ಪಶ್ಚಿಮ ಬಂಗಾಳ : ಬಿರುಸಿನಿಂದ ಸಾಗಿದೆ ಚುನಾವಣಾ ಪ್ರಚಾರ

ಪಶ್ಚಿಮ ಬಂಗಾಳ : ರಾಜ್ಯದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯ ಅಂಗವಾಗಿ ಈಗಾಗಲೇ ಮೂರು ಹಂತದ ಮತದಾನ ಪ್ರಕ್ರಿಯೆಗಳು ನಡೆದಿದೆ. ಇನ್ನು ಐದು ಹಂತದ ಮತದಾನ ನಡೆಯುವುದಿದೆ.

ಬಂಗಾಳದಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್‌ ಮತ್ತು ವಲಸಿಗರ ಕೂಟದಂತಾಗಿರುವ ಬಿಜೆಪಿ ಪಕ್ಷಗಳು ನಡೆಸುತ್ತಿರುವ ಅಕ್ರಮ ಮತ್ತು ಅನೀತಿ ರಾಜಕಾರಣವನ್ನು ಬಯಲುಗೊಳಿಸುತ್ತಲೇ ಈ ಎರಡೂ ಪಕ್ಷಗಳ ಆಕ್ರಮಣ ಪ್ರವೃತ್ತಿಯನ್ನು ಪ್ರತಿರೋಧದಿಂದ ಚುನಾವಣಾ ಕಣದಲ್ಲಿ ಸಂಜೋತಾ ಮೋರ್ಚಾ (ಸಂಯುಕ್ತ ರಂಗ) ಕೂಟದ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಬಿರುಸಿನಿಂದಲೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಸಿಪಿಐ(ಎಂ), ಕಾಂಗ್ರೆಸ್‌, ಸಿಪಿಐ ಒಳಗೊಂಡ ಆರು ಪಕ್ಷಗಳ ಮೈತ್ರಿ ಕೂಟದ ಸಿಪಿಐ(ಎಂ) ಅಭ್ಯರ್ಥಿಗಳ ಪ್ರಚಾರದ ಕೆಲವು ಚಿತ್ರಪಟಗಳು ಹೀಗಿವೆ…..

ಟಿಎಂಸಿ-ಬಿಜೆಪಿ ಪಕ್ಷಗಳನ್ನು ಸೋಲಿಸಿ, ರಾಜ್ಯದಲ್ಲಿ ಜನಪರವಾದ ಪರ್ಯಾಯ ಜಾತ್ಯತೀತ ರಂಗ ಪಶ್ಚಿಮ ಬಂಗಾಳದಲ್ಲಿ ಸ್ಥಾಪನೆಯಾಗಲಿ ಎಂದು ಮಾಲ್ಡಾ ಜಿಲ್ಲೆಯಲ್ಲಿ ಸಂಯುಕ್ತ ಮೋರ್ಚಾದಿಂದ ಅಭ್ಯರ್ಥಿ ಬೃಹತ್‌ ರ‍್ಯಾಲಿಯನ್ನು ನಡೆಸಿದರು.

ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಸೂರ್ಯಕಾಂತ ಮಿಶ್ರಾ ಅವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾದರು. ಉತ್ತರ ದಿನಾಜ್‌ ಪುರದ ಹೆಮ್ತಾಬಾದ್‌ ನಲ್ಲಿ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ ಭೂಪೇಂದ್ರನಾಥ್‌ ಬರ್ಮಾನ್‌ ಪರವಾಗಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದರು.

ಹರಿಂಘಟ್ಟ ವಿಧಾನಸಭಾ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ ಅಲಖೇಶ್‌ ದಾಸ್‌ ಅವರು ಕ್ಷೇತ್ರದ ಸಣ್ಣ ಪಟ್ಟಣವಾದ ಹರಿಂಘಟ್ಟದ ನಾಯ್ಡಾ ಮತ್ತು ಕಸ್ತದಾಂಗ ದಿಂದ ನಿಮ್ಥಾಲದವರೆಗೂ ಪಾದಯಾತ್ರ ನಡೆಸುವ ಮೂಲಕ ಚುನಾವಣಾ ಪ್ರಚಾರವನ್ನು ನಡೆಸಿದರು.

ಸತ್ಘಾಂಚಿ ವ್ಯಾಪ್ತಿಯ ಮಾಂಟ್ಗೊಮರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅನುಪಮ್‌ ಘೋಷ್‌ ಪರವಾಗಿ ಸಿಪಿಐ(ಎಂ) ಪಕ್ಷದ ಯುವ ನಾಯಕಿ ಮೀನಾಕ್ಷಿ ಮುಖರ್ಜಿ ಅವರು ಚುನಾವಣಾ ರ‍್ಯಾಲಿ ಹಾಗೂ ಬಹಿರಂಗ ಪ್ರಚಾರದಲ್ಲಿ ತಮ್ಮ ಭಾಷಣವನ್ನು ಮಾಡಿದರು.

ಪಶ್ಚಿಮ ಬಂಗಾಳದ ಜಮೂರಿಯಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಣದಲ್ಲಿರುವ ಯುವ ವಿದ್ಯಾರ್ಥಿ ನಾಯಕಿ ಅಯೀಷೆ ಘೋಷ್‌ ಅವರು ಅಸನ್‌ ಸೋಲ್‌ ಉಪನಗರ ಪ್ರದೇಶದ ಚುರುಲಿಯಾದಲ್ಲಿ ಮನೆಮನೆಗೂ ತೆರಳಿ ಮತಯಾಚನೆ ಮಾಡಿದರು.

Donate Janashakthi Media

Leave a Reply

Your email address will not be published. Required fields are marked *