ಅಖ್ಲಾಕ್‍ ದೊಂಬಿಹತ್ಯೆ ಪ್ರಕರಣದಲ್ಲಿ ಯುಪಿ ಸರಕಾರಕ್ಕೆ ನ್ಯಾಯಾಲಯದ ಕಪಾಳಮೋಕ್ಷ, ನ್ಯಾಯದತ್ತ ಒಂದು ದೊಡ್ಡ ಹೆಜ್ಜೆ- ಬೃಂದಾ ಕಾರಟ್

ಉತ್ತರಪ್ರದೇಶ: ರಾಜ್ಯದ ದಾದ್ರಿ ಎಂಬ ಹಳ್ಳಿಯಲ್ಲಿ ಹತ್ತುವರ್ಷಗಳ ಹಿಂದೆ ಸಪ್ಟಂಬರ್ 2015ರಲ್ಲಿ ನಡೆದ ಮಹಮ್ಮದ್‍ ಅಖ್ಲಾಕ್ ದೊಂಬಿ ಚಿತ್ರವಧೆ ಪ್ರಕರಣವನ್ನು ಕ್ರಿಮಿನಲ್‍ ಪ್ರೊಸಿಜರ್ ಕೋಡ್‍ನ ಸೆಕ್ಷನ್‍ 321ರ ಅಡಿಯಲ್ಲಿ ಕೈಬಿಡಬೇಕು ಎಂಬ ಉತ್ತರಪ್ರದೇಶದ ಸರಕಾರದ ಅರ್ಜಿಯನ್ನು ಡಿಸೆಂಬರ್ 23ರಂದು ಗ್ರೇಟರ್ ನೋಯ್ಡಾದ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ ಹಾಗೂ ಇದೊಂದು ಬಹು ಮಹತ್ವದ ಮೊಕದ್ದಮೆಯಾಗಿದ್ದು ಅದರ ವಿಚಾರಣೆ ದೈನಂದಿನವಾಗಿ ಮುಂದುವರೆಯಬೇಕು ಮತ್ತು ಸಾಕ್ಷ್ಯದ ರಕ್ಷಣೆ ಮಾಡಬೇಕು ಎಂದು ನಿರ್ದೇಶನವನ್ನು ನೀಡಿದೆ. ದೊಂಬಿಹತ್ಯೆ

ಈ ತೀರ್ಪು ನ್ಯಾಯದತ್ತ ಒಂದು ದೊಡ್ಡ ಹೆಜ್ಜೆ , ನ್ಯಾಯಪ್ರಕ್ರಿಯೆಯನ್ನು ದುರ್ಬಲಗೊಳಿಸುವ ಉತ್ತರಪ್ರದೇಶದ ಡಬಲ್‍ ಇಂಜಿನ್‍ ಸರಕಾರದ ಕಪಾಳಕ್ಕೆ ಒಂದು  ದೊಡ್ಡ ಏಟು ಎಂದು ಹಿರಿಯ ಸಿಪಿಐ(ಎಂ) ಮುಖಂಡರೂ, ಮಾಜಿ ರಾಜ್ಯ ಸಭಾ ಸದಸ್ಯರೂ ಆದ ಬೃಂದಾ ಕಾರಟ್‍ ನ್ಯಾಯಾಲಯದ ಆವರಣದಲ್ಲಿ ತೀರ್ಪಿಗೆ ಸ್ಪಂದಿಸುತ್ತ ಟಿಪ್ಪಣಿ ಮಾಡಿದ್ದಾರೆ.

ಈ ಪ್ರಕರಣದಲ್ಲಿ  ಲಾಠಿಗಳನ್ನು ಬಳಸಲಾಗಿತ್ತೇ ವಿನಹ  ಬಂದೂಕುಗಳನ್ನಲ್ಲ, ಬಲಿಯಾದವರು ಮತ್ತು ಪೀಡಿತರೊಂದಿಗೆ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲ, ಮೊಕದ್ದಮೆಯನ್ನು ಮುಂದುವರಿಸುವುದು ಕೋಮು ಅಸಾಮರಸ್ಯಕ್ಕೆ ಕಾರಣವಾಗುತ್ತದೆ ಇತ್ಯಾದಿ ಅತ್ಯಂತ ಅಸಮರ್ಥನೀಯ ಆಧಾರದ ಮೇಲೆ ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಉತ್ತರಪ್ರದೇಶ  ಸರಕಾರ ಕೈಗೊಂಡಿದೆ ಎಂಬುದು ಒಂದು ವಿಷಯವಾದರೆ, ಕೊಲೆ, ಕೊಲೆ ಯತ್ನ ಮತ್ತು ದೊಂಬಿಚಿತ್ರವಧೆಯ ಒಂದು ಪ್ರಕರಣವನ್ನು ಹಿಂತೆಗೆದುಕೊಳ್ಳಲು ರಾಜಕೀಯ ಪ್ರೇರಿತ ಕ್ರಮವನ್ನು ಸರಕಾರ  ತೆಗೆದುಕೊಳ್ಳುತ್ತಿದ್ದರೆ, ಅಂತಹ ಕ್ರಮದ ವಿರುದ್ಧ ಸರ್ಕಾರಕ್ಕೆ ಬುದ್ಧಿ ಹೇಳುವ ಬದಲು ಅದಕ್ಕೆ ಅನುಮತಿ ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತ ಬೃಂದಾಕಾರಟ್‍ ಡಿಸೆಂಬರ್ 13ರಂದು ರಾಷ್ಟ್ರಪತಿಗಳಿಗೆ ಪತ್ರ ಬರೆದು ರಾಜ್ಯಪಾಲರು ಅನುಮತಿ ನೀಡಿರುವುದನ್ನು ಹಿಂತೆಗೆದುಕೊಳ್ಳುವಂತೆ ಅವರಿಗೆ  ನಿರ್ದೇಶಿಸಬೇಕೆಂದು ಕೋರಿ ಪತ್ರ ಬರೆದಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ: ಮತ್ತೊಂದು ಗರ್ಭ ಹುಡುಕುವ ಮುನ್ನ…

ಒಂದು ಗಂಭೀರ ದೊಂಬಿಹತ್ಯೆಯ, ಬಡಿದು ಸಾಯಿಸಿದ ಕೊಲೆಗಡುಕರ ಮೇಲಿನ ಮೊಕದ್ದಮೆಯನ್ನು ಹಿಂತೆಗೆದುಕೊಳ್ಳಬೇಕು ಎನ್ನುವ ಉತ್ತರಪ್ರದೇಶ ಸರಕಾರದ ಕಾನೂನುಬಾಹಿರ ಅಫಿಡವಿಟನ್ನು ರದ್ದು ಮಾಡುವ ಮೂಲಕ ನ್ಯಾಯಾಲಯ ನ್ಯಾಯದ ಮತ್ತು ಸಂವಿಧಾನದ ಬಾವುಟವನ್ನು ಎತ್ತರಕ್ಕೆ ಹಾರಿಸಿದೆ, ಇ ದನ್ನುಸ್ವಾಗತಿಸುತ್ತೇವೆ, ಇದಕ್ಕೆ ನಮ್ಮ ಕೃತಜ್ಞತೆಗಳು ಎಂದು ಬೃಂದಾ ಅವರು ಹೇಳಿದ್ದಾರೆ.

ಇದು ಈ ಮೊಕದ್ದಮೆಯನ್ನು ಮುಂದೆ ಒಯ್ಯಲು ನಿರಾಕರಿಸಿದ,ಇದನ್ನು ಹಿಂತೆಗೆದುಕೊಳ್ಳಲು ಮುಂದಾದ ಉತ್ತರಪ್ರದೇಶದ ಡಬಲ್‍ ಇಂಜಿನ್ ‍ಸರಕಾರಕ್ಕೆ ಆಗಿರುವ  ದೊಡ್ಡ ಕಪಾಳಮೋಕ್ಷ. ಇದರ ದನಿ ಇಡೀ ದೇಶದಲ್ಲಿ ಮೊಳಗುತ್ತದೆ. ಏಕೆಂದರೆ ದೇಶದ ಇತರ ಎಲ್ಲ ಡಬಲ್‍ ಇಂಜಿನ್‍ ಸರಕಾರಗಳೂ ಅಲ್ಪಸಂಖ್ಯಾತರ ದೊಂಬಿ ಹತ್ಯೆಯ, ಬಡಿದು ಸಾಯಿಸುವ ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿವೆ. ಬಿಲ್ಕಿಸ್ ‍ಬಾನು ಪ್ರಕರಣದಲ್ಲಿ ಇಂತಹ ಇದು ಪ್ರಯತ್ನ ನಡೆಯಿತು.

ಉತ್ತರಪ್ರದೇಶದ ಸರಕಾರವಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಚಾರಣೆಯ ಪ್ರಕ್ರಿಯೆಯಲ್ಲಿರುವ ಮೊಕದ್ದಮೆಯನ್ನೇ ಹಿಂತೆಗೆದುಕೊಳ್ಳಲು ಪ್ರಯತ್ನಿಸಿದೆ. ಜಿಲ್ಲಾನ್ಯಾಯಾಲಯದ  ತೀರ್ಪು ಇದಕ್ಕೆ ತಡೆ ಹಾಕಿದೆ, ಇದು ಭಾರತ, ಇಲ್ಲಿ ಹಿಂದುಸ್ಥಾನದ ಸಂವಿಧಾನ ಮಾತು ನಡೆಯುತ್ತದೆಯೇ ವಿನಹ ಸಂಘ ಪರಿವಾರದ ದಾದಾಗಿರಿಯಲ್ಲ  ಎಂಬ ಸಂದೇಶ ನೀಡಲಾಗಿದೆ ಎಂದು ಮುಂದುವರೆದು ಅವರು ಟಿಪ್ಪಣಿ ಮಾಡಿದ್ದಾರೆ.

ಇದನ್ನೂ ನೋಡಿ: ಹಾವೇರಿ | ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ ವಿದ್ಯಾರ್ಥಿನಿಯರು ಅಸ್ವಸ್ಥ Janashakthi Media

Donate Janashakthi Media

Leave a Reply

Your email address will not be published. Required fields are marked *