ಹಾಸನ: ಕಳೆದ ಒಂದು ತಿಂಗಳಿಂದಲೂ ಕೋವಿಡ್ ತನ್ನ ಆರ್ಭಟವನ್ನು ಮುಂದುವರೆಸಿದೆ, ಇಂತಹ ಸಂಧರ್ಭದಲ್ಲಿ ಜನರು ಕೂಡ ತತ್ತರಿಸಿ ಹೋಗಿದ್ದಾರೆ. ಈಗಾಗಲೆ ಸಾವು ನೋವುಗಳಿಂದ ಆಸ್ಪತ್ರೆಗಳಲ್ಲಿ ನಿಗದಿತ ದಾಖಲಾತಿ ಸಿಗದೆ, ಆಕ್ಸಿಜನ್ ಸಿಗದೆ ಬಹಳ ಸಂಕಷ್ಟಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಸಹಾಯರ್ಥವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಹಾಸನ ಜಿಲ್ಲೆಯ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ.) ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿ.ವೈ.ಎಫ್.ಐ.) ಸಂಘಟನೆಗಳ ನೇತೃತ್ವದಲ್ಲಿ ನಗರದ ಸರ್ಕಾರಿ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಸಂಘಟನೆಗಳ ಕಾರ್ಯಕರ್ತರು, ನಾಗರೀಕರು ಎಲ್ಲರು ಒಳಗೊಂಡಂತೆ ರಕ್ತದಾನವನ್ನು ಮಾಡಿದರು.
ಕೊರೊನಾ ಕಡಿಮೆಯಾದಂತೆ ಬೇರೆ ಕಾರಣಗಳಿಗೆ ಮತ್ತು ತುರ್ತು ಸಂದರ್ಭಗಳಲ್ಲಿ ರಕ್ತ ಬೇಕಾಗುತ್ತದೆ ಹಾಗಾಗಿ ನಾವು ಎಚ್ಚರದಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದೇವೆ. ಈಗಾಗಲೆ ಖಾಸಗೀ ಆಸ್ಪತ್ರೆಗಳ ಹಾವಳಿಯಿಂದ ಜನರಿಗೆ ಯಾವುದು ಸರಿಯಾದ ಕ್ರಮದಲ್ಲಿ ಮತ್ತು ದರದಲ್ಲಿ ಔಷಧಿಗಳು ಸಿಗುತ್ತಿಲ್ಲಾ, ಸರ್ಕಾರಗಳು ಕೂಡ ಕೈಕಟ್ಟಿ ಕುಳಿತಾಗಿದೆ ಹಾಗಾಗಿ ನಾವು ಸರ್ಕಾರಿ ಆಸ್ಪತ್ರೆಯಲ್ಲಿ ಬರುವ ಬಡ ಜನರಿಗಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದು ಉತ್ತಮ ಬೆಳವಣಿಗೆ ಎಂದು ಎಸ್‌ಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್ ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಜನ ರಕ್ತದಾನವನ್ನು ಮಾಡಿ ಜೀವ ಉಳಿಸುವ ಕೆಲಸಕ್ಕೆ ಮುಂದಾಗಲಿದ್ದಾರೆ ಎಂಬುದೆ ಎಸ್ಎಫ್‌ಐ – ಡಿವೈಎಫ್‌ಐ ಆಶಯವಾಗಿದೆ ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಎಂ ತಿಳಿಸಿದ್ದಾರೆ. ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್, ಮುಖಂಡರಾದ ವಾಸಣ್ಣ, ರಕ್ಷಿತ, ನಂದನ್, ಸ್ವರೂಪ್, ದಿವಾಕರ್ ಆಜಾಡ್ ಇನ್ನಿತರು ಉಪಸ್ಥಿತರಿದ್ದರು.