ಲಸಿಕೆ ಪ್ರಮಾಣಪತ್ರದಲ್ಲಿ ವಿವರಗಳು ತಪ್ಪಾಗಿದ್ದಲ್ಲಿ ತಿದ್ದಿಕೊಳ್ಳಲು ಅವಕಾಶ

ನವದೆಹಲಿ: ಫಲಾನುಭವಿಗಳು ಕೋವಿಡ್‌ ಲಸಿಕೆ ಹಾಕಿಸಿಕೊಂಡ ನಂತರ ನಿಮ್ಮ ಪ್ರಮಾಣಪತ್ರದಲ್ಲಿ ಏನಾದರೂ ವೈಯಕ್ತಿಕ ವಿವರಗಳು ತಪ್ಪಾಗಿದ್ದಲ್ಲಿ ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಕೇಂದ್ರ ಸರ್ಕಾರವು ಅವಕಾಶ ನೀಡಿದೆ.

ಲಸಿಕೆ ಪ್ರಮಾಣಪತ್ರದಲ್ಲಿ ಹೆಸರು, ಜನ್ಮದಿನಾಂಕ, ಲಿಂಗ ಸೇರಿದಂತೆ ಇತರ ಯಾವುದೇ ವಿವರಗಳು ತಪ್ಪಾಗಿ ನಮೂದಾಗಿದ್ದರೆ ಅವುಗಳನ್ನು ‘ಕೋವಿನ್‌’ ವೆಬ್‌ಸೈಟ್‌ ನಲ್ಲಿ ತಿದ್ದುಪಡಿ ಮಾಡುವ ಮೂಲಕ ಸರಿಪಡಿಸಬಹುದು ಎಂದು ಆರೋಗ್ಯ ಸೇತು ಆ್ಯಪ್‌ನ ಟ್ವಿಟರ್‌ ಖಾತೆಯಲ್ಲಿ ತಿಳಿಸಲಾಗಿದೆ.

‘ಕೋವಿನ್‌ ಲಸಿಕೆ ಪ್ರಮಾಣಪತ್ರ’ವನ್ನು ಪ್ರಯಾಣದ ಸಂದರ್ಭದಲ್ಲಿ ಹಾಗೂ ಇತರ ಕೆಲವು ನಿರ್ದಿಷ್ಟ ಸೇವೆಗಳನ್ನು ಪಡೆಯುವಾಗ ಹಾಜರುಪಡಿಸಬೇಕಾಗುತ್ತದೆ. ‘ಕೋವಿನ್‌’ ಪೋರ್ಟಲ್‌ನಲ್ಲಿ ನೋಂದಣಿ ಸಮಯದಲ್ಲಿ ನೀಡಿರುವ ಮೊಬೈಲ್‌ ಸಂಖ್ಯೆಯನ್ನು ಬಳಸಿ ಲಸಿಕೆಯ ಎಷ್ಟನೇ ಡೋಸ್‌ ಪಡೆಯಲಾಗಿದೆ ಎಂಬ ವಿವರವನ್ನು ಸಹ ಅಪ್‌ಡೇಟ್‌ ಮಾಡಬಹುದು ಎಂದೂ ತಿಳಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *