ಕೇರಳ: ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಡರಂಗ ಮೈತ್ರಿಕೂಟವೂ ಮತ್ತೆ ಅಧಿಕಾರದ ಚುಕ್ಕಾಣಿಯನ್ನು ಹಿಡಿದೆ.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕೆ.ಕೆ.ಶೈಲಜಾ ಅವರು ಮಟ್ಟನ್ನೂರು ವಿಧಾನಸಭಾ ಕ್ಷೇತ್ರದಲ್ಲಿ 60,963 ಮತ ಅಂತರದಲ್ಲಿ ಜಯಗಳಿಸಿದ್ದಾರೆ.
ಇದನ್ನು ಓದಿ: ಚುನಾವಣಾ ಫಲಿತಾಂಶ : ಹೊಸ ಇತಿಹಾಸದತ್ತ ಎಲ್.ಡಿ.ಎಫ್ – ಭಾರೀ ಮುನ್ನಡೆ ಕಾಯ್ದುಕೊಂಡ ಎಡರಂಗ
ಮಟ್ಟನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವನ್ನು ಸಾಧಿಸಿರುವ ಕೆ.ಕೆ.ಶೈಲಜಾ ಅವರು ಎಡರಂಗದ ಪಿಣರಾಯಿ ವಿಜಯನ್ ಅವರ ಸರಕಾರದ ಅವಧಿಯಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಮತದಾನೋತ್ತರ ಚುನಾವಣಾ ಸಮೀಕ್ಷಗಳ ಪ್ರಕಾರ ಕೇರಳದಲ್ಲಿ ಎಡರಂಗ ಮತ್ತೆ ಇತಿಹಾಸ ಸೃಷ್ಠಿಸಲಿದೆ ಎಂದು ದೃಢಪಟ್ಟಿದ್ದವು. ಕೇರಳದಲ್ಲಿ ಅಧಿಕಾರ ನಡೆಸಿದ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರದ ಜನಪರ ಕಾರ್ಯಕ್ರಮಗಳು ಮತ್ತು ಕೋವಿಡ್ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತಗೊಂಡ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆಯಿಂದಾಗಿ ಕೇರಳದಲ್ಲಿ ಎಡರಂಗ ಸತತ ಎರಡನೇ ಬಾರಿ ಅಧಿಕಾರ ಹಿಡಿಯಲಿದೆ ಎಂದು ರಾಜ್ಯದ ಜನತೆಯಲ್ಲಿ ವಿಶ್ವಾಸ ವ್ಯಕ್ತಗೊಂಡಿದ್ದು ಈಗ ನಿಜವಾಗಿದೆ.