ಬೆಂಗಳೂರು: ಸುಮಾರು ಮೂರೂವರೆ ವರ್ಷಗಳಿಂದ ಬಲವಂತದ ಹಾಗೂ ಅನ್ಯಾಯದ ಕೆಐಎಡಿಬಿ ಭೂ ಸ್ವಾಧೀನ ವಿರೋಧಿಸಿ ನಡೆಯುತ್ತಿದ್ದ ರೈತರ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರವು ಚನ್ನರಾಯಪಟ್ಟಣ ಹೋಬಳಿ ಭೂ ಸ್ವಾಧೀನವನ್ನು ಸಂಪೂರ್ಣ ರದ್ದುಪಡಿಸುವ ತೀರ್ಮಾನವನ್ನು ಮಾಡಿರುವುದನ್ನು ಸಿಪಿಐ(ಎಂ) ಸ್ವಾಗತಿಸುತ್ತದೆ ಎಂದು ಕಾರ್ಯದರ್ಶಿ ಡಾ.ಪ್ರಕಾಶ್ ಕೆ ಹೇಳಿದ್ದಾರೆ. ಛಲ
ದೀರ್ಘ ಕಾಲದ ಹೋರಾಟವನ್ನು ದೃಢವಾಗಿ ಮುನ್ನಡೆಸಿದ ಚೆನ್ನರಾಯಪಟ್ಟಣ ಹೋಬಳಿಯ ರೈತರನ್ನು ಹಾಗೂ ಇದಕ್ಕೆ ಬೆಂಬಲ ನೀಡಿ ಹೋರಾಟಕ್ಕೊಂದು ವ್ಯಾಪಕತೆಯನ್ನು ಮತ್ತು ವಿಸ್ತಾರವಾದ ಒತ್ತಡವನ್ನು ತಂದು ಕೊಟ್ಟ “ಸಂಯುಕ್ತ ಹೋರಾಟ ಕರ್ನಾಟಕ”ವನ್ನು ಸಿಪಿಐ(ಎಂ) ಅಭಿನಂದಿಸುತ್ತದೆ ಎಂದರು. ಛಲ
ಇದನ್ನೂ ಓದಿ: ದುಪ್ಪಟ್ಟು ದರ ವಸೂಲಿ: 233 ಆಟೋಗಳು ಸೀಜ್
ಇದೇ ಸಂದರ್ಭದಲ್ಲಿ ಈ ಹೋರಾಟಕ್ಕೆ ಆರಂಭದಿಂದಲೂ ಮಾರ್ಗದರ್ಶನ ನೀಡುತ್ತಾ ನಡುವೆ ಮೃತಪಟ್ಟ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷರಾಗಿದ್ದ ಜಿ. ಸಿ. ಬಯ್ಯಾರೆಡ್ಡಿಯವರನ್ನು ಸ್ಮರಿಸುತ್ತದೆ ಎಂದರು.
ರೈತರ ಐಕ್ಯತೆಯ ಈ ಯಶಸ್ವಿ ಹೋರಾಟವು ರಾಜ್ಯದಲ್ಲಿ ಮುಂದಿನ ಹೋರಾಟಗಳಿಗೆ ಹಲವು ಪಾಠಗಳನ್ನು ಒದಗಿಸಿದೆ ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ ಎಂದು ಹೇಳಿದರು.
ಇದನ್ನೂ ನೋಡಿ: ಅಖಿಲ ಭಾರತ ಮುಷ್ಕರಕ್ಕೆ ಎಡಪಕ್ಷಗಳ ಬೆಂಬಲ Janashakthi Media
