ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ; ಸಿಪಿಐ(ಎಂ) ಕೌನ್ಸಿಲರ್‌-ಡಿವೈಎಫ್‌ಐ ಕಾರ್ಯಕರ್ತರ ಬಂಧನ-ಬಿಡುಗಡೆ

ಚೆನ್ನೈ: 2022ರ ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ಬಿಬಿಸಿ ಸುದ್ದಿ ಸಂಸ್ಥೆಯ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದನ್ನು ಖಂಡಿಸಿ ಪ್ರತಿಭಟನೆ ನಡೆದಿದ್ದು, ಸಿಪಿಐ(ಎಂ) ಕೌನ್ಸಿಲರ್‌ ಹಾಗೂ ಡಿವೈಎಫ್‌ಐ ಹಾಗೂ ಕಾರ್ಯಕರ್ತರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸುವ ಮೊದಲೇ ಸಾಕ್ಷ್ಯಚಿತ್ರ ವೀಕ್ಷಣೆ ಕಾರ್ಯಕ್ರಮ ನಡೆದಿದೆ ಎಂದು ವರದಿಯಾಗಿದೆ.

ಇದನ್ನು ಓದಿ: ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಕೇರಳದಲ್ಲಿ ಪ್ರದರ್ಶನವಾಗಲಿದೆ: ಡಿವೈಎಫ್‌ಐ

ಚೆನ್ನೈನ ಟಿಪಿ ಛತ್ರಂನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಹಾಗೂ ಡಿವೈಎಫ್‌ಐ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯ ಭಾಗವಾಗಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸಿದ್ದರು. ತಮ್ಮ ಫೋನ್‌ಗಳಲ್ಲಿ ಸಾಕ್ಷ್ಯಚಿತ್ರಗಳನ್ನು ಒಟ್ಟಿಗೆ ವೀಕ್ಷಿಸಲು ಉದ್ದೇಶಿಸಿದ್ದರು. ಈ ವೇಳೆ ಪೊಲೀಸರು 14 ಮಂದಿಯನ್ನು ಬಂಧಿಸಿದ್ದಾರೆ.

ರಸ್ತೆಯುದ್ದಕ್ಕೂ ವೀಡಿಯೊ ಪ್ರದರ್ಶಿಸಲು ಡಿವೈಎಫ್‌ಐ ಕರೆಯ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಸಿಪಿಐ(ಎಂ) ಕೌನ್ಸಿಲರ್‌ ಎ.ಪ್ರಿಯದರ್ಶಿನಿ ಹಾಗೂ ಚೆನ್ನೈ ಜಿಲ್ಲಾ ಸಮಿತಿ ಘಟಕದ ಟಿ. ಸಿದ್ದಾರ್ಥನ್‌ ನೇತೃತ್ವ ವಹಿಸಿದ್ದರು. ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನಾ ನಿರತರು ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಇದನ್ನು ಓದಿ: ವಿವಿಗಳಲ್ಲಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನ : ಜೆಎನ್‌ಯು ಕ್ಯಾಂಪಸ್‌ನಲ್ಲಿ ಉದ್ವಿಗ್ನತೆ

ಪ್ರತಿಭಟನೆಗೆ ಅಡ್ಡಿಪಡಿಸಿದ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ ಕೆಲ ಸಮಯದ ನಂಬರ ಬಿಡುಗಡೆಗೊಳಿಸಿದರು.  ಪೊಲೀಸರ ಪ್ರಕಾರ, ನಾವು ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಎಂದು ತಿಳಿಸಿದ್ದಾರೆ. ನಾವು ಅವರನ್ನು ಬಂಧಿಸಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಸಿಪಿಐ(ಎಂ)ನ ಪಕ್ಷದ ಕೌನ್ಸಿಲರ್‌ ಎ.ಪ್ರಿಯದರ್ಶಿನಿ ಕಳೆದ ವರ್ಷ ನಡೆದ ಸ್ಥಳೀಯ ನಗರ ಸಂಸ್ಥೆ ಚುನಾವಣೆಯಲ್ಲಿ ತೆನಾಂಪೇಟೆಯ ವಾರ್ಡ್ ಸಂಖ್ಯೆ 98ರಲ್ಲಿ ಗೆಲುವು ಸಾಧಿಸಿದರು. ಅವರು ಗೆಲ್ಲುವ ವೇಳೆ ಅವರು 21ನೇ ವಯಸ್ಸಿನವರಾಗಿದ್ದು, ಚೆನ್ನೈನ ಅತ್ಯಂತ ಕಿರಿಯ ಕೌನ್ಸಿಲರ್ ಆಗಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *