ಬೆಂಗಳೂರು: ದೇಶವೇ ಬೆಚ್ಚಿಬೀಳಿಸುವಂತಹ ಸರಣಿ ಅತ್ಯಾಚಾರ ಎಸಗಿ, ಅವುಗಳ ವಿಡಿಯೋ ಚಿತ್ರೀಕರಿಸಿಕೊಂಡು, ಫೋಟೋಗಳನ್ನು ಇಟ್ಟುಕೊಂಡಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ರಾಸ ಲೀಲೆ ಪ್ರಕರಣ ಕಳೆದ ಒಂದು ವರ್ಷಗಳಿಂದ ಬೆಂಗಳೂರಿನ ಜನಪ್ರತಿನಿದಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ದೋಷಿ
ಅಂತಿಮವಾಗಿ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಘೋಷಿಸಬೇಕಿದೆ. ನ್ಯಾಯಾಲಯದ ಈ ತೀರ್ಪನ್ನು ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್‌ವಾದಿ ಸಿಪಿಐಎಂ ಹಾಸನ ಜಿಲ್ಲಾ ಸಮಿತಿಯು ಸ್ವಾಗತಿಸುತ್ತದೆ ಮತ್ತು ಗರಿಷ್ಟ ಪ್ರಮಾಣದ ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್. ನವೀನ್ ಕುಮಾರ್ ಹೇಳಿದ್ದಾರೆ. ದೋಷಿ
2024 ರ ಮಾರ್ಚ್ ತಿಂಗಳಲ್ಲಿ ಈ ಪ್ರಕರಣ ಹೊರಬಂದಾಗಿನಿಂದ ಸಿಪಿಐಎಂ ಸೇರಿದಂತೆ ಹಾಸನ ಮತ್ತು ರಾಜ್ಯದ ಎಲ್ಲ ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ಹಲವು ಹಂತದ ಬೀದಿ ಹೋರಾಟಗಳು ಮತ್ತು ಕಾನೂನು ಹೋರಾಟವನ್ನು ನಡೆಸಿಕೊಂಡು ಬಂದಿದೆ. ದೋಷಿ
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ನಾಲ್ವರ ಅಮಾನತು ರದ್ದು; ಸ್ಥಳ ನಿಯೋಜನೆ
2024 ಮೇ 30 ರಂದು ಹಾಸನ ನಗರದಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಸಂಘಟಿಸಿ ಪ್ರಜ್ವಲ್ ರೇವಣ್ಣನನ್ನು ಬಂದಿಸಿಸಲು ಮತ್ತು ಮಹಿಳೆಯರ ಘನತೆಯನ್ನು ಎತ್ತಿಹಿಹಿಡಿಯಲು ಆಗ್ರಹಿಸಲಾಗಿತ್ತು. ಈ ಸಮಾವೇಶದಲ್ಲಿ ಸಿಪಿಐಎಂ ಪೊಲಿಟ್ ಬ್ಯೂರೋ ಸದ್ಯರಾದ ಸುಭಾಷಿಣಿ ಅಲಿಯವರು ಭಾಗವಹಿಸಿದ್ದರು.
ಈ ತೀರ್ಪು ಮಹಿಳೆಯರನ್ನು ಬೋಗದ ಸರಕಾಗಿ ನೋಡುವ ಗಂಡಾಳ್ವಿಕೆಯ ಸಮಾಜಕ್ಕೆ ತಕ್ಕ ಪಾಠ ಕಲಿಸುವಂತಿದೆ. ಸಂತ್ರಸ್ತರು ಧೈರ್ಯವಾಗಿ ಎದುರಿಸಿದರೆ ನ್ಯಾಯ ಸಿಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮನೆಗೆಲಸದ ಮಹಿಳೆಯ ಮೇಲೆ ನಡೆದ ಅತ್ಯಾಚಾರದ ಒಂದು ಪ್ರಕರಣದಲ್ಲಿ ಮಾತ್ರ ಈಗ ತೀರ್ಪು ಹೊರಬಂದಿದ್ದು ಉಳಿದ ಪ್ರಕರಣಗಳ ತೀರ್ಪು ಶೀಘ್ರವಾಗಿ ಹೊರಬಂದು ಸಂತ್ರಸ್ತರಿಗೆ ನ್ಯಾಯ ಸಿಗಬೇಕಿದೆ.
ಎಷ್ಟೇ ಬೆದರಿಕೆ ಒತ್ತಡಗಳಿದ್ದರೂ ಕೂಡ ಹೆದರದೆ ಎಸ್.ಐ.ಟಿ ಮತ್ತು ನ್ಯಾಯಾಲಯದಲ್ಲಿ ಧೈರ್ಯದಿಂದ ಹೇಳಿಕೆ ಮತ್ತು ಸಾಕ್ಷ್ಯ ನೀಡಿದ ಸಂತ್ರಸ್ತರು ಮತ್ತು ಸಾಕ್ಷಿದಾರರನ್ನು ಅಬಿನಂದಿಸುತ್ತದೆ. ಹಾಗೂ ಈ ಪ್ರಕರಣವನ್ನು ಸಮರ್ಥವಾಗಿ ತನಿಖೆ ಮಾಡಿ ಪ್ರಕರಣವನ್ನು ನ್ಯಾಯಾಲಯದ ಮುಂದೆ ಸಮರ್ಥವಾಗಿ ಸಂಸ್ತಸ್ತರ ಪರವಾಗಿ ವಾದ ಮತ್ತು ಸಾಕ್ಷಿ ಮಂಡಿಸಿದ ಎಸ್.ಐ.ಟಿ. ಅಧಿಕಾರಿಗಳಿಗೆ ಹಾಗೂ ಸಂತ್ರಸ್ತರ ಪರವಾಗಿ ನಿಂತ ಹಾಸನ ಜಿಲ್ಲೆಯ ಎಲ್ಲಾ ಜನಪರ ಚಳುವಳಿಗಳು ಮತ್ತು ನಾಗರಿಕರಿಗೆ ಧನ್ಯವಾದಗಳು
ಇದರ ಜೊತೆಗೆ ಜಿಲ್ಲೆಯ ಮಹಿಳೆಯರ ಘನತೆಯನ್ನು ಕುಂದಿಸುವಂತೆ ಅಶ್ಲೀಲ ವಿಡಿಯೋಗಳನ್ನು ಪೆನ್ ಡ್ರೈವ್ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿದ ಮತ್ತು ಇದರ ಹಿಂದೆ ಕೆಲಸಮಾಡಿದವರಿಗೂ ಶಿಕ್ಷೆಯಾಗಬೇಕೆಂದು ಸಿಪಿಐಎಂ ಹಾಸನ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.
ಇದನ್ನೂ ನೋಡಿ: ಧರ್ಮಸ್ಥಳದಲ್ಲಿನ ಕೊಲೆ ಅತ್ಯಾಚಾರಗಳ ಹಿಂದೆ ಇರುವವರು ಯಾರು? ಸತ್ಯ ಹೊರ ಬರಲಿ…
