ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ 2ನೇ ಅಲೆ ಜೋರಾಗಿ ಸದ್ದು ಮಾಡುತ್ತಿದೆ. ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದಿಂದ ಜೂನ್.7 ರವರೆಗೆ ಲಾಕ್ ಡೌನ್ ಕೂಡ ಘೋಷಣೆ ಮಾಡಲಾಗಿದೆ. ಇದರ ಮಧ್ಯೆ ಹೆಳ್ಳಿಗಳಲ್ಲಿಯೂ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳದಿಂದಾಗಿ, ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯೋದಕ್ಕೂ ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಕೊರೋನಾ ಸೋಂಕಿತರ ಸಂಖ್ಯೆಯ ಮಾಹಿತಿಯನ್ನು ಲಭ್ಯವಾಗುವಂತೆ ಮಾಡಿದೆ.
ಇದನ್ನೂ ಓದಿ : ಆಕ್ಸಿಜನ್ ಸೇವಾ ಕೇಂದ್ರ ಆರಂಭಿಸಿದ ಸಿಐಟಿಯು
ನಿಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಯಾವ ಹಳ್ಳಿಯಲ್ಲಿ ಎಷ್ಟು ಕೊರೋನಾ ಸೋಂಕಿತರಿದ್ದಾರೆ ಎನ್ನುವ 24 ಗಂಟೆ ಹಿಂದಿನ ಅಂಕಿ-ಅಂಶಗಳ ಮಾಹಿತಿ ನಿಮಗೆ ಲಭ್ಯವಾಗಲಿದೆ. ಈ ಮೂಲಕ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎಷ್ಟು ಇದೆ ಎಂಬುದು ತಿಳಿಯಲಿದೆ. ಆ ಲಿಂಕ್ ಬಳಸೋದು ಹೇಗೆ ಈ ಕೆಳಗಿನ ಅಂಶಗಳನ್ನು ಓದಿ.
ಮೊದಲು ಈ ಲಿಂಕ್ : https://www.covidwar.karnataka.gov.in/Service45/
ಇದಾದ ಬಳಿಕ ನಿಮ್ಮ ಜಿಲ್ಲೆ ಯಾವುದು ಎನ್ನುವ ಮಾಹಿತಿಯನ್ನು ಆಯ್ಕೆ ಮಾಡಿ..
ಹೀಗೆ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಂಡ ಬಳಿಕ, ನಿಮ್ಮ ತಾಲೂಕು ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
ತಾಲೂಕಿನ ನಂತ್ರ, ನಿಮ್ಮ ತಾಲೂಕು ವ್ಯಾಪ್ತಿಯಲ್ಲಿ ಬರುವಂತ ಗ್ರಾಮ ಪಂಚಾಯ್ತಿಗಳ ಪಟ್ಟಿ ತೋರಿಸುತ್ತದೆ. ಅದರಲ್ಲಿ ನಿಮ್ಮ ಊರಿನ ಗ್ರಾಮ ಪಂಚಾಯ್ತಿ ಆಯ್ಕೆ ಮಾಡಿಕೊಳ್ಳಿ
ನೀವು ನಿಮ್ಮ ಗ್ರಾಮ ಪಂಚಾಯ್ತಿ ಆಯ್ಕೆ ಮಾಡಿಕೊಂಡ್ರೇ.. ನಿಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎಷ್ಟು ಊರುಗಳು ಬರುತ್ತವೋ ಅವುಗಳನ್ನು ತೋರಿಸುತ್ತದೆ.
ಹೀಗೆ ತೋರಿಸುವಂತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಟ್ಟಿಯಲ್ಲಿ ನಿಮ್ಮ ಊರು ಸಹ ಇರುತ್ತದೆ. ಅಲ್ಲಿ ಕಳೆದ 24 ಗಂಟೆಯಲ್ಲಿ ಎಷ್ಟು ಕೊರೋನಾ ಕೇಸ್ ಇದ್ದಾವೆ ಎನ್ನುವ ಅಂಕಿ-ಅಂಶವನ್ನು ನೋಡಬಹುದಾಗಿದೆ.
ಈ ವಿಧಾನ ಅನುಸರಿಸಿ, ನಿಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಕಳೆದ 24 ಗಂಟೆಯಲ್ಲಿ ಎಷ್ಟು ಕೊರೋನಾ ಸೋಂಕಿತರು ಇದ್ದಾರೆ ಎಂಬುದಾಗಿ ಅಂಕಿ-ಅಂಶಗಳ ಮಾಹಿತಿಯನ್ನು ನೋಡಬಹುದಾಗಿದೆ.