ಕೋವಿಡ್‌ ಲಸಿಕೆ: ಸೇವಾ ಶುಲ್ಕ ಪರಿಷ್ಕರಿಸಿದ ಸರಕಾರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣದ ಹಿನ್ನೆಲೆಯಲ್ಲಿ ವಿವಿಧ ವಯೋಮಾನದ ಜನರಿಗೆ ಕೋವಿಡ್‌ ಲಸಿಕೆಯನ್ನು ನೀಡುವ ನಿಟ್ಟಿನಲ್ಲಿ ಸರಕಾರ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ.

ಕೋವಿಡ್‌ ಲಸಿಕೆಯನ್ನು ನೀಡಲು ಈ ಹಿಂದೆ ಸರಕಾರದ ಮುಂದೆ ಸೇವಾ ಶುಲ್ಕದ ಬಗ್ಗೆ ಪ್ರಸ್ತಾಪಿಸಿದ ಖಾಸಗಿ ಆಸ್ಪತ್ರೆಗಳು `300/- ಕ್ಕೆ ಬೇಡಿಕೆ ಇಟ್ಟಿತ್ತು. ಈ ಬಗ್ಗೆ ಪರಿಶೀಲಿಸಿದ ಸರಕಾರ ಪ್ರತಿ ಡೋಸ್‌ಗೆ ಸೇವಾ ಶುಲ್ಕವನ್ನು `200/- ಕ್ಕೆ ನಿಗದಿಪಡಿಸಿದೆ.

ಇದನ್ನು ಓದಿ: ಕೋವಿಡ್–19 ಎರಡನೆಯ ಅಲೆ – ಹಲವು ಪ್ರಶ್ನೆಗಳು

ಈ ಹಿಂದಿನ ಮೇ 3, 2021ರ ಸುತ್ತೋಲೆ ಪ್ರಕಾರ ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್‌ ಹೋಂಗಳಿಗೆ ಪ್ರತಿ ಡೋಸ್‌ ಲಸಿಕೆ ವಿತರಣೆಗೆ ಸೇವಾ ಶುಲ್ಕವನ್ನು `100/- ನಿಗದಿಪಡಿಸಿತ್ತು.

ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ಬಗ್ಗೆ ಸೇವಾ ಶುಲ್ಕವನ್ನು  ಒಂದೊಂದು ದರಗಳು ನಿಗದಿಪಡಿಸಿರುವ ಬಗ್ಗೆ ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ಕಾರ್ಯದರ್ಶಿ-2 ರವರು ಮತ್ತೊಂದು ಸುತ್ತೋಲೆಯನ್ನು ಹೊರಡಿಸಿ ಪರಿಷ್ಕೃತ ದರದ ಬಗ್ಗ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಕೋವಿಡ್-19 ಎರಡನೆಯ ಅಲೆ – ಹಲವು ಪ್ರಶ್ನೆಗಳು: ಭಾಗ 2

ಸರಕಾರ ನಿಗದಿಪಡಿಸಿದ `200/- ಸೇವಾ ಶುಲ್ಕಕ್ಕಿಂತ ಹೆಚ್ಚಿನ ಮೊತ್ತ ಪಡೆದರೆ ಅವರ ವಿರುದ್ಧ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ನಿಯಮಾನುಸಾರ ಕ್ರಮಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *