ಯಶಸ್ವಿ ಸಾರ್ವತ್ರಿಕ ಮುಷ್ಕರಕ್ಕೆ ಕಾರ್ಮಿಕ ವರ್ಗಕ್ಕೆ ಸಿಪಿಐ(ಎಂ) ಅಭಿನಂದನೆಗಳು

ನವದೆಹಲಿ: ಫೆಬ್ರುವರಿ 12ರಂದು ನಡೆದ ಯಶಸ್ವಿ ಸಾರ್ವತ್ರಿಕ ಮುಷ್ಕರಕ್ಕೆ ನಮ್ಮ ದೇಶದ ಕಾರ್ಮಿಕ ವರ್ಗವನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿನಂದಿಸಿದೆ.

ನಾಲ್ಕು ಕಾರ್ಮಿಕ ಸಂಹಿತೆಗಳ ಅಧಿಸೂಚನೆಗೆ, ಹಕ್ಕು ಆಧಾರಿತ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತ್ರಿ ಕಾಯ್ದೆಯನ್ನು ವಾಸ್ತವವಾಗಿ ರದ್ದುಪಡಿಸಿಯೇ ಬಿಡುವ ಕ್ರಮಕ್ಕೆ ಹಾಗೂ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರದ ಇತರ ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ಜನ ವಿರೋಧಿ ನೀತಿಗಳನ್ನು ಪ್ರತಿಭಟಿಸುವಲ್ಲಿ ಕಾರ್ಮಿಕ ವರ್ಗದೊಂದಿಗೆ ರೈತರು ಮತ್ತು ಕೃಷಿ ಕಾರ್ಮಿಕರು ಕೂಡ ಸೇರಿಕೊಂಡರು.

ಕಾರ್ಮಿಕ ವರ್ಗವು ತನ್ನ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ಗಟ್ಟಿಯಾಗಿ ಕೇಳುವಂತೆ ಮಾಡಿದೆ. ಬಿಜೆಪಿ ಸರ್ಕಾರದ ವಿವಿಧ ಜನವಿರೋಧಿ ನೀತಿಗಳಿಗೆ ವಿರೋಧವಾಗಿ ಹೋರಾಟ ನಡೆಸುತ್ತಿರುವ ಕಾರ್ಮಿಕರು, ರೈತರು ಮತ್ತು ಕೃಷಿ ಕಾರ್ಮಿಕರೊಂದಿಗೆ ಸಿಪಿಐ(ಎಂ) ತನ್ನ ಸೌಹಾರ್ದವನ್ನು ಯಈ ಸಂದರ್ಭದಲ್ಲಿ ಪುನರುಚ್ಛರಿಸಿದೆ.

ಇದನ್ನೂ ಓದಿ: ಹುಬ್ಬಳ್ಳಿ | ಶವ ಹಸ್ತಾಂತರಕ್ಕೂ ಹಣ ಬೇಡಿಕೆ? ಹುಬ್ಬಳ್ಳಿ ಕಿಮ್ಸ್ ವಿರುದ್ಧ ಆರೋಪ

ಸರ್ಕಾರವು ತಕ್ಷಣವೇ ನಾಲ್ಕು ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಕಾರ್ಮಿಕರು ಕಷ್ಟಪಟ್ಟು ಪಡೆದ ಹಕ್ಕುಗಳನ್ನು ರಕ್ಷಿಸಬೇಕು.

ವಿಬಿ-ಗ್ರಾಮ್‍ ಜಿ ಕಾನೂನನ್ನು ರದ್ದುಪಡಿಸಬೇಕು ಮತ್ತು ವಿದ್ಯುತ್ ವಿತರಣೆ ಖಾಸಗೀಕರಣದ ಪ್ರಸ್ತಾವವನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಬೀಜ ಮಸೂದೆಯನ್ನು ಕೂಡ ವಾಪಸು ಪಡೆಯಬೇಕು.

ವಿವಿಧ ಮುಕ್ತ ವಾಣಿಜ್ಯ ಒಪ್ಪಂದ (ಎಫ್‍ಟಿಎ)ಗಳು, ವಿಶೇಷವಾಗಿ ಅಮೇರಿಕಾ ಮತ್ತು ಯುರೋಪ್ ದೇಶಗಳೊಂದಿಗೆ ಮಾಡಿಕೊಂಡಿರುವವುಗಳು ಭಾರತೀಯ ಕಾರ್ಮಿಕರು, ರೈತರು ಮತ್ತು ಸಾಮಾನ್ಯ ಜನರ ಹಿತಾಸಕ್ತಿಗೆ ಹಾನಿಕಾರಕವಾಗಿರುವುದರಿಂದ ಈ ವ್ಯಾಪಾರ ಒಪ್ಪಂದಗಳಿಂದಲೂ ಸರ್ಕಾರವು ಹಿಂದೆ ಸರಿಯಬೇಕು ಎಂದೂ ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.

ಇದನ್ನೂ ನೋಡಿ: ಅಖಿಲ ಭಾರತ ಮುಷ್ಕರ| ಪೊಲೀಸರ ದರ್ಪ – ಮಾನವೀಯತೆ ಕಳೆದುಕೊಂಡ ಸರಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *