತಿವೆ. ಕರ್ನಾಟಕದ ನಂದಿನಿ ಎಲ್ಲ ರೀತಿಯಲ್ಲಿಯೂ ಉತ್ತಮ ಗುಣಮಟ್ಟದ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸಿ ಮಾರುತ್ತ ಜನಮನ್ನಣೆ ಗಳಿಸಿದೆ. ಬಹುತೇಕ ಸಣ್ಣ ಮತ್ತು ಅತಿ ಸಣ್ಣ ಹೈನುಗಾರರಿಂದ ಪ್ರತಿದಿನ ಸುಮಾರು ಒಂದು ಕೋಟಿ ಲೀಟರ್‌ಗಿಂತ ಹೆಚ್ಚು ಹಾಲು ಸಂಗ್ರಹಣೆ ಮಾಡುತ್ತಿರುವ ಕೆ.ಎಂ.ಎಫ್ ಬಹುತೇಕ ಮಾರುಕಟ್ಟೆಗೆ ಬೆಂಗಳೂರು ಮಹಾನಗರವನ್ನೇ ಆಶ್ರಯಿಸಿದ್ದು ಎಲ್ಲಾ ಮೆಟ್ರೋ ರೈಲು ನಿಲ್ದಾಣದಲ್ಲಿ ನಂದಿನಿ ಮಳಿಗೆಗೆ ಅವಕಾಶ ನೀಡಬಕು ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್‌ ಒತ್ತಾಯಿಸಿದ್ದಾರೆ. ನಂದಿನಿ 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರಕಾರದ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದಾದ ಶಾಲಾ ಮಕ್ಕಳಿಗೆ ಹಾಲು ವಿತರಣೆಗೆ ಸರಬರಾಜಾಗುತ್ತಿರುವುದು ಕೂಡಾ ನಂದಿನಿ ಹಾಲೇ ಆಗಿದೆ. ಸಂಗ್ರಹವಾಗುವ ಎಲ್ಲ ಹಾಲು ಮಾರಾಟವಾಗುವುದಿಲ್ಲ, ಹಲವು ಉಪ ಉತ್ಪನ್ನಗಳನ್ನು ತಯಾರಿಸಿದ ಮೇಲೂ ಹಾಲು ಹೆಚ್ಚುವರಿಯಾಗಿ ಉಳಿಯುತ್ತದೆ. ಹೀಗಿರುವಾಗ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗಳನ್ನು ತೆರೆಯಲು ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಪ್ಯಾಲೆಸ್ಟೈನ್‌ಗೆ ಬೆಂಬಲ ವ್ಯಕ್ತಪಡಿಸಿ ಎಡಪಕ್ಷಗಳಿಂದ ರಾಷ್ಟ್ರೀಯ ಸೌಹಾರ್ದತಾ ದಿನ ಆಚರಣೆ 

ಪ್ರತಿಯೊಂದು ರಾಜ್ಯವು ತನ್ನದೇ ಆದ ಸಹಕಾರಿ ಒಕ್ಕೂಟ ವನ್ನು ಹೊಂದಿದ್ದು ಕೆಲವು ರಾಜ್ಯಗಳು ಕೊರತೆಯನ್ನು ಕೆಲವು ರಾಜ್ಯಗಳು ಮಿಗತೆಯನ್ನು ಹೊಂದಿವೆ. ಇಂತಹ ಸಂದರ್ಭದಲ್ಲಿ ಪರಸ್ಪರರ ಮಾರುಕಟ್ಟೆ ಕಸಿಯುವ ಆನಾರೋಗ್ಯಕರ ಪೈಪೋಟಿ ನಿವಾರಿಸಲು ಈ ಹಿಂದೆ ಎನ್.ಡಿ.ಡಿ.ಬಿ  ಮೂಲಕ ಹೆಚ್ಚುವರಿ ಹಾಲು ಲಭ್ಯ ಇರುವ ಸಹಕಾರಿ ಒಕ್ಕೂಟಗಳಿಂದ ಪಡೆದು ಕೊರತೆ ಇರುವ ರಾಜ್ಯಗಳಲ್ಲಿ ಆ ರಾಜ್ಯದ ಬ್ರಾಂಡ್ ಹೆಸರಿನಲ್ಲೇ ಮಾರಾಟ ಮಾಡಲುಕ್ರಮ ವಹಿಸಲಾಗುತ್ತಿತ್ತು .ಆ ಮೂಲಕ ರಾಜ್ಯಗಳ ಸಹಕಾರಿ ಒಕ್ಕೂಟಗಳು ಪರಸ್ಪರ ಆನಾರೋಗ್ಯಕರ ಪೈಪೋಟಿಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಸಹಕಾರಿ ವಲಯಕ್ಕೆ ಅಮುಲ್ ಲಗ್ಗೆ ಇಡುತ್ತದೆ ಎಂಬುದು ಕೂಡಾ ಚರ್ಚೆಯ ವಿಷಯವಾಗಿತ್ತು. ಈಗ ಮಾಜಿ ಸಂಸದ ಡಿ.ಕೆ.ಸುರೇಶ್‌ರವರು ಕೆ.ಎಂ.ಎಫ್.ನ ನಿರ್ದೇಶಕರಾಗಿದ್ದು ಮುಂದೆ ಅಧ್ಯಕ್ಷರಾಗಲು ಎಲ್ಲ ತಯಾರಿ ನಡೆಸಿರುವ ಸಂದರ್ಭದಲ್ಲಿ ಅಮುಲ್ ಉತ್ಪನ್ನಗಳನ್ನು ಮೆಟ್ರೋ ನಿಲ್ದಾಣಗಳು ಅಥವಾ ಇತರ ಸರಕಾರಿ ಒಡೆತನದ ಜಾಗಗಳಲ್ಲಿ ಮಾರಾಟಕ್ಕೆ ಅನುಕೂಲ ಮಾಡಿಕೊಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.

ಟೆಂಡರ್ ಪ್ರಕ್ರಿಯೆಯಲ್ಲಿ ಅಮುಲ್ ಮಾತ್ರ ಭಾಗವಹಿಸಿತ್ತು ಕೆ.ಎಂ.ಎಫ್ ಭಾಗವಹಿಸಿಲ್ಲ ಎಂದರೆ ಅದರ ಹೊಣೆಯಾರದು? ಟೆಂಡರ್ ಹಾಕದಿರಲು ಕಾರಣವೇನೆಂದು ಬಹಿರಂಗ ಪಡಿಸಬೇಕು.
ಈಗಾಗಲೇ ವಿವಿಧ ಖಾಸಗೀ ಹಾಲು ಉತ್ಪಾದಕ ಕಂಪನಿಗಳಿಗೆ ಅವಕಾಶ ಕೊಟ್ಟಿದ್ದು ಸಹಕಾರಿ ಹೈನುಗಾರಿಕಾ ವಲಯಕ್ಕೆ ಪೆಟ್ಟು ನೀಡಿದೆ. ರೈತರ ಸಹಾರಿಯಾಗಿರುವ ನಂದಿನಿಯನ್ನು ಬೆಳೆಸುವ ಉಳಿಸುವುದು ಸರಕಾರದ ಆದ್ಯತೆಯಾಗಬೇಕು ಎಂದು ಸಿಪಿಐ(ಎಂ) ಒತ್ತಾಯಿಸಿದೆ.

ಇದನ್ನೂ ನೋಡಿ : POSH ಕಾಯ್ದೆ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?Janashakthi Media

 

Donate Janashakthi Media

Leave a Reply

Your email address will not be published. Required fields are marked *