ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೂಲಿಬೆಲೆ ವಿರುದ್ಧ ಕ್ರಮಕ್ಕೆ ಸಿಪಿಐ(ಎಂ) ಒತ್ತಾಯ

ಬೆಂಗಳೂರು: ಸದಾ ಧರ್ಮದ್ವೇಷ ಬಿತ್ತಿ, ಪ್ರಚೋದನಕಾರಿ ಮಾತುಗಳಿಗೆ ಹೆಸರಾಗಿರುವ ಚಕ್ರವರ್ತಿ ಸೂಲಿಬೆಲೆ ಮತ್ತೆ ಅತ್ಯಂತ ಆಕ್ಷೇಪಾರ್ಹವಾಗಿ ಮುಸ್ಲಿಂ ಮಹಿಳೆಯರ ಕುರಿತು ಮಾತಾಡಿದ ವಿಡಿಯೋಗಳು ಹರಿದಾಡುತ್ತಿವೆ. ಇದೊಂದು ಧರ್ಮದ್ವೇಷ ಪ್ರಚೋದನೆಯ ನಡೆಯಾಗಿದ್ದು ರಾಜ್ಯದ ಕಾಂಗ್ರೆಸ್ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಿ.ಪಿ.ಐ(ಎಂ) ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್ ಹೇಳಿದರು.

ಎಲ್ಲಿಯೂ ಅಸ್ತಿತ್ವದಲ್ಲಿಲ್ಲದ ಲವ್ ಜಿಹಾದ್ ಹೆಸರಿನಲ್ಲಿ ವಿಷ ಬಿತ್ತಿ ಬೆಳೆದು ಸಾಮಾಜಿಕ ಕ್ಷೋಭೆಯುಂಟು ಮಾಡುವ ಸಂಘಿಗಳ ನಡವಳಿಕೆಗಳಿಗೆ ಕಡಿವಾಣ ಹಾಕಲು ಹಿಂಜರಿಯುತ್ತಿರುವ ಸರಕಾರದ ನಡೆ ಇವರಂತಹವರಿಗೆ ಮತ್ತಷ್ಟು ದ್ವೇಷ ರಾಜಕಾರಣವನ್ನು ಪ್ರಚೋದಿಸಲು ಕುಮ್ಮಕ್ಕು ಕೊಟ್ಟಿದೆ. ಮುಸ್ಲಿಂ

ಇದನ್ನೂ ಓದಿ: ವಿಧಾನಸಭ ಚುನಾವಣೆ: ಕೇರಳ, ಪುದುಚೇರಿ, ಅಸ್ಸಾಂನಲ್ಲಿ ದಾಖಲೆಯ ಮತದಾನ

ಈಗ ಕಪೋಲ ಕಲ್ಪಿತ ಕೇರಳ ಸ್ಟೋರಿ ಹೆಸರಿನಲ್ಲಿ ಮತ್ತದೇ ಕ್ಷÄಲ್ಲಕ ರಾಜಕಾರಣ ಮಾಡಲು ಹೊರಟಿರುವಾಗ ಸರಕಾರ ತನ್ನ ಎಂದಿನ ಮೃದು ಹಿಂದುತ್ವ ಧೋರಣೆಯನ್ನು ಪ್ರದರ್ಶನ ಮಾಡದೇ ಕಟ್ಟುನಿಟ್ಟಾದ ಕ್ರಮಕ್ಕೆ ಮುಂದಾಗಬೇಕೆAದು ಸಿ.ಪಿ.ಐ(ಎಂ) ಕರ್ನಾಟಕ ರಾಜ್ಯ ಸಮಿತಿಯು ಒತ್ತಾಯಿಸುತ್ತದೆ.

ಇದನ್ನೂ ನೋಡಿ: ಉರಿಗೌಡ–ನಂಜೇಗೌಡ ಸೃಷ್ಟಿಕರ್ತರಿಗೆ ‘ಹೈದರ್ ಅಲಿ–ಟಿಪ್ಪು ಸುಲ್ತಾನ್’ ಪುಸ್ತಕವೇ ಉತ್ತರ Janashakthi Media

Donate Janashakthi Media

Leave a Reply

Your email address will not be published. Required fields are marked *