ಬಿಜೆಪಿಯನ್ನು ಸೋಲಿಸಲು ಎಡಪಕ್ಷಗಳು ಮತ್ತು ಜಾತ್ಯಾತೀತ ಶಕ್ತಿಗಳು ಒಗ್ಗೂಡಿ ಕೆಲಸ ಮಾಡಬೇಕು

ಕಣ್ಣೂರು : ‘ಬಿಜೆಪಿ ಮತ್ತು ಕೋಮುವಾದ ‘ವನ್ನು ಸೋಲಿಸಲು ಎಡಪಕ್ಷಗಳು ಮತ್ತು ಜಾತ್ಯಾತೀತ ಶಕ್ತಿಗಳು ಒಗ್ಗೂಡಿ ಕೆಲಸ ಮಾಡಬೇಕು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಕರೆ ನೀಡಿದರು.

ಕೇರಳದ ಕಣ್ಣೂರು ನಗರದಲ್ಲಿ ಸಿಪಿಐಎಂ ನ 23ನೇ ಮಹಾಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡುತ್ತಾ, ಅವರು ಭಾರತೀಯ ಗಣರಾಜ್ಯದ ಜಾತ್ಯತೀತ, ಪ್ರಜಾಸತ್ತಾತ್ಮಕ ಗುಣಲಕ್ಷಣಗಳ ಸುರಕ್ಷತೆಗಾಗಿ ಬಿಜೆಪಿಯನ್ನು ಪ್ರತ್ಯೇಕಗೊಳಿಸುವಂತೆ ಎಲ್ಲ ಪ್ರಜಾಸತ್ತಾತ್ಮಕ ಪಕ್ಷಗಳನ್ನು ಕೋರಿಕೊಂಡರು ಸದೃಢ ಜಾತ್ಯತೀತತೆಯ ಪ್ರತಿಪಾದನೆಯಿಂದ ಮಾತ್ರ ಹಿಂದುತ್ವ ಕೋಮುವಾದವನ್ನು ಎದುರಿಸಬಹುದು ಆಗ ಭಾರತವನ್ನು ರಕ್ಷಿಸಲು ಸಾಧ್ಯ ಎಂದರು.

ಬಹಿರಂಗ ಸಭೆಗೂ ಮುನ್ನ ಸಿಪಿಐಎಂ ಹಿರಿಯ ನಾಯಕ, ಪೊಲಿಟ್ ಬ್ಯೂರೋ ಸದಸ್ಯ ಎಸ್. ರಾಮಚಂದ್ರನ್ ಪಿಳ್ಳೈ  ಮಹಾಧಿವೇಶನದ ಧ್ವಜಾರೋಹಣ ನೆರವೇರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವು ಉದ್ಘಾಟನಾ ಸಮಾರಂಭಕ್ಕೆ ಮೆರಗು ನೀಡಿತು.

ವೇದಿಕೆಯ ಮೇಲೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರಕಾಶ್ ಕಾರಟ್, ಮಾಣಿಕ್ ಸರಕಾರ, ಬೃಂದಾ ಕಾರಟ್, ಎಂಡಿ ಸಲೀಂ, ರಾಘವಲು, ಸುಭಾಷಿಣಿ ಅಲಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಸೇರಿದಂತೆ ಅನೇಕರಿದ್ದರು.

Donate Janashakthi Media

Leave a Reply

Your email address will not be published. Required fields are marked *