ಪತ್ತನಂತಿಟ್ಟ: 85 ವರ್ಷದ ವೃದ್ಧೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಸಂಬಂಧ, ವಿಚಾರಣೆ ಶುರುವಾಗಿ 12ನೇ ದಿನಕ್ಕೆ ಕೋರ್ಟ್ ತೀರ್ಪು ಬಂದಿದೆ. ಪತ್ತನಂತಿಟ್ಟದ ಫಾಸ್ಟ್‌ಟ್ರ್ಯಾಕ್ ವಿಶೇಷ ನ್ಯಾಯಾಲಯವು ಹೊಸ ಇತಿಹಾಸ ಸೃಷ್ಟಿಸಿದೆ. ಅತ್ಯಾಚಾರ
ಆರೋಪಿ ಅರುವಪ್ಪುಲಂನ ನಿವಾಸಿ ಶಿವದಾಸನ್‌ಗೆ 15 ವರ್ಷ ಕಠಿಣ ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಕೇರಳದ ನ್ಯಾಯಾಂಗ ಇತಿಹಾಸದಲ್ಲಿ ಇದೊಂದು ಹೊಸ ದಾಖಲೆ ಎಂದೇ ಹೇಳಲಾಗಿದೆ. ಫಾಸ್ಟ್‌ಟ್ರ್ಯಾಕ್ ವಿಶೇಷ ನ್ಯಾಯಾಲಯ ಎಂಬ ಹೆಸರನ್ನು ಇಲ್ಲಿ ಸಾರ್ಥಕಗೊಳಿಸಲಾಗಿದೆ. ಅತ್ಯಾಚಾರ
ಇದನ್ನೂ ಓದಿ: ಬಿಬಿಎಂಪಿ ಬಜೆಟ್ 2025| ಹಾಲಿ ಬಜೆಟ್‌ನಲ್ಲಿ 19.927 ಕೋಟಿ ರೂ ಯೋಜನೆ ಘೋಷಣೆ
ಬಹಳ ದಿನಗಳವರೆಗೆ ನಡೆಯಬಹುದಾಗಿದ್ದ ವಿಚಾರಣೆಯನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಿ – ನ್ಯಾಯಾಧೀಶ ಡೋಣಿ ಥಾಮಸ್ ವರ್ಗೀಸ್ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಭಾಗದಿಂದ 21 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದೂ ಸೇರಿದಂತೆ ಎಲ್ಲಾ ಕ್ರಮಗಳು ಅತಿವೇಗವಾಗಿ ನಡೆದವು.
85 ವರ್ಷದ ವೃದ್ಧೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರು ದಾಖಲಾಗಿತ್ತು. ಕೊನ್ನಿ ಪೊಲೀಸರು 2022ರಲ್ಲಿ ಪ್ರಕರಣ ದಾಖಲಿಸಿದ್ದರು.
ಅರುವಪ್ಪುಲಂ ನಿವಾಸಿ ಶಿವದಾಸನ್ – ಮೇ 10 ರಂದು ಹಗಲಿನಲ್ಲಿ ಮನೆಗೆ ನುಗ್ಗಿ 85 ವರ್ಷದ ವೃದ್ಧೆಯ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಅಂಗನವಾಡಿ ನೌಕರರ ಬಳಿ ವೃದ್ಧೆ ಈ ವಿಷಯವನ್ನು ಬಹಿರಂಗಪಡಿಸಿದ್ದರು. ನಂತರ ಕೊನ್ನಿ ಪೊಲೀಸರು ಮಾಹಿತಿ ತಿಳಿದು ಪ್ರಕರಣ ದಾಖಲಿಸಿಕೊಂಡರು.
ಇದನ್ನೂ ನೋಡಿ: ಮಂಗಳೂರು | ಪೌರ ಕಾರ್ಮಿಕರೊಂದಿಗೆ ಸಾಮೂಹಿಕ ಇಫ್ತಾರ್ ಕೂಟ Janashakthi Media