ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣ ಹರಡುವಿಕೆಯನ್ನು ತಡೆಗಟ್ಟಲು ಏಪ್ರಿಲ್ 27ರಿಂದ ಜಾರಿಯಲ್ಲಿರುವ ಲಾಕ್‌ಡೌನ್ ಕೆಲವು ಜಿಲ್ಲೆಗಳಲ್ಲಿ ಸಡಿಕೆಯಾಗಿದ್ದು, ಇನ್ನೂ ಕೆಲವು ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರೆದಿರುತ್ತದೆ. ಜೂನ್ 21ರಿಂದ ಎರಡನೇ ಹಂತದ ಸಡಿಲಿಕೆ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರಕಾರಕ್ಕೆ ತಾಂತ್ರಿಕಾ ಸಲಹಾ ಸಮಿತಿಯು ಹಸಿರು ನಿಶಾನೆ ತೋರಿದೆ.
ಈಗಾಗಲೇ 11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಗೊಂಡಿದ್ದು, ಜೂನ್ 14ರಿಂದ ಜಾರಿಗೆ ಬರುವಂತೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.
ಇದನ್ನು ಓದಿ: ಲಾಕ್‌ಡೌನ್ ನಂತರ ಶಾಲೆಗಳಿಗೆ ಶಿಕ್ಷಕರು ಹಾಜರಿಗೆ ಸೂಚನೆ: ಸಚಿವ ಎಸ್ ಸುರೇಶ್ ಕುಮಾರ್
ಈಗಾಗಲೇ ಮೊದಲೆ ಹಂತದ ಲಾಕ್‌ಡೌನ್ ತೆರವಿನಿಂದ ಬೆಂಗಳೂರು ನಗರದಿಂದ ವಲಸೆ ಹೋದ ಕಾರ್ಮಿಕರು ಮರಳಿ ಬರಲಾರಂಭಿಸಿದ್ದಾರೆ. ವಿಶೇಷವಾಗಿ ನಗರಗಳತ್ತ ಮುಖ ಮಾಡುತ್ತಿರುವ ಹಲವು ಕಾರ್ಮಿಕರು ತಮ್ಮ ದಿನನಿತ್ಯದ ಕೆಲಸಗಳು ಮತ್ತೆ ಶೀಘ್ರವಾಗಿ ಕಾರ್ಯಾರಂಭ ಮಾಡಲಿ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸುತ್ತಾ ನಗರಗಳತ್ತ ಧಾವಿಸುತ್ತಿದ್ದಾರೆ.
ಇದೀಗ ಜೂನ್ 21ರಂದು ಎರಡನೇ ಹಂತದಲ್ಲಿ ಮತ್ತಷ್ಟು ಕಾರ್ಯಚಟುವಟಿಕೆಗಳ ಪ್ರಕ್ರಿಯೆಯನ್ನು ಆರಂಭಸಲು ಅನುಮತಿ ನೀಡಲಾಗುತ್ತಿದೆ. ಹೀಗಾಗಿ ಯಾವುದಕ್ಕೆಲ್ಲಾ ಅನುಮತಿ ಇದೆ, ಯಾವುದಕ್ಕೆ ಇರುವುದಿಲ್ಲ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇದನ್ನು ಓದಿ: ಸೋಂಕಿನಿಂದ ಮೃತಪಟ್ಟ ವಯಸ್ಕರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ: ಸಿಎಂ ಯಡಿಯೂರಪ್ಪ
ಲಾಕ್‌ಡೌನ್ ತೆರವಿನೊಂದಿಗೆ ಕೊರೊನಾ ಸೋಂಕಿನಿಂದ ಜನರಿಗೆ ರಕ್ಷಣೆ ನೀಡುವುದರ ಬಗ್ಗೆಯೂ ಸರಕಾದ ಆದ್ಯತೆಯನ್ನು ನೀಡುತ್ತಿದೆ. ಹಂತ ಹಂತವಾಗಿ ಸಡಿಲಿಕೆ ಮಾಡಲು ಸರಕಾರ ಮುಂದಾಗಿದೆ.
ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ ಜೂನ್ 21 ರಿಂದ ಮಾಲ್, ಹೇರ್ ಕಟ್ ಶಾಪ್, ಹೋಟೆಲ್, ಚಿಕ್ಕಚಿಕ್ಕ ಮಾರುಕಟ್ಟೆ, ಮದುವೆ ಸಮಾರಂಭಕ್ಕೆ 50 ಜನರಿಗೆ ಅವಕಾಶ ನೀಡಲು ಅನುಮತಿ ನೀಡಿದೆ.
ಅಲ್ಲದೆ, ಅಂದಿನಿಂದ ರಾಜ್ಯದಲ್ಲಿ ಬಸ್ ಸಂಚಾರ ಆರಂಭವಾಗುವ ಸಾಧ್ಯತೆ ಇದ್ದು, ಶೇಕಡಾ 50ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚಾರವಾಗುವ ಸಾಧ್ಯತೆ ಇದೆ.
ಇದನ್ನು ಓದಿ: ಎಚ್‌ಎಎಲ್‌ನ ನೂರು ಕಾರ್ಮಿಕರನ್ನು ಬಲಿ ಪಡೆದ ಕೋವಿಡ್ – ನಾಲ್ಕು ಸಾವಿರ ಕಾರ್ಮಿಕರಲ್ಲಿ ಸೋಂಕು
ಚಿನ್ನದಂಗಡಿ, ಬಟ್ಟೆ ಅಂಗಡಿ, ಸೇರಿದಂತೆ ಎಲ್ಲಾ ಬಗೆಯ ವಾಣಿಜ್ಯ ಮಳಿಗೆಗಳನ್ನು ದಿನಕ್ಕೆ ಎಂಟು ಗಂಟೆಗಳ ಕಾಲ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡಲಾಗುವುದು. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಶೇಕಡಾ 50 ರಷ್ಟು ಗ್ರಾಹಕರಿಗೆ ಪ್ರವೇಶ ಅವಕಾಶ ನೀಡುವ ಸಾಧ್ಯತೆಗಳಿವೆ.
ತಾಂತ್ರಿಕ ಸಲಹಾ ಸಮಿತಿ ನೀಡಿರುವ ಅಭಿಪ್ರಾಯದಂತೆ ಥಿಯೇಟರ್, ಜಿಮ್, ಸ್ವಿಮ್ಮಿಂಗ್ ಪೂಲ್, ಪಬ್, ಬಾರ್, ಕ್ರೀಡಾಂಗಣಗಳು ಎಂದಿನಂತೆ ಮುಚ್ಚಲ್ಪಟ್ಟಿರುತ್ತವೆ. ಇವುಗಳನ್ನು ಮೂರನೇ ಹಂತದಲ್ಲಿ ತೆರವುಗೊಳಿಸುವ ನಿರೀಕ್ಷೆ ಇದೆ.