ಕಾರವಾರ: ಜಿಲ್ಲೆಯ ಹಿರಿಯ ರಾಜಕಾರಣಿಗಳಾದ ಆರ್. ವಿ. ದೇಶಪಾಂಡೆಯವರು ಹಿರಿಯ ಪತ್ರಕರ್ತೆ ರಾಧಾ ಹಿರೇಗೌಡರ್ ರ ಪ್ರಶ್ನೆಗೆ ಬಹಳ ಹಗುರವಾದ ಮತ್ತು ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ ಎಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಅಭಿಪ್ರಾಯ ಪಟ್ಟಿದೆ ಎಂದು ಕಾರ್ಯದರ್ಶಿ ಯಮುನಾ ಗಾಂವ್ಕರ್ ಹೇಳಿದ್ದಾರೆ. ಮಹಿಳೆ
ಜಿಲ್ಲೆಯ ಮತ್ತು ಸಮಾಜದ ಅಭಿವೃದ್ಧಿಗಾಗಿ ಬಹುಸುಸಜ್ಜಿತ ಆಸ್ಪತ್ರೆ ಕುರಿತು ಹಳಿಯಾಳ ದಾಂಡೇಲಿ ಜೋಯಿಡಾ ವಿಧಾನ ಸಭಾ ಕ್ಷೇತ್ರದ ಶಾಸಕರು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಆರ್ ವಿ ದೇಶಪಾಂಡೆಯವರಲ್ಲಿ ಆಸ್ಪತ್ರೆ ಕುರಿತು ಹಿರಿಯ ಪತ್ರಕರ್ತೆ ರಾಧಾ ಹಿರೇಗೌಡರ್ ಅವರು ಪ್ರಶ್ನೆ ಕೇಳಿದ್ದಾರೆ.
ದೇಶಪಾಂಡೆಯವರು ಇಷ್ಟು ಹಿರಿಯ ರಾಜಕಾರಣಿಯಾಗಿ ಒಂಬತ್ತು ಬಾರಿ ಶಾಸಕರಾಗಿ ಸಾಂವಿಧಾನಿಕವಾಗಿ ಮತ್ತು ಲಿಂಗ ಸೂಕ್ಷ್ಮತೆಯ ಬಗ್ಗೆ ಇನ್ನೊಬ್ಬರಿಗೆ ಪಾಠ ಹೇಳುವ ಸ್ಥಾನದಲ್ಲಿದ್ದುವರು “ನಿನಗೆ ಹೆರಿಗೆಗೆ ಸಮಸ್ಯೆಯಾದರೆ ಮಾಡಿಸಿಕೊಡುವೆ” ಎಂದು ಜವಾಬ್ದಾರಿ ರಹಿತ ಮನಸ್ಥಿತಿಯಿಂದ ಮಾತಾಡಿದ್ದು ವರದಿಯಾಗಿದೆ. ವೀಡಿಯೋಗಳೂ ಹರಿದಾಡುತ್ತಿದೆ. ಇವರ ಮಾತು ಹಲವು ಅಸೂಕ್ಷ್ಮ, ಸ್ತ್ರೀವಿರೋಧಿ ಪಾಳೆಗಾರಿ ಯಾಜಮಾನ್ಯದ ರಾಜಕಾರಣಿಗಳಲ್ಲಿ ಇರುವುದರ ಪ್ರತಿಬಿಂಬದಂತಿದೆ ಎಂದರು. ಮಹಿಳೆ
ಇದನ್ನೂ ಓದಿ: ಬೆಂಗಳೂರ| ಶೇ 1ರಷ್ಟು ಒಳ ಮೀಸಲಿಗೆ ಆಗ್ರಹಿಸಿ ಅಲೆಮಾರಿ ಸಮುದಾಯ ಪ್ರತಿಭಟನೆ
ಕೆಲವು ರೂಢಿಗತ ಪಾರಂಪರಿಕ ವ್ಯಕ್ತಿಗಳ ಮತ್ತು ಸಂಘ ಸಂಸ್ಥೆಗಳ ಮನಸ್ಥಿತಿಯ ವ್ಯಕ್ತರೂಪವೇ ಆಗಿದೆ. ಮಹುಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಇದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಉತ್ತರ ಕನ್ನಡ ಜಿಲ್ಲಾ ಸಮಿತಿಯು ಬಲವಾಗಿ ಖಂಡಿಸುತ್ತದೆ. ಈ ಕೂಡಲೇ ಶ್ರೀ ಆರ್. ವಿ. ದೇಶಪಾಂಡೆಯವರು ತಮ್ಮ ಮಾತಿಗಾಗಿ ಕ್ಷಮೆ ಕೇಳಬೇಕು. ಇನ್ನು ಮುಂದೆ ಇಂತಹ ಯಾವುದೇ ಅಸೂಕ್ಷ್ಮ ಮಾತಾಡಬಾರದೆಂದು ಸಿಪಿಐಎಂ ಪಕ್ಷದ ಪರವಾಗಿ ಆಗ್ರಹಿಸುತ್ತೇವೆ.
ಮಾತ್ರವಲ್ಲ, ಜಿಲ್ಲೆಯ ಜನ ಜೀವನ ರಕ್ಷಣೆಗಾಗಿ ಎಷ್ಟೊಂದು ವರ್ಷಗಳಿಂದ ಬಹುಸುಸಜ್ಜಿತ ಆಸ್ಪತ್ರೆಗಾಗಿ ಹೋರಾಟ ನಡೆಯುತ್ತಿದ್ದರೂ ಅದರ ಈಡೇರಿಕೆಗಾಗಿ ಹಿರಿಯ ರಾಜಕಾರಣಿಗಳಾದ ತಮ್ಮ ಪ್ರಯತ್ನ ಸ್ವಲ್ಪವೂ ಸಾಕಾಗದು ಎಂದು ಹೇಳಿದರು.
ಮಾತ್ರವಲ್ಲ, ಈಗಾಗಲೇ ಜಿಲ್ಲಾ ಕೇಂದ್ರದಲ್ಲಿ ಕಾಮಗಾರಿ ಪೂರೈಸಿ ತಲೆ ಎತ್ತಿ ನಿಂತ ಆಸ್ಪತ್ರೆ ಜನರ ಉಪಯೋಗಕ್ಕೆ ಬಳಕೆಯಾಗುವಂತೆ ಮಾಡಲು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳನ್ನು ಸರ್ಕಾರದ ಪರವಾಗಿ ಬರಬೇಕಾದವರನ್ನು ಬಹುಬೇಗನೇ ಕರೆಯಿಸಿ ಉದ್ಘಾಟಿಸಿಕೊಡಲಿಕ್ಕೂ ಮುಂದಾಳತ್ವ ಅಥವಾ ಹಿರಿತನ ವಹಿಸುವ ಸ್ಥಾನದಲ್ಲಿದ್ದ ತಾವು ಮುಂದಾಗದಿರುವುದು ಖೇದಕರ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಜಿಲ್ಲಾ ಸಮಿತಿ ಅಭಿಪ್ರಾಯ ಪಡುತ್ತದೆ ಎಂದರು.
ಇದನ್ನೂ ನೋಡಿ: ಏನ್ ಸರ್ (SIR) ಇದು! ಮತದಾನದ ಹಕ್ಕಿಗೆ ಯಾಕೆ ಕೊಕ್ಕೆ? ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media
