ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿಂದು 10 ಸಾವಿರಕ್ಕೂ ಹೆಚ್ಚು ಕೇಸ್ ವರದಿ ಆಗಿದೆ. ಬೆಂಗಳೂರಲ್ಲಿ ಹೊಸ ಕೇಸ್‍ಗಳ ಸಂಖ್ಯೆ 9,020ಕ್ಕೆ ಏರಿರುವುದು ಆತಂಕವನ್ನು ಸೃಷ್ಟಿಸಿದೆ. ಸರಕಾರದ ನಿರ್ಲಕ್ಷ್ಯವೇ ಸಂಖ್ಯೆ ಹೆಚ್ಚಳಕ್ಕೆ ಕಾರಣ ಅಂತಾ ಜನ ಆರೋಪ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಪಾಸಿಟಿವಿ ರೇಟ್ 6.33 ಇದೆ. ಇಂದು ರಾಜ್ಯದಲ್ಲಿ 901 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಹೆಲ್ತ್ ಬುಲೆಟಿನ್ ಪ್ರಕಾರ, ಬಾಗಲಕೋಟೆ 10, ಬಳ್ಳಾರಿ 107, ಬೆಳಗಾವಿ 105, ಬೆಂಗಳೂರು ಗ್ರಾಮಾಂತರ 98, ಬೆಂಗಳೂರು ನಗರ 9020, ಬೀದರ್ 20, ಚಾಮರಾಜನಗರ 26, ಚಿಕ್ಕಬಳ್ಳಾಪುರ 44, ಚಿಕ್ಕಮಗಳೂರು 78, ಚಿತ್ರದುರ್ಗ 24, ದಕ್ಷಿಣ ಕನ್ನಡ 298, ದಾವಣಗೆರೆ 30, ಧಾರವಾಡ 147, ಗದಗ 7, ಹಾಸನ 182, ಹಾವೇರಿ 8, ಕಲಬುರಗಿ 98, ಕೊಡಗು 29, ಕೋಲಾರ 83, ಕೊಪ್ಪಳ 19, ಮಂಡ್ಯ 261, ಮೈಸೂರು 398, ರಾಯಚೂರು 7, ರಾಮನಗರ 20, ಶಿವಮೊಗ್ಗ 198, ತುಮಕೂರು 190, ಉಡುಪಿ 340, ಉತ್ತರ ಕನ್ನಡ 94, ವಿಜಯಪುರ 49 ಹಾಗೂ ಯಾದಗಿರಿಯಲ್ಲಿ 10 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ರಾಜ್ಯದಲ್ಲಿ ಒಮಿಕ್ರಾನ್ ಕೇಸ್‍ಗಳ ಸಂಖ್ಯೆ 441ಕ್ಕೆ ಹೆಚ್ಚಿದೆ. ನಿನ್ನೆ ಒಂದೇ ದಿನ 108 ಆಫ್ರಿಕಾ ವೈರಸ್ ಕೇಸ್ ಬೆಳಕಿಗೆ ಬಂದಿವೆ. ಸದ್ಯ ದೇಶದಲ್ಲಿ 3600ಕ್ಕೂ ಹೆಚ್ಚು
ಪರೀಕ್ಷೆ ಹೆಚ್ಚಳ : ಕೋವಿಡ್ ಪರೀಕ್ಷೆ ಹೆಚ್ಚಳದಿಂದಾಗಿ ಸೋಂಕಿನ ಪ್ರಕರಣದಲ್ಲಿ ಹೆಚ್ಚಳವಾಗಿದೆ. ನಿಜಕ್ಕೂ ಸರಕಾರ ಆರಂಭದಲ್ಲಿ ನಿರ್ಲಕ್ಷ್ಯ ಮಾಡಿ ಈಗ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ಇದನ್ನೆಲ್ಲ ಗಮನಿಸಿದರೆ ಸರಕಾರ ಲಾಕ್ ಡೌನ್ ಗೆ ಸಿದ್ಧತೆ ಮಾಡಿಕೊಂಡಂತೆ ಕಾಣುತ್ತಿದೆ. ಸರಕಾರದ ನಿರ್ಲಕ್ಷ್ಯವೇ ಸೋಂಕು ಹೆಚ್ಚಳಕ್ಕೆ ಕಾರಣ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.