ನವದೆಹಲಿ ಜ 31 : ದೇಶದ ಅತ್ಯುನ್ನತ ಹಾಗೂ ಮಹತ್ವದ ಕ್ರಿಕೆಟ್ ಪಂದ್ಯಾವಳಿಯಾದ “ರಣಜಿ ಟ್ರೋಫಿ’ಯನ್ನು ಇದೇ ಮೊದಲ ಬಾರಿಗೆ ರದ್ದುಗೊಳಿಸಲು ಬಿಸಿಸಿಐ ನಿರ್ಧರಿಸಿದೆ. ಕೋವೀಡ್ ಕಾರಣದಿಂದಾಗಿ ರಣಜಿ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ.
ಹಲವು ರಾಜ್ಯ ಕ್ರಿಕೆಟ್ ಮಂಡಳಿಗಳ ನಿರ್ಧಾರದಂತೆ 2020-21ನೇ ಸಾಲಿನ ರಣಜಿ ಪಂದ್ಯಾವಳಿಯನ್ನು ಕೈಬಿಡಲಾಗುತ್ತಿದೆ ಎಂದು ತಿಳಿಸಿರುವ ಬಿಸಿಸಿಐ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿ, ಅಂಡರ್-19 ವಯೋಮಿತಿಯ ವಿನೂ ಮಂಕಡ್ ಟ್ರೋಫಿ ಹಾಗೂ ವನಿತೆಯರ ರಾಷ್ಟ್ರೀಯ ಏಕದಿನ ಪಂದ್ಯಾವಳಿ ಎಂದಿನಂತೆ ನಡೆ ಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
1934 ರಲ್ಲಿ ರಣಜಿ ಪಂದ್ಯಾವಳಿಯನ್ನು ಆರಂಭಿಸಲಾಯಿತು. 87 ವರ್ಷಗಳ ಇತಿಹಾಸವಿರುವ ಈ ಪಂದ್ಯಗಳನ್ನು ನಿಲ್ಲಿಸಿದ್ದು ಕ್ರಿಕೇಟ್ ಅಭಿಮಾನಿಗಳಿಗೆ ಹಾಗೂ ಭರವಸೆಯ ಆಟಗಾರರಿಗೆ ನಿರಾಶೆ ಮೂಡಿಸಿದೆ. ರಣಜಿ ಮತ್ತು ವಿಜಯ್ ಹಜಾರೆ ಕ್ರಿಕೆಟ್‌ಗಳಲ್ಲಿ ಯಾವುದನ್ನು ಆಡಿಸಬೇಕು ಎಂಬ ಆಯ್ಕೆಯನ್ನು ಬಿಸಿಸಿಐ ರಾಜ್ಯ ಕ್ರಿಕೆಟ್ ಮಂಡಳಿಗಳ ಮುಂದಿಟ್ಟಿತ್ತು. ಇದಕ್ಕೆ ವಿಜಯ್ ಹಜಾರೆ ಟ್ರೋಫಿ ಪರ ಹೆಚ್ಚಿನ ಒಲವು ತೋರಲಾಯಿತು. ಇದರಂತೆಯೇ 2020-21ರ ಋತುವಿನ ರಣಜಿ ಪಂದ್ಯಾವಳಿಯನ್ನು ಕೈಬಿಡಲು ನಿರ್ಧರಿಸಲಾಯಿತು ಎಂದು ಬಿಸಿಸಿಐ ತಿಳಿಸಿದೆ.
ಇದನ್ನೂ ಓದಿ :ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಗೆ ಜಯ್ ಶಾ ಅಧ್ಯಕ್ಷ
ರಣಜಿ ಟ್ರೋಫಿ ಎರಡು ತಿಂಗಳ ಕಾಲ ನಡೆಯುವುದರಿಂದ ರದ್ದು ಮಾಡಿದ್ದಾಗ ಮತ್ತೊಂದು ಕಾರಣವನ್ನು ಬಿಸಿಸಿಐ ನೀಡಿದೆ. ಎರಡು ತಿಂಗಳುಕಾಲ ಐಪಿಎಲ್ ಆಡಿಸಲಾಗಿತ್ತು, ರಣಜಿ ಟ್ರೋಫಿ ಆಡಿಸಿದ್ದರೆ ಏನು ಆಗುತ್ತಿರಲಿಲ್ಲ. ಭಾರತ ತಂಡದಲ್ಲಿ ಗಾಯಾಳುಗಳೆ ತುಂಬಿರುವಾಗ ಬಿಸಿಸಿಐ ಹೊಸ ಆಟಗಾರರ ಅನ್ವೇಷಣೆ ನಡೆಸಬೇಕು. ರಣಜಿ ಟ್ರೋಫಿ ಅದಕ್ಕೆ ಉತ್ತಮ ವೇದಿಕೆಯಾಗಿತ್ತು ನಿಲ್ಲಿಸಿದ್ದು ಸರಿಯಾದ ಕ್ರಮವಲ್ಲ ಎಂಬುದು ಕ್ರಿಕೆಟ್ ತಜ್ಞರವಾದವಾಗಿದೆ. 87 ವರ್ಷದ ಇತಿಹಾಸವಿರುವ ರಣಜಿ ಟ್ರೋಫಿ ಈ ಬಾರಿ ರದ್ದಾಗಿದ್ದು ಕ್ರಿಕೆಟ್ ಪ್ರಿಯರಿಗೂ ನಿರಾಶೆ ಮೂಡಿಸಿದೆ.