ರಾಜ್ಯದಲ್ಲಿ 38603 ಕೋವಿಡ್ ಹೊಸ ಪ್ರಕರಣ-476 ಮಂದಿ ಮರಣ

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್‌ ಹೊಸ ಪ್ರಕರಣಗಳ ಕೊಂಚ ಇಳಿಮುಖ ಅಂತದಲ್ಲಿದೆ. ಕಳೆದ 24 ಗಂಟೆಯ ಅವಧಿಯಲ್ಲಿ 38603 ಹೊಸ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, 476 ಮಂದಿ ಮರಣ ಹೊಂದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಧಿಕೃತವಾಗಿ ತಿಳಿಸಿದೆ.

ಇಂದು ಬಿಡುಗಡೆಗೊಂಡ ವರದಿಯ ಪ್ರಕಾರ ರಾಜ್ಯದಲ್ಲಿ 34,635 ಮಂದಿ ಕೋವಿಡ್‌ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ರಾಜ್ಯದಲ್ಲಿ ಇದುವರೆಗೆ ಒಟ್ಟಾರೆಯಾಗಿ 22,42,065 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. 16,16,092 ಕೋವಿಡ್‌ ಸೋಂಕಿತರು ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ. 6,03,639 ಸೋಂಕಿತರ ಸಕ್ರಿಯ ಪ್ರಕರಣಗಳು ಅಂದರೆ ಶೇ.39.70ರಷ್ಟು ಜಾಲ್ತಿಯಲ್ಲಿದ್ದು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ  ಎಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಇದುವರೆಗೆ ರಾಜ್ಯದಲ್ಲಿ 22,313 ಮಂದಿ ಮರಣ ಹೊಂದಿದ್ದಾರೆ.

ಬೆಂಗಳೂರಿನಲ್ಲಿ 13,338 ಹೊಸ ಪ್ರಕರಣಗಳು ದಾಖಲಾಗಿದ್ದು, 239 ಮಂದಿ ನಿಧನರಾಗಿದ್ದಾರೆ. 10,097 ಮಂದಿ ಸೋಂಕಿನಿಂದ ಗುಣಮುಖರಾಗಿ ಇಂದು ಬಿಡುಗಡೆ ಹೊಂದಿದ್ದಾರೆ. ನಗರದಲ್ಲಿ ಒಟ್ಟು 10,64,396  ಕೋವಿಡ್‌ ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 6,90,291 ಮಂದಿ ಗುಣಮುಖರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,64,382 ಸೋಂಕಿತರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಸಾವಿರಕ್ಕೂ ಹೆಚ್ಚಿನ ಕೋವಿಡ್‌ ಹೊಸ ಪ್ರಕರಣಗಳು ದಾಖಲಾದ ಜಿಲ್ಲೆಗಳ ವಿವರ.

ಬಳ್ಳಾರಿ –2322, ಬೆಳಗಾವಿ -1748, ಹಾಸನ-2324, ಮಂಡ್ಯ-1087, ಮೈಸೂರು-1980, ಶಿವಮೊಗ್ಗ-1322, ತುಮಕೂರು-1915, ಉತ್ತರ ಕನ್ನಡ-1288 ಆಗಿದೆ. ಉಳಿದ ಜಿಲ್ಲೆಗಳಲ್ಲಿ ಕೆಲವೆಡೆ ಸಾವಿರ ಸಮೀಪ ಹೊಸ ಪ್ರಕರಣಗಳು ಇದ್ದು, ಕೆಲವೆಡೆ ಐದು ನೂರಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿವೆ.

Donate Janashakthi Media

Leave a Reply

Your email address will not be published. Required fields are marked *