ಏಕರೂಪ ನಾಗರಿಕ ಸಂಹಿತೆ ವಿರುದ್ಧ ಸಿಪಿಐಎಂ ರಾಷ್ಟ್ರೀಯ ವಿಚಾರ ಸಂಕಿರಣ

ಏಕರೂಪ ನಾಗರಿಕ ಸಂಹಿತೆಯ ನೆಪದಲ್ಲಿ ದೇಶದಾದ್ಯಂತ ಧಾರ್ಮಿಕ ಪ್ರತ್ಯೇಕತೆಯನ್ನು ಸೃಷ್ಟಿಸುವುದೆ ಬಿಜೆಪಿ ಸರ್ಕಾರದ ಅಜೆಂಡಾ ಎಂದು ಸಿಪಿಐಎಂ ಆಕ್ರೋಶ

ಕೇರಳ: ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸವಾದಿ (ಸಿಪಿಐಎಂ) ಹಮ್ಮಿಕೊಂಡಿರುವ ರಾಷ್ಟ್ರೀಯ ವಿಚಾರ ಸಂಕಿರಣ ಶನಿವಾರ ರಾಜ್ಯದ ಕೋಯಿಕ್ಕೋಡ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ಬುಡಕಟ್ಟು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ನಿರಾಕರಿಸುವ ಧಾರ್ಮಿಕ ಸಂಹಿತೆಯನ್ನು ಜಾರಿಗೊಳಿಸದಂತೆ ಈ ವಿಚಾರ ಸಂಕಿರಣ ಒತ್ತಾಯಿಸಲಿದೆ.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸಂಜೆ 4 ಗಂಟೆಗೆ ಕೋಯಿಕ್ಕೋಡ್‌ನ ಸ್ವಪ್ನ ನಗರಿಯ ಟ್ರೇಡ್ ಸೆಂಟರ್‌ನಲ್ಲಿ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. “ಏಕರೂಪ ನಾಗರಿಕ ಸಂಹಿತೆಯ ನೆಪದಲ್ಲಿ ದೇಶದಾದ್ಯಂತ ಧಾರ್ಮಿಕ ಪ್ರತ್ಯೇಕತೆಯನ್ನು ಸೃಷ್ಟಿಸುವುದೆ ಬಿಜೆಪಿ ಸರ್ಕಾರದ ಅಜೆಂಡಾ” ಎಂದು ಸಿಪಿಐಎಂ ಆಕ್ರೋಶ ವ್ಯಕ್ತಪಡಿಸಿದೆ. ಒಕ್ಕೂಟ ಸರ್ಕಾರದ ಫ್ಯಾಸಿಸ್ಟ್ ಕ್ರಮದ ವಿರುದ್ಧ ನಡೆಸುತ್ತಿರುವ ಸಂಕಿರಣದಲ್ಲಿ ಹಲವಾರು ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆಗಳು ಭಾಗವಹಿಸಲಿವೆ ಎಂದು ಪಕ್ಷವೂ ಹೇಳಿದೆ.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ- ದ್ವಿಪತ್ನಿತ್ವದ ಸವಾಲುಗಳು

ಸಿಪಿಐ(ಎಂ) ಆರಂಭಿಸಿರುವ ವಿಚಾರ ಸಂಕಿರಣದಲ್ಲಿ ವಿವಿಧ ಸಾಮಾಜಿಕ-ಸಾಂಸ್ಕೃತಿಕ ಮತ್ತು ರಾಜಕೀಯ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮುಖ್ಯವಾಗಿ ಸಿಪಿಐಎಂ ಕೇರಳ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, ಸಿಪಿಐ ಮುಖಂಡ, ಶಾಸಕ ಇ.ಕೆ. ವಿಜಯನ್, ಕೇರಳ ಕಾಂಗ್ರೆಸ್ ಸಂಸದ ಜೋಸ್ ಕೆ. ಮಣಿ, ಮಾಜಿ ರಾಜ್ಯಸಭಾ ಸದಸ್ಯ ಎಂ.ವಿ. ಶ್ರೇಯಾಮ್ಸ್‌ಕುಮಾರ್, ಪ್ರೊ.ಎ.ಪಿ. ಅಬ್ದುಲ್ ವಹಾಬ್, ಸಂಸದ ಎಳಮರಮ್ ಕರೀಂ, ಕೇರಳ ಸಚಿವರಾದ ಪಿ.ಎ. ಮುಹಮ್ಮದ್ ರಿಯಾಜ್, ಎ.ಕೆ. ಸಸೀಂದ್ರನ್, ಅಹಮದ್ ದೇವರಕೋವಿಲ್, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪಿ. ಸಾತೆದೇವಿ, ಮೇಯರ್ ಬೀನಾ ಫಿಲಿಪ್ ಮತ್ತಿತರರು ಭಾಗವಹಿಸಲಿದ್ದಾರೆ.

ಆದಿವಾಸಿ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ, ಶಾಸಕ ಒ.ಆರ್. ಕೇಲು, ಕೆಪಿಎಂಎಸ್ ಪ್ರಧಾನ ಕಾರ್ಯದರ್ಶಿ ಪುನ್ನಾಲ ಶ್ರೀಕುಮಾರ್, ಕೇರಳ ದಲಿತ ಫೆಡರೇಶನ್ ರಾಜ್ಯಾಧ್ಯಕ್ಷ ಪಿ. ರಾಮಭದ್ರನ್ ಸೇರಿದಂತೆ ಹಲವಾರು ನಾಯಕರು ಈ ಸಂಕಿರಣದ ಭಾಗವಾಗಲಿದ್ದಾರೆ.

ಇಷ್ಟೆ ಅಲ್ಲದೆ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಧಾರ್ಮಿಕ ಮುಖಂಡರು ಕೂಡಾ ಭಾಗವಹಿಸುತ್ತಿದ್ದಾರೆ. ತಾಮರಸೇರಿ ಧರ್ಮಪ್ರಾಂತ್ಯದ ಬಿಷಪ್ ಮಾರ್ ರೆಮಿಜಿಯೋಸ್ ಇಂಚನಾನಿ, ರೆ.ಡಾ.ಟಿ.ಐ.ಜೇಮ್ಸ್ (ಸಿಎಸ್ ಐ), ರಾಜ್ಯ ಹಜ್ ಸಮಿತಿ ಅಧ್ಯಕ್ಷ ಸಿ. ಮೊಹಮ್ಮದ್ ಫೈಝಿ, ಕೇರಳ ಮುಸ್ಲಿಂ ಜಮಾತ್ ರಾಜ್ಯ ಕಾರ್ಯದರ್ಶಿ ಎನ್. ಅಲಿ ಅಬ್ದುಲ್ಲಾ, ಸಮಸ್ತ ಕೇರಳ ಜಮೀಯತುಲ್ ಉಲೇಮಾ (ಇಕೆ ವಿಭಾಗ) ಕಾರ್ಯದರ್ಶಿ ಮುಕ್ಕಂ ಉಮರ್ ಫೈಝಿ, ಸಮಸ್ತ ಕೇಂದ್ರ ಮುಶಾವರ ಸದಸ್ಯ ಪಿ.ಎಂ.ಅಬ್ದುಲ್ ಸಲಾಂ ಬಾಖವಿ, ಕೇರಳ ನದ್ವತುಲ್ ಹಾಗೂ ಮುಜಾಹಿದೀನ್ ಅಧ್ಯಕ್ಷ ಟಿ.ಪಿ.ಅಬ್ದುಲ್ಲಕೋಯ ಮದನಿ, ಮರ್ಕಸ್ ದುವಾ ಪ್ರಧಾನ ಕಾರ್ಯದರ್ಶಿ ಸಿ.ಪಿ. ಉಮ್ಮರ್ ಸುಲ್ಲಾಮಿ, ಎಂಇಎಸ್ ಅಧ್ಯಕ್ಷ ಡಾ.ಪಿ.ಎ.ಫಝಲ್ ಗಫೂರ್, ಟಿ.ಕೆ.ಅಶ್ರಫ್ (ವಿಸ್ಡಮ್ ಗ್ರೂಪ್), ಡಾ.ಹುಸೇನ್ ಮಡವೂರು, ಡಾ.ಐ.ಪಿ. ಅಬ್ದುಲ್ ಸಲಾಮ್ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ- ಸಾಮಾಜಿಕ ಸಾಂಸ್ಕೃತಿಕ ವಾಸ್ತವಗಳು

Donate Janashakthi Media

Leave a Reply

Your email address will not be published. Required fields are marked *