ಸಿಪಿಐ ಆರು ಕಡೆ ಸ್ಪರ್ಧೆ: ಎರಡಲ್ಲಿ ಜಯ-ನಾಲ್ಕರಲ್ಲಿ ಎರಡನೇ ಸ್ಥಾನ

ತಿರುಥುರೈಪೂಂಡಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಜಯಶೀಲರಾದ ಮಾರಿಮುತ್ತು

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಸ್ಪರ್ಧಿಸಿದ ಭಾರತ ಕಮ್ಯೂನಿಸ್ಟ್‌ ಪಕ್ಷ-ಸಿಪಿಐ ಅಭ್ಯರ್ಥಿಗಳಲ್ಲಿ ಎರಡು ಕಡೆ ಜಯಗಳಿಸಿ ಶಾಸಕರಾಗಿದ್ದಾರೆ. ಒಟ್ಟು 234 ವಿಧಾನಸಭಾ ಕ್ಷೇತ್ರಗಳಲ್ಲಿ ಡ್ರಾವಿಡ ಮುನ್ನೇತ್ರ ಕಳಗಂ ಹಾಗೂ ಎಡಪಕ್ಷಗಳು ಮೈತ್ರಿ ಮಾಡಿಕೊಂಡು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು.

ಇದನ್ನು ಓದಿ: ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಸಿಪಿಐ(ಎಂ)ಗೆ ಎರಡರಲ್ಲಿ ಜಯ

ಸಿಪಿಐ(ಎಂ) ಹಾಗೂ ಸಿಪಿಐ ಪಕ್ಷಗಳು ಕ್ರಮವಾಗಿ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು ಅವುಗಳಲ್ಲಿ ಎರಡೆರಡು ಸ್ಥಾನಗಳನ್ನು ಎರಡೂ ಪಕ್ಷಗಳು ಜಯಗಳಿಸಿವೆ.

ಸಿಪಿಐ ಪಕ್ಷದ ಮತವಿವರಗಳು

ಥಳಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ ಸಿಪಿಐ ಕ್ಷೇತ್ರದ ಅಭ್ಯರ್ಥಿ ರಾಮಚಂದ್ರನ್‌ ಟಿ ಅವರು 1,20,641 ಮತಗಳನ್ನು ಪಡೆದಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಡಾ. ನಾಗೇಶ್‌ ಕುಮಾರ್‌ ಸಿ ಅವರು 64,415 ಪಡೆದು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ರಾಮಚಂದ್ರನ್‌ ಟಿ ಅವರ ಗೆಲುವಿನ ಅಂತ 56,226 ಮತಗಳು. ಈ ಕ್ಷೇತ್ರದಲ್ಲಿ ಒಟ್ಟು 12 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು.

ಇದನ್ನು ಓದಿ: ಸಿಪಿಐ(ಎಂ)ನ ಎಂ ಚಿನ್ನದೊರೈಗೆ ಭರ್ಜರಿ ಜಯ

ತಿರುಥುರೈಪೂಂಡಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮಾರಿಮುತ್ತು ಕೆ ಅವರು 97,092 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ. ಎಐಎಡಿಎಂಕೆ ಪಕ್ಷದಿಂದ ಸ್ಪರ್ಧಿಸಿದ ಸುರೇಶ್‌ ಕುಮಾರ್‌ ಸಿ ಅವರು 67024 ಮತ ಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಕಣದಲ್ಲಿದ್ದರು.

ಸಿವಗಂಗಾ ವಿಧಾನಸಭೆಯಿಂದ ಸ್ಪರ್ಧಿಸಿದ ಎಸ್‌ ಗುಣಶೇಖರನ್‌ ಅವರು 70900 ಮತ ಪಡೆದರೆ, ಎಐಎಡಿಎಂಕೆ ಅಭ್ಯರ್ಥಿ ಪ್ರೊ.ಸೆಂಥಿಲ್‌ನಾಥನ್‌ ಅವರು 82153 ಮತ ಪಡೆದು ಗೆಲುವು ಸಾಧಿಸಿದ್ದಾರೆ.

ಇದನ್ನು ಓದಿ: 51 ಸಾವಿರ ಅಂತರದ ಗೆಲವು ಸಾಧಿಸಿದ ನಾಗೈ ಮಣಿ

ಭವಾನಿಸಾಗರ್‌ ವಿಧಾನಸಭೆಯಿಂದ ಸ್ಪರ್ಧಿಸಿದ ಪಿ.ಎಲ್.‌ ಸುಂದರಂ ಅವರು 83,173 ಮತ ಗಳಿಸಿದ್ದಾರೆ. ಗೆದ್ದ ಅಭ್ಯರ್ಥಿ ಎಐಎಡಿಎಂಕೆಯ ಎ.ಬನ್ನಾರಿ ಅವರು 99,181 ಮತ ಪಡೆದಿದ್ದಾರೆ.

ತಿರುಪೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ರವಿ ಸುಬ್ರಮಣ್ಯಂ ಎಂ. ಅವರು 73,282 ಮತ ಗಳಿಸಿದ್ದಾರೆ. ಎಐಎಡಿಎಂಕೆ ಅಭ್ಯರ್ಥಿ ವಿಜಯಕುಮಾರ್‌ ಕೆ. ಎನ್.‌ ಅವರು 1,13,384 ಮತ ಪಡೆದು ಗೆಲುವು ಸಾಧಿಸಿದ್ದಾರೆ.

ಇದನ್ನು ಓದಿ: ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ತೀವ್ರ ಸೋಲು – ಸಿಪಿಐ(ಎಂ) ಪೊಲಿಟ್ ಬ್ಯುರೊ

ವಲ್‌ಪರೈ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಆರ‍್ಮುಗಂ ಎಂ ಅವರು 59,449 ಮತ ಪಡೆದಿದ್ದಾರೆ. ಗೆದ್ದ ಅಭ್ಯರ್ಥಿ ಎಐಎಡಿಎಂಕೆಯ 71,672 ಮತ ಪಡೆದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *